Advertisement
QR Code: ಕ್ವಿಕ್ ರೆಸ್ಪಾನ್ಸ್ ಕೋಡ್ ಇದನ್ನು ಮೊದಲು 1994ರಲ್ಲಿ ಜಪಾನ್ ನಲ್ಲಿ ಆಟೋಮೊಬೈಲ್ ಉದ್ಯಮಕ್ಕಾಗಿ ವಿನ್ಯಾಸಗೊಳಿಸಲಾಯಿತು. ಕ್ಯೂಆರ್ ಕೋಡ್‌ನ ಮುಖ್ಯ ಉದ್ದೇಶವೆಂದರೆ ವಾಹನ ಉತ್ಪಾದನೆಯ ಸಮಯದಲ್ಲಿ ಅವುಗಳನ್ನು ಪತ್ತೆ ಮಾಡುವುದಾಗಿತ್ತು. ನಂತರ ಇದನ್ನು ಟ್ಯಾಗ್‌ಗಳು, ಜಾಹೀರಾತುಗಳು, ಆನ್‌ಲೈನ್ ಪೇಮೆಂಟ್, ಸುರಕ್ಷಿತ ಡೇಟಾ ವರ್ಗಾವಣೆ ಮತ್ತು ಇನ್ನೂ ಹೆಚ್ಚಿನ ಅಪ್ಲಿಕೇಶನ್‌ಗಳಿಗೆ ವಿಸ್ತರಿಸಲಾಯಿತು. ಕ್ಯೂಆರ್ ಸಂಕೇತಗಳು ಬಾರ್‌ಕೋಡ್‌ಗಳ ಅಭಿವೃದ್ಧಿ ಮತ್ತು ಅವುಗಳ ಅಸ್ತಿತ್ವಕ್ಕೆ ಕಾರಣವಾಗಿದೆ. ಸ್ಕ್ಯಾನ್ ಮಾಡಬಹುದಾದ ವೇಗ, ಅವು ಒದಗಿಸಿದ ನಿಖರತೆ ಮತ್ತು ಅವುಗಳ ಬಹು ಕ್ರಿಯಾತ್ಮಕತೆಯಿಂದಾಗಿ ಬಾರ್‌ಕೋಡ್‌ಗಳು ಬಹಳ ಜನಪ್ರಿಯವಾದವು.
ಕೆಳಗಿನ ಚಿತ್ರದಲ್ಲಿ ನೀವು ಕ್ಯೂಆರ್ ಕೋಡ್ ಸ್ವರೂಪವನ್ನು ಗಮನಿಸಬಹುದು. QR ಕೋಡ್‌ನಲ್ಲಿನ 3 ದೊಡ್ಡ ಬ್ಲಾಕ್ ಗಳು ಸಮಜೋಡಣೆಯನ್ನು ಸೂಚಿಸುತ್ತದೆ, ಇದರಿಂದ ಕೋಡ್ ಅನ್ನು ವಿಭಿನ್ನ ಕೋನಗಳೊಂದಿಗೆ ಸ್ಕ್ಯಾನ್ ಮಾಡಬಹುದು. ಚಿತ್ರದಲ್ಲಿ ನೀವು ನೋಡಬಹುದಾದ ಹಸಿರು ಪ್ರದೇಶವು ಯಾವಾಗಲೂ ಖಾಲಿ ಜಾಗವಾಗಿರುತ್ತದೆ. ಕೆಂಪು ಬಣ್ಣದ ಪ್ರದೇಶವು ದೋಷ ತಿದ್ದುಪಡಿ (Error Correctio) ಮಟ್ಟವಾಗಿದೆ, ಇದು QR ಕೋಡ್ ಹಾನಿಗೊಳಗಾಗಿದ್ದರೆ ಅಥವಾ QR ಕೋಡ್‌ನ ಒಂದು ಸಣ್ಣ ಭಾಗ ಕಳೆದುಹೋದರೆ ಡೇಟಾವನ್ನು ಮರುಪಡೆಯಲು ಸಹಾಯ ಮಾಡುತ್ತದೆ. ಹಳದಿ ಗುರುತು ಮಾಡಿದ ಸ್ಥಳವು ಕ್ಯೂಆರ್ ಕೋಡ್‌ನಲ್ಲಿ ಯಾವ ಮಾದರಿಯ ಕೋಡಿಂಗ್ ಬಳಸಲಾಗಿದೆ ಎಂಬುದನ್ನು ಸೂಚಿಸುತ್ತದೆ.
ನೇರಳೆ ಬಣ್ಣದ ಸ್ಥಳ ಡೇಟಾದ ಗಾತ್ರವನ್ನು ಪ್ರತಿನಿಧಿಸುತ್ತದೆ. QR ಕೋಡ್‌ನ ನೀಲಿ ಭಾಗ ಕೂಡ ದೋಷಗಳನ್ನು (Error) ಸರಿಪಡಿಸಲು ಸಹಾಯ ಮಾಡುತ್ತದೆ. ಇಂದು ಎಲ್ಲಾ ರಂಗಗಳಲ್ಲೂ ಕ್ಯೂಆರ್ ಕೋಡ್ ಗಳ ಬಳಕೆ ಸಾಮಾನ್ಯವೆಂಬಂತಾಗಿದೆ. ಸ್ಮಾರ್ಟ್ ಪೋನ್ ಗಳಲ್ಲಿ, ಅಪ್ಲಿಕೇಶನ್ ಗಳಲ್ಲಿ, ಜಾಹೀರಾತು, ಟಿಕೆಟ್ ಗಳು, ಕಂಪೆನಿ ವಿಳಾಸ, ವಿಡಿಯೋ, ವೆಬ್ ಸೈಟ್ ಗಳು, ಸೂಪರ್ ಮಾರ್ಕೆಟ್ ಸೇರಿದಂತೆ ಹಲವೆಡೆ ಕಾಣಬಹುದು. ಪ್ರಮುಖವಾಗಿ ಕ್ಯೂಆರ್ ಕೋಡ್ ಕ್ರಿಯೇಟ್ ಮಾಡುವುದು ಕೂಡ ಸುಲಭ. ಕ್ಯೂಆರ್ ಕೋಡ್ ಜನರೇಟರ್ ಗೆ ತೆರಳಿ ಅಲ್ಲಿ ಯುಆರ್ ಎಲ್ ಸೇರಿದಂತೆ ನಿರ್ದಿಷ್ಟ ವಸ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಿ ಸುಲಭವಾಗಿ ಕ್ಯೂಆರ್ ಕೋಡ್ ಪಡೆಯಬಹುದು. ಮಾತ್ರವಲ್ಲದೆ ಕ್ಯೂಆರ್ ಕೋಡ್ ಸ್ಕ್ಯಾನರ್ ಮೂಲಕ ಇದನ್ನು ಡಿಕೋಡ್ ಮಾಡಬಹುದು.
Advertisement
ಮಿಥುನ್ ಪಿ.ಜಿ