Advertisement

ಲಾಕ್‌ಡೌನ್‌ನಲ್ಲಿ ವಾಹನಗಳ ಸುರಕ್ಷತೆ ಹೇಗೆ?

02:36 PM May 23, 2021 | Team Udayavani |

ಒಂದು ಕಡೆ ಲಾಕ್‌ಡೌನ್‌, ಮತ್ತೂಂದುಕಡೆ ಮಳೆಗಾಲ. ಈ ಎರಡೂ ಅವಧಿಯಲ್ಲಿಕಾರು ಮತ್ತು ಬೈಕುಗಳನ್ನು  ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಸಾಮಾನ್ಯವಾಗಿ ದಿನವೂ ಗಾಡಿ ತೆಗೆಯುತ್ತಿದ್ದರೆ ಹೆಚ್ಚಿನ ಸಮಸ್ಯೆ ಇರಲ್ಲ. ಆದರೆ, ಗಾಡಿಗಳು ತುಂಬಾ ದಿನಗಳ ಕಾಲ ನಿಂತಲ್ಲೇ ನಿಂತಿರುತ್ತವೆ ಅಂದ್ರೆ ಮಾತ್ರ ಸಮಸ್ಯೆ ಹೆಚ್ಚು. ಹಾಗಾದರೆ, ಈ ಅವಧಿಯಲ್ಲಿ ನಿಮ್ಮಕಾರು, ಬೈಕುಗಳನ್ನು ಸುರಕ್ಷಿತವಾಗಿ ಹೇಗೆ ಇರಿಸಿಕೊಳ್ಳಬೇಕು ಗೊತ್ತೇ?

Advertisement

ಪಾರ್ಕಿಂಗ್

ಸಾಧ್ಯವಾದಷ್ಟು ನೆರಳಿನಲ್ಲೇ ವಾಹನಗಳನ್ನು ನಿಲ್ಲಿಸಲುಯತ್ನಿಸಿ. ನೆರಳಿಲ್ಲವೆಂದಾದರೆ, ಗಾಡಿಗೊಂಡುಕವರ್‌ ಹಾಕಿಡಿ. ಹಾಗಂತ ಮರಗಳಕೆಳಗೆ ನಿಲ್ಲಿಸಬೇಡಿ. ಲಾಕ್‌ಡೌನ್‌ ಜತೆಗೆ, ಮಳೆಯೂ ಆಗುತ್ತಿರುವುದರಿಂದ ಗಾಳಿಗೆ ಮರ ಬಿದ್ದು ವಾಹನ‌ಗ ‌ಳಿಗೆ ಹಾನಿಯಾಗ ‌ಬಹುದು. ಹಾಗೆಯೇ, ನೀವು ನಿಲ್ಲಿಸುವ ಜಾಗ ಸಮತಟ್ಟಾಗಿರಲಿ. ಬೈಕ್‌ ಆದರೆ, ಮಿಡಲ್‌ ಸ್ಟಾಂಡ್‌ ಹಾಕಿ ನಿಲ್ಲಿಸಿ.

ಹ್ಯಾಂಡ್ಬ್ರೇಕ್ಬೇಡ

ಹೆಚ್ಚು ದಿನ ಒಂದೇಕಡೆ ಗಾಡಿ ನಿಲ್ಲುವುದರಿಂದ ಹ್ಯಾಂಡ್‌ ಬ್ರೇಕ್‌ ಉಪಯೋಗಿಸಬೇಡಿ. ಗಾಡಿಯನ್ನು ಮೊದಲನೇ ಗೇರ್‌ಗೆ ಹಾಕಿ. ಸಮತಟ್ಟಾದ ಜಾಗದಲ್ಲಿ ನಿಲ್ಲಿಸಿ. ಟೈರ್‌ಗೆ ಅಡ್ಡಲಾಗಿ ಕಲ್ಲು ಅಥವಾ ಇಟ್ಟಿಗೆ ಇಡಿ

Advertisement

ಕ್ಯಾಬಿನ್ಚೆಕ್ಮಾಡಿ

ಆಗಾಗ ಕಾರಿನ ಕ್ಯಾಬಿನ್‌ ಅನ್ನು ಚೆಕ್‌ ಮಾಡಿ. ಅಷ್ಟೇ ಅಲ್ಲ,ಹಿಂದಿನ ಲಗ್ಗೇಜ್‌ ಇಡುವ ಸ್ಥಳದ ಮೇಲೂ ಇರಲಿ ಗಮನ. ಇದರಲ್ಲಿ ಇಲಿ ಸೇರಿಕೊಂಡು ವೈರ್‌ಗಳನ್ನು ಕಡಿಯುವ ಸಾಧ್ಯತೆ ಇರುತ್ತದೆ.ಕಾರಿನಲ್ಲಿ ತಿನ್ನುವ ವಸ್ತುಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಧ್ಯವಾದಷ್ಟು ನಿಲ್ಲಿಸುವ ಮುನ್ನ, ಗಾಡಿಯನ್ನು ತೊಳೆದು, ಫುಲ್‌ಕ್ಲೀನ್‌ ಮಾಡಿ ನಿಲ್ಲಿಸಿ.

ಫುಲ್ಟ್ಯಾಂಕ್‌  ಇರಲಿ

ತುಂಬಾ ದಿನಗಳ ಕಾಲ ಕಾರು ಅಥವಾ ಬೈಕಿನ ಪೆಟ್ರೋಲ್‌ ಟ್ಯಾಂಕ್‌ ಅನ್ನುಖಾಲಿ ಇಡುವುದು ಸರಿಯಲ್ಲ. ಇದರಿಂದ ಒಳಗೆ ತೇವಾಂಶ ಹೆಚ್ಚಾಗಬಹುದು. ಇದನ್ನು ತಪ್ಪಿಸಲು ಫುಲ್  ಟ್ಯಾಂಕ್‌ ಮಾಡಿಸಿ ಇಡಿ.

ಬ್ಯಾಟರಿ  ಮೇಲಿರಲಿ  ಗಮನ

ಗಾಡಿ ಸ್ಟಾರ್ಟ್‌ ಆಗಬೇಕು ಅಂದರೆ, ಕಾರು ಅಥವಾ ಬೈಕಿನಲ್ಲಿನ ಬ್ಯಾಟರಿ ತುಂಬಾ ಮುಖ್ಯ. ಆದರೆ, ಹೆಚ್ಚುಕಾಲ ವಾಹನಗಳು ನಿಂತಲ್ಲೇ ನಿಂತಿದ್ದರೆ, ಬ್ಯಾಟರಿ ಡ್ರೈ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಆಗಾಗಕಾರು ಅಥವಾ ಬೈಕ್‌ ಸ್ಟಾರ್ಟ್‌ ಮಾಡಿ, ಒಂದೈದು ನಿಮಿಷ  ಐಡ್ಲಿಂಗ್‌ನಲ್ಲಿ ಇಟ್ಟು ಆಫ್ ಮಾಡಿ

ಆಗಾಗ ಟೈರ್ಪರಿಶೀಲಿಸಿ

ಹೆಚ್ಚುಕಾಲ ಗಾಡಿ ನಿಲ್ಲಿಸಿದ್ದರೆ, ಟೈರ್‌ನಲ್ಲಿ ಗಾಳಿ ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಆಗಾಗ, ಅಂದರೆ,ಕನಿಷ್ಠ ವಾರಕ್ಕೊಮ್ಮೆಯಾದರೂ, ಟೈರ್‌ನಲ್ಲಿ ಎಷ್ಟು ಗಾಳಿ ಇದೆ ಎಂಬುದನ್ನು ಪರಿಶೀಲಿಸಿ. ಒಂದು ವೇಳೆ ಒಂದು ಗಾಲಿಯಲ್ಲಿ ಗಾಳಿ ಹೋಗಿ ಉಳಿದ ಮೂರರಲ್ಲಿ ಗಾಳಿ ಇದ್ದರೆ, ಗಾಡಿಗೆ ಸಮಸ್ಯೆ ಹೆಚ್ಚು. ಇದರಿಂದ ಟೈರ್‌ನಲ್ಲಿ ಕ್ರ್ಯಾಕ್‌ ಬರುವುದು ಹೆಚ್ಚು.

Advertisement

Udayavani is now on Telegram. Click here to join our channel and stay updated with the latest news.

Next