Advertisement

ದೇವರ ಪ್ರೀತಿಯ ಬಗ್ಗೆ ನಮಗೆ ಎಷ್ಟು ತಿಳಿದಿದೆ?

06:06 PM Jul 15, 2019 | Sriram |

ಜೆ.ಬಿ.ಎಸ್‌. ಹಾಲ್ಡೇನ್ ಬ್ರಿಟಿಷ್‌ ಜೀವವಿಜ್ಞಾನಿ. ಹಾಲ್ಡೇನ್ ತಮ್ಮ ಜೀವನದ ಬಹುಭಾಗವನ್ನು ಭಾರತದಲ್ಲಿ, ಬಂಗಾಳದಲ್ಲಿ, ಅಪ್ಪಟ ಬಂಗಾಳಿಯಂತೆ ಕಳೆದರು. ಹಾಲ್ಡೇನ್ ರಿಗೆ ಯಾರೋ ಕೇಳಿದರಂತೆ, “ನೀವು ಜೀವನವೆಲ್ಲ ಪ್ರಕೃತಿಯ ರಹಸ್ಯಗಳನ್ನು ಪತ್ತೆಹಚ್ಚುವುದರಲ್ಲಿ ಕಳೆದಿದ್ದೀರಿ.

Advertisement

ಪ್ರಕೃತಿಯ ಅನೇಕ ನಿಗೂಢಗಳ ಬಗ್ಗೆ ನಮ್ಮೆಲ್ಲರಿಗಿಂತ ಹೆಚ್ಚು ಗೊತ್ತಿರುವ ವ್ಯಕ್ತಿ ನೀವು. ಈ ಪ್ರಕೃತಿಯನ್ನು ನೋಡಿದಾಗ ದೇವರ ಮನಸ್ಸಿನ ಬಗ್ಗೆ ನಿಮಗೆ ಏನು ಗೊತ್ತಾಗಿದೆ ಹೇಳುತ್ತೀರಾ?’ ಹಾಲ್ಡೇನ್ ಹೇಳಿದರು, “ದೇವರ ಮನಸ್ಸಿನ ಬಗ್ಗೆ ನನಗೆ ಎಷ್ಟು ತಿಳಿದಿದೆ ಎಂಬುದೇನೂ ನನಗೆ ಗೊತ್ತಿಲ್ಲ. ಆದರೆ, ಆ ದೇವರಿಗೆ ಮಿಡತೆಗಳೆಂದರೆ ಅದೆಂಥದೋ ವಿಚಿತ್ರ ಆಕರ್ಷಣೆ ಇದೆ ಎಂಬುದು ಮಾತ್ರ ಗೊತ್ತು. ಈ ಜಗತ್ತಿನಲ್ಲಿ ಅವನ್ನು ಕೋಟ್ಯಂತರ ಸಂಖ್ಯೆಯಲ್ಲಿ ಸೃಷ್ಟಿಸಿದ್ದಾನೆ!

-ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next