Advertisement
ಉತ್ತರಪ್ರದೇಶ ಸೇರಿ ಐದು ರಾಜ್ಯಗಳಿಗೆ ಮುಂದಿನ ವರ್ಷದ ಮೊದಲರ್ಧದಲ್ಲಿ ಚುನಾ ವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಈ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಪ್ರಧಾನಮಂತ್ರಿಗಳ ಮೊಬೈಲ್ ಆ್ಯಪ್‌ನಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಅಪ್‌ಲೋಡ್ ಮಾಡಲಾಗಿದೆ.
Related Articles
Advertisement
“ಮತ ಚಲಾಯಿಸುವ ಸಂದರ್ಭದಲ್ಲಿ ಅಭ್ಯರ್ಥಿಯ ಜಾತಿ, ಧರ್ಮ, ಅವರು ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಗಮನಿಸುತ್ತೀರಾ’ ಎಂದೂ ಕೇಳಲಾಗಿದೆ.
ಅಭ್ಯರ್ಥಿಗಳ ಆಯ್ಕೆಗೆ ಸಹಕಾರಿ?: ಮುಂದಿನ ವರ್ಷದ ಮೊದಲ ಭಾಗದಲ್ಲಿ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ, ಮಣಿಪುರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಸಮೀಕ್ಷೆ ನಡೆಸುವುದರಿಂದ ಈ ಐದು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡಬಹುದು ಎಂಬ ಬಗೆಗಿನ ಲೆಕ್ಕಾಚಾರವೂ ಇದೆ. ಐದು ರಾಜ್ಯಗಳಲ್ಲಿರುವ ಬಿಜೆಪಿ ಮುಖಂಡರ ಪೈಕಿ ಮೂವರು ಪ್ರಮುಖರ ನಾಯಕರ ಹೆಸರನ್ನೂ ಉಲ್ಲೇಖೀಸುವಂತೆ ಕೋರಿರುವುದು ಮಹತ್ವದ್ದು.
ಸರಕಾರದ ಮೌಲ್ಯಮಾಪನ: ಆಯಾ ರಾಜ್ಯ ಸರಕಾರಗಳು ರಸ್ತೆ, ಇಂಧನ, ಕುಡಿಯುವ ನೀರು, ಕೈಗೆಟಕುವ ದರದಲ್ಲಿ ಆರೋಗ್ಯ ವ್ಯವಸ್ಥೆ, ಶಿಕ್ಷಣ, ಪಡಿತರ ಸಂಬಂಧಿ ವಿಚಾರಗಳು, ಕಾನೂನು ಮತ್ತು ಸುವ್ಯವಸ್ಥೆ, ಉದ್ಯೋಗ ಸೃಷ್ಟಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯುದೀಕರಣ, ರೈತರ ಕಲ್ಯಾಣ ಕ್ಷೇತ್ರಗಳಲ್ಲಿ ಯಾವ ಸಾಧನೆ ಮಾಡಲಾಗಿದೆ ಎಂದೂ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಜನರಿಗೆ ಹೆಚ್ಚು ಅನುಕೂಲವಾಗಿರುವ ಯೋಜನೆ ಯಾವುದು ಎಂಬ ಬಗ್ಗೆಯೂ ಅಭಿಪ್ರಾಯ ಆಹ್ವಾನಿಸಲಾಗಿದೆ. ಬಿಜೆಪಿಗೆ ಮತ ಹಾಕಲು ತಿಳಿಸುತ್ತೀರಾ- ಹೌದು ಅಥವಾ ಇಲ್ಲ ಎಂಬ ಉತ್ತರದೊಂದಿಗೆ ಸಮೀಕ್ಷೆ ಮುಕ್ತಾಯವಾಗುತ್ತದೆ.