Advertisement

ಸ್ಲಿಂ ಆಗೋದಕ್ಕೆ ಏನ್‌ ಮಾಡ್ಬೇಕು..?

11:04 AM Aug 19, 2019 | keerthan |

ಸ್ಲಿಂ ಅಗ್ಬೇಕು ಅಂತ ಬಯಸಿ ಆಹಾರದಲ್ಲಿ ನಿಯಂತ್ರಣ ಹೊಂದುವ ಅಥವಾ ರಾತ್ರಿ ಆಹಾರ ಸೇವಿಸದೇ ಇರುವ ಹವ್ಯಾಸವನ್ನು ಬೆಳೆಸಿಕೊಂಡಿದ್ದೀರಾ. ಹಾಗಾದರೆ ಇಂದೇ ಆ ಹವ್ಯಾಸವನ್ನು ಬಿಟ್ಟುಬಿಡಿ. ಏಕೆಂದರೆ ಇದರಿಂದಾಗಿ ನಾವು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾದ ಪ್ರಮೇಯವೂ ಬರಬಹುದು. ಹಾಗಾಗಿ ನಾವು ಮಾಡಬೇಕಾಗಿರುವುದು ಏನು, ತೂಕ ಇಳಿಕೆಗೆ ಸರಿಯಾದ ಕ್ರಮ ಯಾವುದು ಎಂಬ ಹಾದಿ ಹುಡುಕುತ್ತಿದ್ದೀರಾ. ಇದಕ್ಕೆ ಉತ್ತರ ನಮ್ಮ ಬಳಿಯೇ ಇದೆ.

Advertisement

ಹೆಚ್ಚು ಹಣ ವ್ಯಯ ಮಾಡದೆ, ದಿನ ನಿತ್ಯದ ಜೀವನದಲ್ಲಿ ನಾವು ವ್ಯಾಯಾಮ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡೆವು ಎಂದಾದಲ್ಲಿ ನಮ್ಮ ದೇಹದಲ್ಲಿ ತುಂಬುವ ಕೊಬ್ಬನ್ನು ಕರಗಿಸಿ, ಸ್ಲಿಂ ಆ್ಯಂಡ್‌ ಫೈನ್‌ ಅಗುವುದು ಸಾಧ್ಯ.

ನಮ್ಮ ಪ್ರತಿ ಬೆಳಗಿನ ಆರಂಭವೂ ವ್ಯಾಯಾಮ ಮಾಡುವುದರ ಜತೆಗೆ ಆದರೆ ನಮ್ಮ ದೇಹ ಹೆಚ್ಚು ಸದೃಢವಾಗುವುದಕ್ಕೆ ಸಾಧ್ಯವಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಂದರ್ಭದಲ್ಲಿ ನಮ್ಮ ದೇಹವನ್ನು ಹೆಚ್ಚು ದಂಡನೆಗೆ ಗುರಿಪಡಿಸಿಕೊಂಡೆವು ಎಂದಾದಲ್ಲಿ ನಮ್ಮ ದೇಹದಲ್ಲಿನ ರಕ್ತ ಪರಿಚಲನೆ ಸರಾಗವಾಗಿ ನಡೆಯುವುದು ಸಾಧ್ಯವಾಗುತ್ತದೆ. ಅದರ ಜತೆಗೆ ಪಚನ ಕ್ರಿಯೆಯ ಮೇಲೆಯೂ ಇದು ಸತ್ಪರಿಣಾಮವನ್ನು ಬೀರುತ್ತದೆ. ನಮ್ಮ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸ್ಥಿರತೆಯ ಮೇಲೆಯೂ ವ್ಯಾಯಾಮ ಒಳ್ಳೆಯ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಬೇಡ.

ಇನ್ನು ನಾವು ಸೇವಿಸುವ ಆಹಾರ ಕ್ರಮದ ಮೇಲೆಯೂ ಹಿಡಿತವನ್ನು ಸಾಧಿಸುವುದು ತೀರಾ ಮುಖ್ಯ. ಸಿಕ್ಕಿ ಸಿಕ್ಕಿದ್ದೆಲ್ಲವನ್ನೂ ತಿಂದು ನಮ್ಮ ಆರೋಗ್ಯವನ್ನು ಹಾಳುಗೆಡಿಸಿಕೊಳ್ಳುವ ಬದಲು, ಏನಾದರೂ ಅರೋಗ್ಯಕರ ಅಂಶಗಳನ್ನು ಹೆಚ್ಚು ಹೊಂದಿರುವಂತಹ ತಿನಿಸುಗಳನ್ನು ಸೇವಿಸುವತ್ತ ಗಮನ ಹರಿಸಿದೆವು ಎಂದಾದಲ್ಲಿ ನಮ್ಮ ದೇಹ, ಮನಸ್ಸುಗಳೆರಡೂ ಸದಾ ಚೈತನ್ಯದಿಂದಿರುವುದು ಸಾಧ್ಯ. ಆದಷ್ಟು ಮಟ್ಟಿಗೆ ಜಂಕ್‌ ಫ‌ುಡ್‌ಗಳಿಂದ ದೂರವಿದ್ದರೆ ನಮ್ಮ ದೇಹದಲ್ಲಿ ಕೊಬ್ಬಿನಾಂಶ ಸಮಗ್ರಹವಾಗುವುದನ್ನು ತಡೆಯುವುದು ಸಾಧ್ಯ. ಜತೆಗೆ ಮುಖ್ಯವಾಗಿ ಅಗಾಗ್ಗೆ ನೀರು ಕುಡಿಯುವುದು ಸಹ ದೇಹವನ್ನು ಫಿಟ್‌ ಆ್ಯಂಡ್‌ ಫೈನ್‌ ಆಗಿ ಇಟ್ಟುಕೊಳ್ಳುವುದಕ್ಕೆ ಪೂರಕ.
ಇವಿಷ್ಟು ಕ್ರಮ ನಮ್ಮ ಜೀವನ ಶೈಲಿಯ ರೂಢಿಯೊಳಗೆ ಸೇರಿ ಬಿಟ್ಟರೆ ನಮ್ಮ ಫಿಟ್‌ನೆಸ್‌ಗೆ ಇನ್ಯಾವುದರ ಅಗತ್ಯವೂ ಬೇಕಾಗಿಲ್ಲ. ಅಳವಡಿಸಿ ನೋಡಿ.

– ಭುವನ

Advertisement
Advertisement

Udayavani is now on Telegram. Click here to join our channel and stay updated with the latest news.

Next