Advertisement

ಸಾಮಾಜಿಕ ತಾಣಗಳಲ್ಲಿ ನೀರಜ್‌ ಮೌಲ್ಯ 428 ಕೋಟಿ ರೂ.

09:14 PM Sep 15, 2021 | Team Udayavani |

ನವದೆಹಲಿ: ಟೋಕ್ಯೊ ಒಲಿಂಪಿಕ್ಸ್‌ನಲ್ಲಿ ಹರ್ಯಾಣದ ನೀರಜ್‌ ಚೋಪ್ರಾ ಚಿನ್ನ ಗೆದ್ದು ಭಾರತದ ಮನೆ ಮಾತಾಗಿದ್ದಾರೆ. ಭಾರತದ ಒಲಿಂಪಿಕ್ಸ್‌ನಲ್ಲೇ ಇತಿಹಾಸದಲ್ಲೇ ಅಥ್ಲೆಟಿಕ್ಸ್‌ನಲ್ಲಿ ಬಂದ ಮೊದಲ ಚಿನ್ನವಿದು.

Advertisement

ಇಂತಹ ನೀರಜ್‌ ಅವರ ಸಾಮಾಜಿಕ ತಾಣಗಳ ಮೌಲ್ಯ ಎಷ್ಟು ಗೊತ್ತಾ? 428 ಕೋಟಿ ರೂ. ಹೀಗಂತ “ಯೂಗವ್‌ ನ್ಪೋರ್ಟ್‌’ ಎಂಬ ಸಂಶೋಧನಾ ಸಲಹಾ ಸಂಸ್ಥೆ ಹೇಳಿದೆ. ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್‌, ಯೂಟ್ಯೂಬ್‌ನಂತಹ ಸಾಮಾಜಿಕ ತಾಣಗಳಲ್ಲಿ ಅವರು ಮಾಡುವ ಒಂದೊಂದು ಪೋಸ್ಟ್‌ ಕೂಡಾ ಅಷ್ಟೊಂದು ಜನರಿಗೆ ತಲುಪಲು ಶುರುವಾಗಿದೆ. ಅದಕ್ಕೆಲ್ಲ ಕಾರಣ ಟೋಕ್ಯೊ ಚಿನ್ನ.

ಈ ಬಾರಿ ಟೋಕ್ಯೊದಲ್ಲಿ ಚಿನ್ನ ಗೆದ್ದ ನಂತರ ಇನ್ಟಾಗ್ರಾಮ್‌ನಲ್ಲಿ 10.40 ಲಕ್ಷ ಲೇಖಕರು, 20.90 ಲಕ್ಷ ಬಾರಿ ನೀರಜ್‌ ಹೆಸರನ್ನು ಉಲ್ಲೇಖೀಸಿದ್ದಾರೆ. ಒಟ್ಟಾರೆ ಸಾಮಾಜಿಕ ತಾಣಗಳು, ಡಿಜಿಟಲ್‌ ತಾಣಗಳಲ್ಲಿ ಅವರ ತಲುಪಿಕೆಯ ಪ್ರಮಾಣ 41.2 ಕೋಟಿಗೇರಿದೆ. ಇದರ ಪರಿಣಾಮವೇ ಅವರ ಸಾಮಾಜಿಕ ತಾಣಗಳ ಮೌಲ್ಯ 428 ಕೋಟಿ ರೂ.ಗೇರಿದೆ. ಅರ್ಥಾತ್‌ ಅವರ ಪೋಸ್ಟ್‌ಗಳಿಂದ ಇಷ್ಟು ಆದಾಯ ಬರಲಿದೆ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next