Advertisement

ಸುಶಾಂತ್‌ಗೂ ಬ್ಲ್ಯೂಟಿಕ್‌: ಮಸ್ಕ್ ಸುಳ್ಳಾಡುತ್ತಿದ್ದಾರಾ?

07:41 PM Apr 28, 2023 | Team Udayavani |

ನವದೆಹಲಿ: ಬ್ಲ್ಯೂಟಿಕ್‌ ಬದಲಾವಣೆ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಗೊಂದಲ ಸೃಷ್ಟಿಸಿರುವ ಟ್ವಿಟರ್‌, ಇದೀಗ ದಿವಂಗತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ (ಎಸ್‌ಎಸ್‌ಆರ್‌ ) ಅವರ ಖಾತೆಗೆ ಬ್ಲ್ಯೂಟಿಕ್‌ ನೀಡುವ ಎಡವಟ್ಟು ಮಾಡಿದೆ.

Advertisement

ಈ ಸಂಬಂಧಿಸಿದಂತೆ ಭಾರತದ ಮಾಜಿ ಟ್ವಿಟರ್‌ ಮುಖ್ಯಸ್ಥರಾದ ಮನೀಷ್‌ ಮಹೇಶ್ವರಿ, ಟ್ವಿಟರ್‌ ಮಾಲೀಕ ಎಲಾನ್‌ ಮಸ್ಕ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ, ನ್ಯೂ ವೆರಿಫಿಕೇಶನ್‌ ಹೆಸರಲ್ಲಿ ಮಸ್ಕ್ ಜನರಿಗೆ ಸುಳ್ಳು ಹೇಳುತ್ತಿದ್ದಾರೆಂದು ಆರೋಪಿಸಿದ್ದಾರೆ.

ಈ ಕುರಿತು ಮನೀಷ್‌ ಟ್ವೀಟ್‌ ಮಾಡಿ, “ಎಸ್‌ಎಸ್‌ಆರ್‌ ಖಾತೆಗೆ ಬ್ಲೂéಟಿಕ್‌ ದೊರೆತಿದ್ದು ಹೇಗೆ ? ಮೊಬೈಲ್‌ ನಂಬರ್‌ ವೆರಿಫಿಕೇಶನ್‌ ಆದ ಬಳಿಕವಷ್ಟೇ ಬ್ಲ್ಯೂಟಿಕ್‌ ಸಿಗುವುದಲ್ಲವೇ? ಇದರರ್ಥ ಒಂದು ಹೊಸ ವೆರಿಫಿಕೇಶನ್‌ ಹೆಸರಲ್ಲಿ ಮಸ್ಕ್ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಅಥವಾ ಸತ್ತಮೇಲೂ ಜನರು ಫೋನ್‌ ಬಳಕೆ ಮಾಡುವುದನ್ನು ಕಲಿತಿದ್ದಾರೆ ಅಷ್ಟೇ ಎಂದಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ಬ್ಲ್ಯೂಟಿಕ್‌ ಅವ್ಯವಸ್ಥೆ ಬೆಳಕಿಗೆ ತರಲು ಮಾತ್ರ ಸುಶಾಂತ್‌ ಅವರ ಖಾತೆಯ ಉದಾಹರಣೆ ನೀಡಿರುವುದಾಗಿಯೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next