Advertisement

ಅರಿಶಿನದಲ್ಲಿರುವ ಹಲವು ಔಷಧೀಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?

06:44 PM Nov 08, 2019 | mahesh |

ಅರಿಶಿನ ಕೇವಲ ಅಡುಗೆಗೆ ಮಾತ್ರ ಬಳಸುವ ಪದಾರ್ಥವಲ್ಲ. ಹಲವಾರು ರೋಗಗಳಿಗೆ ಪರಿಣಾಮಕಾರಿಯಾಗಿರುವ ಔಷಧವೂ ಹೌದು. ಅರಿಶಿನದಲ್ಲಿರುವ ಕುರ್ಕುಮಿನ್‌ ಎಂಬ ಅತ್ಯಂತ ಆರೋಗ್ಯಕಾರಕ ಪೋಷಕಾಂಶವೇ ಈ ಹೆಗ್ಗಳಿಕೆಗೆ ಮೂಲ.

Advertisement

ಅಡುಗೆ ಮನೆಯಲ್ಲಿ ಸದಾಕಾಲ ಲಭ್ಯವಿರುವ ಸರ್ವ ರೋಗಗಳಿಗೆ ಮದ್ದು ಎಂದು ಕರೆಸಿಕೊಳ್ಳುವ ಅರಿಶಿನ ಆರೋಗ್ಯ ಸೇರಿದಂತೆ ಸೌಂದರ್ಯದ ವಿಷಯದಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಅರಿಶಿನ ಅಥವಾ ಹಳದಿ ಎಂದು ಕರೆಯಲ್ಪಡುವ ಈ ಮಸಾಲೆ ಪದಾರ್ಥವನ್ನು ಹಲವಾರು ಖಾದ್ಯಗಳಿಗೆ ಬಳಸುತ್ತಾರೆ. ಕೆಲವೊಂದು ಭಾರತೀಯ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ಇದೆ.

ಅರಿಶಿಣದ ಔಷಧಿಯ ಗುಣಗಳು

* ಅರಿಶಿನವನ್ನು ಹಾಲಿನ ಕೆನೆಯೊಂದಿಗೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ, ಮುಖದಲ್ಲಿನ ಗುಳ್ಳೆಗಳು ಕಮ್ಮಿಯಾಗುತ್ತವೆ ಮತ್ತು ಹೊಳಪು ಬರುತ್ತದೆ.

* ಅರಿಶಿನದ ಪುಡಿಯನ್ನು ಕಡಲೆಹಿಟ್ಟಿಗೆ ಬೆರೆಸಿ, ಹಾಲಿನೊಂದಿಗೆ ಕಲೆಸಿ ಮುಖಕ್ಕೆ ಹಚ್ಚಬಹುದು.

Advertisement

* ಅರಿಶಿನದ ಪುಡಿಯನ್ನು ಸ್ವಲ್ಪ ಬಿಸಿ ಮಾಡಿದ ಹಾಲಿಗೆ ಬೆರೆಸಿ ಕುಡಿಯುವುದರಿಂದ ಕೆಮ್ಮು ಸ್ವಲ್ಪ ಮಟ್ಟಿಗೆ ಕಮ್ಮಿಯಾಗುತ್ತದೆ.

*ಇದು ಆ್ಯಂಟಿಸೆಪ್ಟಿಕ್ ಆಗಿರುವುದರಿಂದ ದಿನನಿತ್ಯ ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕೆ ಉತ್ತಮ.

*ಸಣ್ಣ ಪುಟ್ಟ ಗಾಯಗಳಾಗಿ ರಕ್ತ ಬರುತ್ತಿರುವಾಗ ಈ ಅರಿಶಿನದ ಪುಡಿಯನ್ನು ಗಾಯದ ಮೇಲೆ ಹಾಕುವುದರಿಂದ ರಕ್ತ ಬರುವುದು ನಿಲ್ಲುತ್ತದೆ. (ಚಿಕ್ಕ ಗಾಯಗಳಿಗೆ) ಆ್ಯಂಟಿಸೆಪ್ಟಿಕ್  ಆಗಿರುವುದರಿಂದ ಬೇಗನೆ ಗಾಯವೂ ಒಣಗುತ್ತದೆ/ಮಾಯುತ್ತದೆ.

* ದಿನಾಲೂ ಬೆಳಗ್ಗೆ ಶುದ್ಧವಾದ ಅರಿಶಿನದ ನೀರು ಕುಡಿಯುವುದರಿಂದ ದೇಹದಲ್ಲಿನ ರಕ್ತ ಶುದ್ಧಗೊಳ್ಳುತ್ತದೆ. ದೇಹದಲ್ಲಿನ ಟಾಕ್ಸಿನ್ ಗಳನ್ನೂ ಹೊರ ಹಾಕುತ್ತದೆ. ಮೆದುಳಿನ ಕಾರ್ಯಾಚರಣೆಯನ್ನು ಚುರುಕುಗೊಳಿಸುತ್ತದೆ.

ಉರಿಯೂತಕ್ಕೆ ಔಷಧ
ಅರಿಶಿನ ಮತ್ತು ಕಾಳುಮೆಣಸಿನ ಸೇವನೆಯಿಂದ ಉರಿಯೂತವನ್ನು ಕಡಿಮೆ ಮಾಡಬಹುದು. ಅಲ್ಲದೇ ಉರಿಯೂತದಿಂದ ಉಂಟಾಗುವ ಹಲವಾರು ತೊಂದರೆಗಳನ್ನು ನಿವಾರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next