ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಕಾನೂನು ರೀತಿ ಶಾಸನಸಭೆ ಪ್ರವೇಶಿಸಲು ಅರ್ಹತೆ ಇಲ್ಲದಿದ್ದರೆ, ಸಂವಿಧಾನ ರೀತ್ಯಾ ಪ್ರಮಾಣವಚನ ಸ್ವೀಕರಿಸಿದ್ದರೆ ಅಥವಾ ಪ್ರಮಾಣಪತ್ರ ಸಲ್ಲಿಸದಿದ್ದರೆ, ನಿಗದಿತ ಸಮಯದೊಳಗೆ, ನಿಯೋಜಿತ ಅಧಿಕಾರಿಗೆ ಮತ್ತು ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ ನಾಮಪತ್ರ ಸಲ್ಲಿಸಿದಿದ್ದರೆ, ನಾಮಪತ್ರ ನಿಗದಿತ ನಮೂನೆಯಲ್ಲಿ ಇಲ್ಲದಿದ್ದರೆ, ಗುರುತುಪಡಿಸಿದ ಎಲ್ಲ ವಿವರಗಳನ್ನು ಭರ್ತಿ ಅಥವಾ ನಮೂದು
ಮಾಡದಿದ್ದರೆ, ನಿಗದಿತ ಸಂಖ್ಯೆಯಲ್ಲಿ ಸೂಚಕರು ಇಲ್ಲದಿದ್ದರೆ, ಚುನಾವಣಾ ಠೇವಣಿ ಇಡದಿದ್ದರೆ, ಮೀಸಲು ಕ್ಷೇತ್ರಗಳಲ್ಲಿ ಅಭ್ಯರ್ಥಿ ಮೀಸಲಾತಿ ನಿಗದಿಪಡಿಸಿದ ವರ್ಗಕ್ಕೆ ಸೇರದೇ ಇದ್ದರೆ, ನಾಮಪತ್ರದಲ್ಲಿ ಕಾನೂನು ಲೋಪಗಳಿದ್ದರೆ ಅದು ತಿರಸ್ಕರಿಸಲಾ ಗುತ್ತದೆ.ಒಂದೊಮ್ಮೆ ನಾಮಪತ್ರ ತಿರಸ್ಕಾರಗೊಂಡರೆ ಸಂಬಂಧಪಟ್ಟ ಅಭ್ಯರ್ಥಿ
ಚುನಾವಣಾಧಿಕಾರಿಯಿಂದ ತಕ್ಷಣ ಅದರ ಪ್ರಮಾಣೀಕೃತ ಆದೇಶ ಪ್ರತಿ ಪಡೆದುಕೊಳ್ಳುವ ಹಕ್ಕು ಹೊಂದಿರುತ್ತಾನೆ. ತಕ್ಷಣ ಅದಕ್ಕೆ ಆಕ್ಷೇಪಿಸಿ ವಿವರಣೆ ನೀಡಲು ಅಭ್ಯರ್ಥಿಯು ಕಾಲಾವಕಾಶ ಕೋರಬಹುದು. ಅದಕ್ಕೆ ಸೆಕ್ಷನ್ 36ರ ಉಪ ನಿಯಮ 15ರ ಪ್ರಕಾರ ಆಕ್ಷೇಪಣೆ ಸಲ್ಲಿಸಿದ ನಂತರದ ಒಂದು ದಿನ ಮಾತ್ರ ಚುನಾವಣಾಧಿಕಾರಿ ಕಾಲಾವಕಾಶ ಕೊಡುತ್ತಾರೆ.
Advertisement