Advertisement
ಉದ್ಯೋಗದಾತನು ತನ್ನ ಉದ್ಯೋಗಿಗೆ,ಅವನು ನಿವೃತ್ತನಾ ದಾಗ, ರಾಜೀನಾಮೆ ನೀಡಿದಾಗ ಅಥವಾ ಯಾವುದೇಕಾರಣಕ್ಕೆ ಕೆಲಸ ಬಿಟ್ಟಾಗ ನಿವೃತ್ತಿ ಸೌಲಭ್ಯ ಎಂದು ನೀಡುವ ಮೊತ್ತ. ಇದು ಕೆಲವು ಷರತ್ತುಗಳಿಗೆ, ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಉದ್ಯೋಗಿಯು ಕನಿಷ್ಠ ಐದು ವರ್ಷಗಳ ಸೇವೆ ಸಲ್ಲಿಸಿರಬೇಕು. ಅಕಸ್ಮಾತ್ ಐದು ವರ್ಷ ಸೇವೆ ಸಲ್ಲಿಸುವ ಮೊದಲೇ ನಿಧನರಾದರೆ, ಸೇವೆಯ ಅವಧಿಯ ಅನುಪಾತದಲ್ಲಿ ಈ ಮೊತ್ತವನ್ನು ನೀಡಲಾಗುವುದು.
Related Articles
Advertisement
ಗ್ರಾಚುಯಿಟಿ ಲೆಕ್ಕ ಹಾಕುವಾಗ ಮೊತ್ತ ಎಷ್ಟೇ ಅದರೂ, ಗ್ರಾಚುಯಿಟಿಯ ಗರಿಷ್ಠ ಮೊತ್ತ 20 ಲಕ್ಷವನ್ನು ಮೀರಬಾರದು. ಗ್ರಾಚುಯಿಟಿಯನ್ನು ತನ್ನ ಉದ್ಯೋಗಿಗೆ ಸಂಸ್ಥೆಯು ನೀಡುವಗಿಫ್ಟ್ ಎಂದು ಪರಿಗಣಿಸಲಾಗುತ್ತಿದ್ದು,ಇದನ್ನು ಉದ್ಯೋಗಿಯ ಯಾವುದೇ ಬಾಕಿಗೆ ಅಟ್ಯಾಚ್ ಮಾಡಲಾಗದು. ಆದರೆ, ಉದ್ಯೋಗಿಯು ತನ್ನಕೃತ್ಯದಿಂದ ಅಥವಾ ಕರ್ತವ್ಯ ಎಸಗದೇಸಂಸ್ಥೆಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ, ಆ ಹಾನಿಯ ಮೊತ್ತವನ್ನುಗ್ರಾಚುಯಿಟಿಯುಲ್ಲಿ ಕಡಿತಮಾಡ ಬಹುದು. ಹಾಗೆಯೇ ಉದ್ಯೋಗಿಯು ಯಾವುದಾದರೂ ನೀಚತನದ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಅಂಥ ಸಂದರ್ಭದಲ್ಲಿ ಗ್ರಾಚುಯಿಟಿಯನ್ನು ತಡೆಹಿಡಿಯಬಹುದು.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಒಂದು ತೀರ್ಪಿನಲ್ಲಿ ಉದ್ಯೋಗಿಯಿಂದ ಬರಬೇಕಾದ ಬಾಕಿ ಮೊತ್ತಕ್ಕಾಗಿ ಆತನ ಗ್ರಾಚುಯಿಟಿ ಯನ್ನು ತಡೆಹಿಡಿಯ ಬಹುದೆಂದು ಹೇಳಿದೆ. ಉದ್ಯೋಗಿ ಯೊಬ್ಬ ಅವಧಿಗಿಂತ ಹೆಚ್ಚುಕಾಲ ಸಂಸ್ಥೆಯ ಕ್ವಾಟ್ರಸ್‌ನಲ್ಲಿಉಳಿದಿದ್ದು, ಈ ಅವಧಿಗೆ ಸುಸ್ತಿ ಬಾಡಿಗೆನೀಡಲು ತಕರಾರು ತೆಗೆದಿದ್ದ. ಸಂಸ್ಥೆಯು ಆ ಮೊತ್ತವನ್ನು ಆತನಗ್ರಾಚುಯಿಟಿ ಯಿಂದ ವಸೂಲು ಮಾಡಿತ್ತು. ಈ ಕ್ರಮವನ್ನು ಪ್ರಶ್ನಿಸಿಉದ್ಯೋಗಿ ನ್ಯಾಯಾಲಯದ ಮೊರೆ ಹೋಗಿದ್ದ. ನ್ಯಾಯಾಲಯವು, ಗ್ರಾಚುಯಿಟಿ ಸೇರಿ ಯಾವುದೇಬಾಕಿಯನ್ನು ಉದ್ಯೋಗಿಗೆ ನೀಡುವಾಗ ಅವನಿಂದ ಬರಬೆಕಾದ ಬಾಕಿಗೆ ವಜಾ ಮಾಡಿಕೊಳ್ಳಬಹುದು ಎಂದು ತೀರ್ಪು ನೀಡಿದೆ.
-ರಮಾನಂದ ಶರ್ಮಾ