Advertisement
ಹೆಚ್ಚಿದ ಕ್ಯಾಬ್ ಸರ್ವೀಸ್ಹಿಂದೆಂದಿಗಿಂತ ನಗರದಲ್ಲಿ ಟ್ಯಾಕ್ಸಿ-ಕ್ಯಾಬ್ ಗಳ ಸೇವೆ ಹೆಚ್ಚಾಗಿದೆ. ನಮಗೆ ಹೋಗಬೇಕಾದ ಸ್ಥಳಕ್ಕೆ ನಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇದೆ. ಟ್ಯಾಕ್ಸಿ -ಕ್ಯಾಬ್ ಗಳು ಬೇಕಾದಷ್ಟು ಲಭ್ಯವಿರುವ ಕಾರಣ ಜನರು ಅವುಗಳಲ್ಲಿ ಹೆಚ್ಚು ಓಡಾಡಲು ಉತ್ಸುಕರಾಗಿದ್ದಾರೆ. ಪಾರ್ಕಿಂಗ್ ಕಿರಿಕಿರಿ, ದಂಡದ ಕಿರಿಕಿರಿ, ಸರ್ವೀಸ್, ನಿರ್ವಹಣೆ ಕಿರಿಕಿರಿ ಇಲ್ಲದ್ದರಿಂದ ಜನ ಕ್ಯಾಬ್ ಸೇವೆಗಳಿಗೆ ಜೈ ಅಂದಿರುವುದೂ ಹೌದು.
ಕಾರು ಖರೀದಿಸಿ, ಇನ್ಸೂರೆನ್ಸ್, ಎಮಿಷನ್ ಟೆಸ್ಟ್ ಅಂತ ಹಣ ಖರ್ಚು ಮಾಡಬೇಕು. ಇದರ ಉಸಾಬರಿ ಬೇಡ ಎಂದು ಕ್ಯಾಬ್ ನ ಮೊರೆ ಹೋಗುವವರೇ ಹೆಚ್ಚು. ಖಾಸಗಿ ಕಾರಿನ ನಿರ್ವಹಣೆಗಿಂತ ಕ್ಯಾಬ್ ಹೆಚ್ಚು ಅಗ್ಗ. ಕಾರು ಉತ್ಪಾದಕರ ಮಾತು
ಮೆಟ್ರೋ ನಗರಗಳಲ್ಲಿ ಕ್ಯಾಬ್ ಸೇವೆಗಳಿಂದ ಯಾವ ತೊಂದರೆಯೂ ಎದುರಾಗಿಲ್ಲ. ಆದರೆ ಪರಿಸ್ಥಿತಿ ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ದೊಡ್ಡ ಒಡೆತ ಬೀಳಲಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರದ ಮಾನ್ಯೇಜಿಂಗ್ ಡೈರೆಕ್ಟರ್ ಪವನ್ ಗೋನೆಕಾ ಅಭಿಪ್ರಾಯಪಡುತ್ತಾರೆ.
Related Articles
ನಗರದಲ್ಲಿ ಸೇವೆ ನೀಡುತ್ತಿರುವ ಕ್ಯಾಬ್ ಗಳು ಹೆಚ್ಚಾಗಿದ್ದರೂ ಹೊಸದಾಗಿ ಖರೀದಿಸಿದ ಕಾರುಗಳು ಅವುಗಳಲ್ಲಿ ಕಂಡುಬರುತ್ತಿಲ್ಲ. ಹಳೆಯ ಕಾರುಗಳನ್ನೇ ಇಲ್ಲಿ ಬಳಸಲಾಗುತ್ತಿದೆ. ಸಮೀಕ್ಷೆಯ ಪ್ರಕಾರ ವೋಲಾ – ಊಬರ್ ಉದ್ಯಮಕ್ಕೂ ಪೆಟ್ಟು ಬಿದ್ದಿದೆ.
Advertisement
ಖರೀದಿ ಕಡಿಮೆ ಯಾಕೆ?ಜನರು ತಮ್ಮ ವೈಯಕ್ತಿಕ ಕಾರಣಗಳಿಂದ ಹೊಸ ಕಾರು ಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಇನ್ನು ಹೆಚ್ಚಿನವರು ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಮೊರೆ ಹೋಗುತ್ತಿದ್ದಾರೆ. ಉಳಿದವರು ಟ್ಯಾಕ್ಸಿ ವ್ಯವಸ್ಥೆಗಳನ್ನು ನೆಚ್ಚಿಕೊಂಡಿದ್ದಾರೆ. ಯಾವುದು ಲಾಭ?
ಟ್ಯಾಕ್ಸಿ ಕಂಪೆನಿಗಳಿಂದ 2.2 ಮಿಲಿಯನ್ ಉದ್ಯೋಗ ಸೃಷ್ಟಿ
ದೇಶದ ಆರ್ಥಿಕತೆಗೆ ಓಲಾ -ಉಬರ್ ಗಳಂತಹ ಕ್ಯಾಬ್ ಸೇವೆಗಳು ಸಹಾಯವಾಗುತ್ತದೆ ಎಂದು ಎನ್.ಎಸ್.ಎಸ್.ಒ. ವರದಿ ಹೇಳಿದೆ. ಇದು 2.2 ಮಿಲಿಯನ್ ಉದ್ಯೋಗ ಕೊರತೆಯನ್ನು ನೀಗಿಸಿದೆ. ಆಟೋ ಮೊಬೈಲ್ ವಲಯ ಕುಸಿತಕ್ಕೆ ಓಲಾ ಕಾರಣವಾಗುವುದಿಲ್ಲ ಎನ್ನಲಾಗಿದೆ.