Advertisement
ಆರೋಪಿಗಳನ್ನು ನಜಾಫ್‌ಗಢ ನಿವಾಸಿಗಳಾದ ನಾಗೇಶ್ ಕುಮಾರ್ (28), ಶಿವಂ (23), ಮತ್ತು ಮನೀಶ್ ಕುಮಾರ್ (22) ಎಂದು ಗುರುತಿಸಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಇಬ್ಬರು ವ್ಯಕ್ತಿಗಳು, ಒಬ್ಬ ಪೊಲೀಸ್ ಸಮವಸ್ತ್ರದಲ್ಲಿ, ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಕೆಲ ಹೊತ್ತಿನ ನಂತರ, ಅವರು ಇಬ್ಬರು ವ್ಯಕ್ತಿಗಳನ್ನು ನಿಲ್ಲಿಸುತ್ತಾರೆ. ಈ ಮಧ್ಯೆ, ಇನ್ನೂ ಇಬ್ಬರು ಅವರೊಂದಿಗೆ ಸೇರುತ್ತಾರೆ. ನಂತರ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಪಾರ್ಸೆಲ್ ನೊಂದಿಗೆ ಓಡಿ ಹೋಗಿದ್ದಾರೆ.
Related Articles
Advertisement
ಅಷ್ಟರಲ್ಲಿ ಮತ್ತಿಬ್ಬರು ಬಂದು ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚೀಲವನ್ನು ಕೊಡಿ ಇಲ್ಲವಾದಲ್ಲಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿಗಳು ಚಿನ್ನಾಭರಣಗಳಿದ್ದ ಪಾರ್ಸೆಲ್‌ಗಳನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಪೊಲೀಸರು ಘಟನೆ ನಡೆದ ಏಳು ದಿನಗಳ 700 ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು ಮತ್ತು ಸ್ಥಳದ ಬಳಿ ಸ್ಥಳೀಯ ಗುಪ್ತಚರವನ್ನು ಸಂಗ್ರಹಿಸಿ, ಘಟನಾ ಸ್ಥಳದ ಸಮೀಪ ನಾಲ್ವರ ಚಟುವಟಿಕೆಗಳು ಅನುಮಾನಾಸ್ಪದವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಕ್ಯಾಬ್ ಡ್ರೈವರ್‌ನೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದ್ದು, ಅವರಲ್ಲಿ ಒಬ್ಬ ಚಹಾ ಖರೀದಿಸಲು ನಗದು ಬದಲಾಗಿ 100 ರೂಪಾಯಿಯನ್ನು ಪೇಟಿಎಂ ಮೂಲಕ ಚಾಲಕನ ಖಾತೆಗೆ ವರ್ಗಾಯಿಸಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಶ್ವೇತಾ ಚೌಹಾಣ್ ಹೇಳಿದ್ದಾರೆ.
ವ್ಯವಹಾರವನ್ನು ವಿಶ್ಲೇಷಿಸಲಾಗಿ ಅಪರಾಧಿಗಳನ್ನು ನಜಾಫ್‌ಗಢ ನಿವಾಸಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ರಾಜಸ್ಥಾನಕ್ಕೆ ಹೋಗಿರುವುದನ್ನು ಪೊಲೀಸರು ಪತ್ತೆ ಮಾಡಿ, ಜೈಪುರಕ್ಕೆ ತಂಡವನ್ನು ಕಳುಹಿಸಿ ಮೂವರನ್ನು ಬಂಧಿಸಲಾಗಿದೆ.
ಐಐಎಫ್‌ಎಲ್‌ನಲ್ಲಿ ಒಟ್ಟು 6,270 ಗ್ರಾಂ ಚಿನ್ನ, ಮೂರು ಕೆಜಿ ಬೆಳ್ಳಿ, 500 ಗ್ರಾಂ ಚಿನ್ನ ಮತ್ತು 106 ಕಚ್ಚಾ ವಜ್ರಗಳು ಮತ್ತು ಇತರ ವಜ್ರದ ಆಭರಣಗಳು ಸೇರಿ 5.5 ರಿಂದ 6 ಕೋಟಿ ರೂ. ಮೌಲ್ಯದ ನಗವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇನ್ನುಳಿದ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದ್ದು, ದರೋಡೆಯ ಮಾಸ್ಟರ್ ಮೈಂಡ್ ನಾಗೇಶ್ ತನ್ನ ಸ್ನೇಹಿತರು ಮತ್ತು ತಾಯಿಯ ಚಿಕ್ಕಪ್ಪನೊಂದಿಗೆ ಅಪರಾಧ ಎಸಗಲು ಯೋಜಿಸಿದ್ದನು ಎಂದು ತಿಳಿದು ಬಂದಿದೆ.