Advertisement

Tourism: ಒತ್ತಡವೆಷ್ಟು?: 15 ನಗರಗಳ ವೈಜ್ಞಾನಿಕ ಅಧ್ಯಯನಕ್ಕೆ ಉತ್ತರಾಖಂಡ ನಿರ್ಧಾರ

07:54 PM Aug 20, 2023 | Team Udayavani |

ಡೆಹ್ರಾಡೂನ್‌: ಇತ್ತೀಚೆಗೆ ಭಾರೀ ಮಳೆ ಸುರಿಯುತ್ತಿರುವುದರಿಂದ ಯೋಗಿಗಳ ನೆಲೆವೀಡು, ಹಿಮಾಲಯ ಶ್ರೇಣಿಯ ಪ್ರಮುಖ ರಾಜ್ಯ ಉತ್ತರಾಖಂಡದಲ್ಲಿ ವಿಪರೀತ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡದಲ್ಲಿ ಗರಿಷ್ಠ ಪ್ರವಾಸಿಗಳನ್ನು ಸೆಳೆಯುವ ನಗರಗಳಿಗೆ, ಎಷ್ಟು ಒತ್ತಡವನ್ನು ತಾಳಿಕೊಳ್ಳುವ ಶಕ್ತಿಯಿದೆ ಎಂದು ಅಧ್ಯಯನ ನಡೆಸಲು ಅಲ್ಲಿನ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ನಿರ್ಧರಿಸಿದ್ದಾರೆ. ಅದಕ್ಕಾಗಿ ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಯುಎಸ್‌ಡಿಎಂಎ), ಸಮೀಕ್ಷೆ ನಡೆಸಲು ಮುಂದಾಗಿದೆ.

Advertisement

ನೈನಿತಾಲ್‌, ಮಸ್ಸೂರಿ, ಪೌರಿ, ಗೋಪೇಶ್ವರ್‌, ಉತ್ತರಕಾಶಿ, ಅಲ್ಮೋರಾ, ಕಾಪ್‌ಕೋಟ್‌, ರಾಣಿಖೇಟ್‌, ಚಂಪಾವತ್‌ ಮತ್ತು ಪಿತ್ರೋಗಢ ಸೇರಿ 15 ನಗರಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಲಾಗಿದೆ. ಅಧ್ಯಯನದ ಮೂಲಕ ಶಿಫಾರಸುಗಳನ್ನು ಆಧರಿಸಿ, ಎಷ್ಟು ನಿರ್ಮಾಣ ಕಾರ್ಯ ನಡೆಸಬೇಕು ಎಂದು ತೀರ್ಮಾನಿಸಲಾಗುತ್ತದೆ ಎಂದು ಧಾಮಿ ಹೇಳಿದ್ದಾರೆ. ಜೋಷಿಮಠದಲ್ಲಿರುವ ಜ್ಯೋತಿರ್ಮಠ, ಬದ್ರೀನಾಥ ದೇಗುಲದ ಸನಿಹವೂ ಭೂಕುಸಿತವಾಗಿತ್ತು. ಸಾವಿರಾರು ಜನರ ಬದುಕು ಅಸ್ತವ್ಯಸ್ತವಾಗಿ, ಹಲವರು ಸಾವನ್ನಪ್ಪಿದ್ದರು. ಇದಕ್ಕೆಲ್ಲ ಬೆಟ್ಟಗಳನ್ನು ಕೊರೆದು ನಿರ್ಮಾಣ ಕಾರ್ಯ ನಡೆಸುತ್ತಿರುವುದೇ ಕಾರಣ ಎಂದು ಪರಿಸರ ತಜ್ಞರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next