Advertisement

ಕೋವಿಡ್ ನಕಲಿ ಲಸಿಕೆ ವದಂತಿ: ಅಸಲಿ ಲಸಿಕೆಯನ್ನು ಪತ್ತೆ ಮಾಡುವ ವಿಧಾನ ಇಲ್ಲಿದೆ

09:15 AM Sep 06, 2021 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ ನಕಲಿ ಲಸಿಕೆಗಳನ್ನು ನೀಡಲಾಗುತ್ತಿದೆ ಎಂಬ ವದಂತಿ ವ್ಯಾಪಕವಾಗಿ ಹರಡಿದೆ. ಹಾಗಾಗಿ,ಕೇಂದ್ರ ಸರ್ಕಾರ ನೈಜ ಲಸಿಕೆಗಳಿಗೆ ಇರುವ ವೈಶಿಷ್ಟ್ಯತೆಗಳನ್ನು ಪ್ರಕಟಿಸಿದ್ದು, ಇವು ನಕಲಿಗಳನ್ನು ತಡೆಯಲು ಸಹಕಾರಿಯಾಗಿವೆ.

Advertisement

ಕೊವಿಶೀಲ್ಡ್‌

*ಲಸಿಕೆ ಬಾಟಲಿ ಮೇಲಿನ ಲೇಬಲ್‌ ಗಾಢ ಹಸಿರು ಬಣ್ಣದ್ದಾಗಿರುತ್ತದೆ.

*ಬಾಟಲಿ ಮೇಲಿನ ಅಲ್ಯೂಮಿನಿಯಂ ಕ್ಯಾಪ್‌ನ ಫ್ಲಿಪ್‌ ಗಾಢ ಹಸಿರು ಬಣ್ಣದ್ದಾಗಿರುತ್ತದೆ.

*ವಿಶೇಷ ಬಿಳಿ ಬಣ್ಣದ ಶಾಯಿಯಿಂದ ಅಕ್ಷರಗಳನ್ನು ಪ್ರಿಂಟ್‌ ಮಾಡಲಾಗಿರುತ್ತದೆ.

Advertisement

*ಎಸ್‌ಐಐ ಲೋಗೋವನ್ನು ಸರಿಯಾದ ಕೋನದಲ್ಲಿ ಪ್ರಿಂಟ್‌ ಮಾಡಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಇರುವವರು ಮಾತ್ರ ಇದನ್ನು ಗುರುತಿಸಬಲ್ಲರು.

*ಲೇಬಲ್‌ ಅನ್ನು ಒಂದು ಕೋನದಿಂದ ನೋಡಿದಾಗ ಅಕ್ಷರಗಳ ಬ್ಯಾಕ್‌ ಗ್ರೌಂಡ್‌ನ‌ಲ್ಲಿ ಜೇನುಗೂಡಿನ ಇಮೇಜ್‌ ಇರುವುದು ಕಾಣುತ್ತದೆ.

ಇದನ್ನೂ ಓದಿ:ಹೊಸ ವೀಸಾ ಪ್ರಕಟಿಸಿದ ಯುಎಇ

ಕೊವ್ಯಾಕ್ಸಿನ್‌

*ಬಾಟಲಿಯ ಮೇಲೆ ಹೆಲಿಕ್ಸ್‌ ಮಾದರಿಯ ಲೋಗೋ ಇದ್ದು, ಅದು ಅಲ್ಟ್ರಾವಯಲೆಟ್‌ ಬೆಳಕಿನಲ್ಲಿ ಮಾತ್ರಕಾಣುತ್ತದೆ.

*ಲೇಬರ್‌ನಲ್ಲಿ ಗುಪ್ತವಾಗಿ ಚುಕ್ಕಿಗಳಿಂದ ಕೊವ್ಯಾಕ್ಸಿನ್‌ ಎಂಬ ಇಂಗ್ಲೀಷ್‌ ಪದವಿದೆ.

*ಕೊವ್ಯಾಕ್ಸಿನ್‌ ಎಂಬ ಅಕ್ಷರಗಳಿಗೆ ಹ್ಯಾಲೋಗ್ರಾಫಿಕ್‌ ಎಫೆಕ್ಟ್ ನೀಡಲಾಗಿದೆ.

ಸ್ಪುತ್ನಿಕ್‌

*ಇವು ವಿದೇಶಗಳ ಎರಡು ಸಂಸ್ಥೆಗಳಿಂದ ಆಮದು ಮಾಡಿಕೊಂಡಿರುವುದರಿಂದ ಇವುಗಳ ಮೇಲೆ ಎರಡು ರೀತಿಯ ಲೇಬಲ್‌ಗ‌ಳನ್ನು ಕಾಣಬಹುದು. ಲೇಬಲ್‌ ಮೇಲಿನ ಮಾಹಿತಿ ಮತ್ತು ಅಕ್ಷರಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಆದರೆ, ತಯಾರಕರ ಹೆಸರು ಮಾತ್ರ ಬೇರೆ ಇರುತ್ತದೆ.

*ಐದು ಲಸಿಕೆ ಬಾಟಲಿಗಳಿರುವ ಪ್ಯಾಕ್‌ ಆಗಿದ್ದರೆ, ಪ್ಯಾಕ್‌ನ ಮೇಲೆ ಮುಂದೆ ಹಾಗೂ ಹಿಂದೆ ಇಂಗ್ಲೀಷ್‌ ಲೇಬಲ್‌ ಇರುತ್ತದೆ. ಒಳಗಿರುವ ಲಸಿಕೆ ಬಾಟಲಿಯ ಮೇಲೆ ರಷ್ಯನ್‌ ಭಾಷೆಯ ಲೇಬಲ್‌ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next