ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿಶುದ್ಧ ನೀರಿನ ಘಟಕಗಳ ನೀರಿನ ಗುಣ ಮಟ್ಟದ ಪ್ರಮಾಣ ಕಳಪೆಯಾಗಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ನಾಮ್‌ಕೆವಾಸ್ಥೆ ಕರ್ತವ್ಯ ನಿರ್ವಹಿಸುತ್ತಿ ರುವುದು ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆಗೆ ಸಂಭದಿಸಿದಂತೆ ಇಲಾಖೆಯ ಎಇಇ ಪ್ರಕಾರ 109, ಜೆ.ಇ ಪ್ರಕಾರ 102 ಶುದ್ಧ ನೀರಿನ ಘಟಕಗಳು ಕಾರ್ಯ ನಿರ್ವ ಹಿಸುತ್ತಿವೆ. ಇವುಗಳ ಪೈಕಿ ಯಾವ ಶುದ್ಧ ಕುಡಿಯುವ ನೀರಿನ ಘಟಕ ಗಳಲ್ಲಿಯೂ ನೀರಿನ ಶುದ್ಧೀಕರಣದ ಪರೀಕ್ಷೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹಾಗೂ ಪರೀಕ್ಷೆ ಮಾಡಿರುವ ವರದಿ ಯನ್ನೂ ಯಾವ ಘಟಕಗಳಲ್ಲಿಯೂ ಜನತೆಗೆ ತಿಳಿಸುವ ಗೋಜಿಗೆ ಅಧಿಕಾರಿ ಗಳು ಹೋಗದೆ ಇರುವುದು ಬೇಜವಾಬ್ದಾರಿಯನ್ನು ತಿಳಿಸುತ್ತದೆ.
ತಾಲೂಕಿನ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಪರೀಕ್ಷೆಗಳು ನಡೆಯದೇ ಇರುವುದ ರಿಂದ ಸಾರ್ವಜನಿಕರು ಕುಡಿಯುವ ನೀರು ಎಷ್ಟು ಸುರಕ್ಷಿತ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಮಾಹಿತಿ ನೀಡಲು ಹಿಂಜರಿಯುವ ಅಧಿಕಾರಿಗಳು: ತಾಲೂಕಿನ ಶುದ್ಧ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಇಲಾಖೆಯ ಎಇಇ ರುಕ್ಕಣ್ಣ ಹಾಗೂ ಜೆ.ಇ.ಕಿರಣ್ ಅವರ ಬಳಿ ಮಾಹಿತಿ ಕೇಳಿದರೆ ಸರಿಯಾದ ಮಾಹಿತಿ ನೀಡು ತ್ತಿಲ್ಲ. ಆಗಾಗ ದೂರವಾಣಿ ಕರೆ ಕಡಿತ ಗೊಳಿಸುತ್ತಾರೆ.
ಕರೆ ಸ್ವೀಕರಿಸಿದರೆ ನೀರಿನಲ್ಲಿ ಟಿಡಿಎಸ್ (ಟೋಟಲ್ ಡಿಸ್‌ಸಾಲೂಡ್ ಸಾಲಿಡ್) ಪ್ರಮಾಣ ಎಷ್ಟು ಇರಬೇಕು ಎಂದು ಕೇಳಿದರೆ ಯಾವ ಟಿಡಿಎಸ್ ಎಂದು ಮರು ಪ್ರಶ್ನೆ ಹಾಕು ತ್ತಾರೆ. ಅಧಿಕಾರಿ ಗಳಿಗೇ ಮಾಹಿತಿ ಇಲ್ಲವೆಂದ ಮೇಲೆ ಇನ್ನು ಸ್ಥಳೀಯರಿಗೆ ಯಾವ ಮಟ್ಟದಲ್ಲಿ ಸ್ಪಂದಿಸುತ್ತಾರೆಂದು ಹಲವು ಗ್ರಾಮಸ್ಥರಲ್ಲಿ ಮನೆ ಮಾಡಿದೆ.
● ಚೇತನ್