Advertisement

ಗ್ರಾ.ಪಂ.ಗಳಲ್ಲಿ ಪ್ರಮುಖ ದಾಖಲೆ ಪಡೆಯಲು ಇನ್ನೆಷ್ಟು ದಿನ ಬೇಕು?

12:20 PM Apr 26, 2022 | Team Udayavani |

ಉಡುಪಿ: ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರಕಾರವು ಕೆಲವು ಪ್ರಮುಖ ಪ್ರಮಾಣ ಪತ್ರಗಳನ್ನು ಗ್ರಾ.ಪಂ. ಮೂಲಕ ನೀಡಲು ಆದೇಶಿಸಿದ್ದರೂ ವಿತರಣ ಪ್ರಕ್ರಿಯೆ ಶುರುವಾಗಿಲ್ಲ.

Advertisement

ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಹಾಗೂ ಮದುವೆ ನೋಂದಣಿ ಪ್ರಮಾಣ ಪತ್ರವನ್ನು ಸುಲಭವಾಗಿ ಜನರ ಸಮಾನ್ಯರಿಗೆ ತಲುಪಿಸಲು ಗ್ರಾ.ಪಂ.ನ ಪಿಡಿಒಗಳ ಮುಖೇನ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಗ್ರಾಮೀಣ ಭಾಗದ ಜನರಿಗೆ ಇದರ ಸೌಲಭ್ಯ ಮಾತ್ರ ಸಿಗುತ್ತಿಲ್ಲ.

ಯಾವುದೇ ಆಸ್ಪತ್ರೆಗಳಲ್ಲಿ ಮಗುವಿನ ಜನನವಾದರೆ ಆ ಆಸ್ಪತ್ರೆ, ನಗರಸಭೆ, ಪುರಸಭೆ, ಪ.ಪಂಚಾಯತ್‌ ವ್ಯಾಪ್ತಿಯಲ್ಲಿದ್ದರೆ ಆಸ್ಪತ್ರೆಯಿಂದ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ನೀಡಲಾಗುತ್ತದೆ. ಸಂಬಂಧಪಟ್ಟ ಮಗುವಿನ ಕುಟುಂಬದಿಂದ ಅರ್ಜಿ ಸಲ್ಲಿಸಿ, ಜನನ ಪ್ರಮಾಣ ಪತ್ರ ಪಡೆಯುವ ವ್ಯವಸ್ಥೆಯಿದೆ. ಆಸ್ಪತ್ರೆಯಲ್ಲಿ ಮರಣ ಹೊಂದಿದಾಗ ಪ್ರಮಾಣ ಪತ್ರ ಪಡೆಯುವ ವಿಧಾನವೂ ಹೀಗೆ ಇದೆ. ಆದರೆ ಆಯಾ ಜನ ವಸತಿಯ ಗ್ರಾ.ಪಂ.ಗಳಲ್ಲೇ ಈ ಪ್ರಮಾಣಪತ್ರ ಸಿಗುವಂತೆ ಮಾಡುವುದು ಸರಕಾರದ ಉದ್ದೇಶವಾಗಿದೆ.

ವಿವಾಹ ನೋಂದಣಿ ಪ್ರಮಾಣ ಪತ್ರ

ಸದ್ಯ ವಿವಾಹ ನೋಂದಣಿ ಪ್ರಮಾಣ ಪತ್ರ ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ನೀಡಲಾಗುತ್ತದೆ. ಮಧ್ಯವರ್ತಿಗಳಿಲ್ಲದೆ ಈ ಪ್ರಮಾಣ ಪತ್ರ ಪಡೆಯಲು ಸಾಧ್ಯವೇ ಇಲ್ಲ ಎಂಬಂತೆ ವ್ಯವಸ್ಥೆ ನಿರ್ಮಾಣವಾಗಿದೆ ಮತ್ತು ಪ್ರಮಾಣ ಪತ್ರ ಪಡೆದಿರುವ ಬಹುತೇಕರಿಗೆ ಇದರ ಅನುಭವವೂ ಆಗಿದೆ. ಮಧ್ಯಮರ್ತಿಗಳ ಹಾವಳಿ ತಪ್ಪಿಸಲು ಗ್ರಾ.ಪಂ. ಮೂಲಕ ಈ ಪ್ರಮಾಣ ಪತ್ರ ವಿತರಿಸಲು ಸರಕಾರ ತೀರ್ಮಾನಿಸಿದೆ. ಆದರೆ, ಗ್ರಾ.ಪಂ.ಗಳಲ್ಲಿ ಯಾವ ರೀತಿಯಲ್ಲಿ ಇದರ ನಿರ್ವಹಣೆ ಮತ್ತು ವಿತರಣೆ ಪ್ರಕ್ರಿಯೆ ನಡೆಸಬೇಕು ಎಂಬುದರ ವಿಸ್ತೃತ ಮಾರ್ಗಸೂಚಿ ಇನ್ನೂ ಬಂದಿಲ್ಲ. ಅನುಷ್ಠಾನವೂ ವಿಳಂಬವಾಗಬಹುದು.

Advertisement

ಮಾರ್ಗಸೂಚಿ ಬಂದಿಲ್ಲ

ಗ್ರಾ.ಪಂ. ಮೂಲಕ ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರದ ಜತೆಗೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಬಗ್ಗೆ ಸರಕಾರದಿಂದ ಆದೇಶವಾಗಿದೆ. ಆದರೆ ವಿಸ್ತೃತ ಮಾರ್ಗಸೂಚಿ ಇನ್ನೂ ಬಂದಿಲ್ಲ. ಹೀಗಾಗಿ ಈ ಪ್ರಮಾಣ ವಿತರಣೆ ಪ್ರಕ್ರಿಯೆ ಶುರು ಮಾಡಿಲ್ಲ. ಡಾ| ವೈ.ನವೀನ್ ಭಟ್‌, ಜಿ.ಪಂ. ಸಿಇಒ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next