Advertisement

ನಿಮ್ಮ ಸಂಬಂಧ ಎಷ್ಟು ಗಟ್ಟಿ? ಅದನ್ನು ಪರೀಕ್ಷೆ ಮಾಡಬೇಕೆ?

07:00 AM Apr 03, 2018 | |

ಯಾವ ಸಂಬಂಧದಲ್ಲೂ ಶೇ.100ರಷ್ಟು ತೃಪ್ತಿ ಸಿಗುವುದಿಲ್ಲ. ಏಕೆಂದರೆ ಮೂಲತಃ ನಮ್ಮ ಮನಸ್ಸಿಗೆ ತೃಪ್ತಿ ಎಂಬುದೇ ಇಲ್ಲ. ಅದು ಇನ್ನಷ್ಟು ಮತ್ತಷ್ಟು ಕೇಳುತ್ತಲೇ ಇರುತ್ತದೆ. ಆದ್ದರಿಂದಲೇ ನಮಗೆ ಜೀವನ ಸಂಗಾತಿಯ ಜೊತೆಗೂ, ತಂದೆ-ತಾಯಿಯ ಜೊತೆಗೂ ಮನಸ್ತಾಪಗಳು ಇದ್ದೇ ಇರುತ್ತವೆ. ಅವೆಲ್ಲಾ ಜೀವನದ ಅಮೂಲ್ಯ ಅನುಭವಗಳು. 

Advertisement

ಬದುಕಿನಲ್ಲಿ ನಿರಂತರವಾಗಿ ಹೊಸ ಹೊಸ ಸಂಬಂಧಗಳು ಏರ್ಪಡುತ್ತಲೇ ಇರುತ್ತವೆ. ಕೆಲವು ತೀರಾ ಆಪ್ತ ಸಂಬಂಧಗಳಾದರೆ, ಇನ್ನು ಕೆಲವು ಮೇಲುಮೇಲಿನ ಸಂಬಂಧಗಳು, ಆದರೆ ಎಲ್ಲರ ಬದುಕಿನಲ್ಲೂ ಒಂದಷ್ಟು ಅತ್ಯಂತ ಗಾಢ ಸಂಬಂಧಗಳು ಇದ್ದೇ ಇರುತ್ತವೆ. ನಾವು ಕೂಡ ಎಷ್ಟೋ ಸಲ ಬಯಸಿ ಬಯಸಿ ಸಂಬಂಧ ಗಳ ಬಂಧನದೊಳಗೆ ಹೋಗಲು ಇಷ್ಟಪಡುತ್ತೇವೆ. ಹಾಗೆಯೇ ಕೆಲ ಸಂಬಂಧಗಳನ್ನು ಕಡಿದುಕೊಂಡು ಹೊರಗೆ ಬರುವುದಕ್ಕೂ ಆಸೆ ಪಡುತ್ತೇವೆ. ಈಗಂತೂ ಒಂದು ಸಂಬಂಧದಿಂದ ಇನ್ನೊಂದು ಸಂಬಂಧಕ್ಕೆ ಪ್ರವೇಶ ಹಾಗೂ ನಿರ್ಗಮನಗಳು ಬೇಗ ಬೇಗ ನಡೆ ಯುತ್ತಿವೆ. ಏಕೆಂದರೆ ನಾವು ಬಹಳ ಫಾಸ್ಟ್‌ ಆಗಿದ್ದೇವೆ. ಯಾವುದೇ ಸಂಬಂಧವನ್ನು ಶಾಶ್ವತವಾಗಿ ಇರಿಸಿಕೊಳ್ಳುವ ತಾಳ್ಮೆ ನಮ್ಮಲ್ಲಿ ಕಡಿಮೆಯಾಗುತ್ತಿದೆ. ಅದು ಅತ್ಯಗತ್ಯ ಅಂತಲೂ ನಮಗೆ ಅನ್ನಿಸುತ್ತಿಲ್ಲ. ಹಾಗಾಗಿ ಬಹುತೇಕ ಸಂಬಂಧಗಳು ಕ್ಷಣಿಕವಾಗುತ್ತಿವೆ.

ಹೆಸರಿಗೆ ಮಾತ್ರ ಸಂಬಂಧಗಳು
ಕೆಲವರು ಸಂಬಂಧಗಳಿಗೆ ಹೆಸರು ಮಾತ್ರ ಕೊಟ್ಟಿರುತ್ತಾರೆ ಆದರೆ ಆ ಸಂಬಂಧಗಳಿಗಿರುವ ಜವಾಬ್ದಾರಿಗಳನ್ನು ಮಾತ್ರ ಸರಿಯಾಗಿ ನಿಭಾಯಿಸುವುದಿಲ್ಲ. ತಂದೆ ತಾಯಿಗಳ ಜೀವನದಲ್ಲಿ ನಮಗೆ ಎಂಟ್ರಿಯಷ್ಟೇ ಇರುತ್ತದೆ, ಎಕ್ಸಿಟ್‌ ಇರುವುದಿಲ್ಲ. ಆದರೂ ನಮ್ಮ ಜೀವನದಲ್ಲಿ ನಾವೇ ಒಮ್ಮೊಮ್ಮೆ ತಂದೆ-ತಾಯಿಗೆ ಎಕ್ಸಿಟ್‌ ಪಾಸ್‌ ಕೊಡುತ್ತೇವೆ. ನನ್ನ ಲೈಫ್ ನೋಡ್ಕೊàಬೇಕು, ಅವರು ಹೇಳೊದು ನಮಗೆ ಸರಿಹೊಂದುವುದಿಲ್ಲ, ನಾವು ಹೇಳ್ಳೋದು ಅವರಿಗೆ ಅರ್ಥ ಆಗುವುದಿಲ್ಲ. ವಯಸ್ಸಾದವರಿಗೆ ಬುದ್ಧಿª ಹೇಳ್ಳೋದು ಕಷ್ಟ ಹಾಗಾಗಿ ಅವರಿಂದ ದೂರ ಸರಿಯುವುದೇ ಒಳ್ಳೆಯದು ಎಂದು ಲೆಕ್ಕ ಹಾಕಿ ಜನ್ಮಕೊಟ್ಟ ಸಂಬಂಧದಿಂದಲೇ ದೂರ ಸರಿಯಲು ಪ್ಲಾನ್‌ ಮಾಡುವವರೂ ಇರುತ್ತಾರೆ. ಇನ್ನು ಅಕ್ಕ-ಅಣ್ಣ, ತಮ್ಮ-ತಂಗಿ ಇಂತಹ ಎಲ್ಲ ಸಂಬಂಧಗಳು ಮೇಲ್ನೋ ಟಕ್ಕೆ ಚೆನ್ನಾಗಿಯೇ ಇದ್ದರೂ ಅವುಗಳ ಒಳಗಿನ ಆಪ್ತತೆ ಕಡಿಮೆ ಯಾಗುತ್ತಿದೆ. ಕಾರಣ, ನಮ್ಮ ಮನಸ್ಸು ಹೆಚ್ಚೆಚ್ಚು ವ್ಯಾವಹಾರಿಕ ವಾಗುತ್ತಿರುವುದು. ಒಡಹುಟ್ಟಿದ್ದ ಅಣ್ಣ ಅಕ್ಕಂದಿರನ್ನೇ ಚೆನ್ನಾಗಿ ನೋಡಿ ಕೊಳ್ಳದವರು ಬದುಕಿನ ಮಧ್ಯದಲ್ಲಿ ಯಾವಾಗಲೋ ಪ್ರವೇಶ ಮಾಡಿದ ಆಪ್ತರಿಗೆ ಅಣ್ಣ, ಅಕ್ಕ ತಂಗಿ ಅಂತ ಟೈಟಲ್‌ ಕೊಡುತ್ತಾರೆ. ಇರುವುದನ್ನೇ ಉಳಿಸಿಕೊಳ್ಳ ಲಾಗದವರು ಇಲ್ಲದ ಸಂಬಂಧಗಳನ್ನು ಸೃಷ್ಟಿಸಿಕೊಂಡು ಅವುಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ? ಅಂತಹ ಸಂಬಂಧಗಳು ಯಾವುತ್ತು ಕೊನೆಯಾಗುತ್ತವೆಯೋ ಯಾರಿಗೂ ಗೊತ್ತಿರುವುದಿಲ್ಲ.

ರಕ್ತ ಸಂಬಂಧಗಳೇ ಹೀಗಾದ ಮೇಲೆ ಋಣಾನುಬಂಧಗಳ ಮೇಲೆ ಬೆಳೆಯುವ ಸಂಬಂಧಗಳಿಗೆ ಬೆಲೆ ಎಲ್ಲಿ? ಸ್ನೇಹ-ಪ್ರೀತಿ- ಮದುವೆ ಇವು ರಕ್ತ ಸಂಬಂಧವಲ್ಲದಿದ್ದರೂ ನಮ್ಮ ಜೀವನವನ್ನು ಭಾವುಕತೆಯಿಂದ ಹಿಂಡಿ ಹಾಕುತ್ತವೆ. ಮಾನಸಿಕವಾಗಿ ನಮಗೆ ಎಷ್ಟೇ ತೊಂದರೆಯಾದರೂ ಮತ್ತೆ ನಮ್ಮ ಮನಸ್ಸನ್ನು ಸರಿಪಡಿಸಲು ಸ್ನೇಹ-ಪ್ರೀತಿಯೇ ಬೇಕು. ಹುಡುಗ ಹುಡುಗಿ ಯರಲ್ಲಿ ಪ್ರೀತಿಯ ಮುಂದುವರಿದ ಭಾಗ ಮದುವೆಯೆಂಬ ಸುಂದರ ಹಂತ. ಮದುವೆಯ ವಯಸ್ಸಿಗೆ ಬಂದಾಗ ಎಲ್ಲಾ ಸಂಬಂಧಗಳಿಗಿಂತ ಮದುವೆಯೇ ಮುಖ್ಯ. ಯಾವಾಗ ನನ್ನ ಮದುವೆ ಆಗುತ್ತೋ, ಯಾವಾಗ ನನಗೂ ಶಾಶ್ವತ ಸಂಗಾತಿ ಸಿಗುತ್ತಾರೋ ಅಂತ ಪ್ರತಿಯೊಬ್ಬರೂ ಹುಡುಕಾಡುತ್ತಾರೆ. 

ಕೆಲವರ ಜೀವನದಲ್ಲಿ ಪ್ರೀತಿಸಿದವರೇ ಮದುವೆಯ ಸಂಬಂಧಕ್ಕೆ ಬೆಸೆದುಕೊಳ್ಳುವಂತಾ ಗುತ್ತದೆ, ಇನ್ನು ಕೆಲವರಿಗೆ ಪ್ರೀತಿಯ ಸಂಬಂಧ ಮುರಿದು ಮದು ವೆಯ ಸಂಬಂಧ ಬೇರೆಯವರ ಜೊತೆ ಶುರುವಾಗುತ್ತದೆ. ಮತ್ತೆ ಕೆಲವರು ಮದುವೆಯ ಹೊಸ ಸಂಬಂಧವನ್ನು ಜೋಡಿಸಿಕೊಂಡರೂ ಪ್ರೀತಿಯ ಹಳೇ ಸಂಬಂಧ ವನ್ನು ಹಾಗೇ ಮುಂದುವರಿಸುತ್ತಾರೆ.

Advertisement

ಎಂಟ್ರಿ – ಎಕ್ಸಿಟ್‌ ಸುಲಭವಾ?
ಮೊದಲೆಲ್ಲ ಕಾಲೇಜು ದಿನಗಳಲ್ಲಿ ಪ್ರೀತಿ-ಪ್ರೇಮದ ಸಂಬಂಧ ಗಳು ಏರ್ಪಡುತ್ತಿದ್ದವು. ಈಗ ಶಾಲೆಯ ಹಂತದಲ್ಲೇ ಅವು ಶುರುವಾಗಿದೆ. ಪ್ರಾಥಮಿಕ, ಪ್ರೌಢಶಾಲೆಯ ಹಂತದಲ್ಲೇ ಮಕ್ಕಳು ಪ್ರೀತಿಗೆ ಬೀಳುವುದು ಇಂದು ಕಾಮನ್‌ ಆಗುತ್ತಿದೆ. ಓದುವುದಕ್ಕೆ ಬೇಕಾದಷ್ಟಿದ್ದರೂ ಈ ವಯಸ್ಸಿನಲ್ಲೇ ಪ್ರೀತಿಸುವುದಕ್ಕೆ ಹೇಗೆ ಟೈಂ ಮಾಡಿಕೊಳ್ತಾರೋ ನಾ ಕಾಣೆ! ಅಷ್ಟಕ್ಕೂ ಈ ವಯಸ್ಸಿನಲ್ಲಿ ನಿಜವಾದ ಪ್ರೀತಿಯ ಅರ್ಥವಾದರೂ ಅವರಿಗೆ ತಿಳಿದಿರುತ್ತದೆಯೇ? ಇಲ್ಲ. ಯಾರನ್ನೋ ನೋಡಿ, ಸಿನಿಮಾದಲ್ಲಿ ತೋರಿಸುವುದನ್ನು ಅನುಕರಿಸಲು ಹೋಗಿ ಮಕ್ಕಳು ಲವ್‌ ಮಾಡಲು ಶುರು ಮಾಡುವುದು ಅಪಾಯಕಾರಿ ಬೆಳವಣಿಗೆ. ಮಕ್ಕಳ ಮುಂದೆ ತಂದೆ-ತಾಯಿಯ ಸಂಭಾಷಣೆ, ಮಕ್ಕಳ ಕೈಯಲ್ಲಿರುವ ಪೋನ್‌, ಅತಿಯಾಗಿ ಟೀವಿ ನೋಡುವುದು, ಇಂಟರ್ನೆಟ್‌ ನೋಡುವುದು ಇವೆಲ್ಲದರಿಂದ ಮಕ್ಕಳು ವಯಸ್ಸಿಗೆ ಮೀರಿದ ಅನುಭವಗಳತ್ತ ಹೊರಟಿದ್ದಾರೆ. 

ಇವತ್ತು ಹೀಗಿರುವ ಮಕ್ಕಳು ಮುಂದೆ ಜೀವನದಲ್ಲಿ ಸಂಬಂಧ ಗಳ ಚೌಕಟ್ಟಿಗೆ ಗೌರವ ಕೊಡುತ್ತಾರಾ? ಒಂದು ಸಂಬಂಧವನ್ನು ಸರಿಯಾಗಿ ನಿಭಾಯಿಸಲು ಯೋಗ್ಯರಿಲ್ಲದವರಿಗೆ ಜೀವನದಲ್ಲಿ ಮುಂಬರುವ ಸಂಬಂಧಗಳನ್ನು ಕಾಪಾಡಿಕೊಳ್ಳುವ ಒಳ್ಳೆಯತನ ಇರುತ್ತದೆಯಾ? ಕೆಲವರಿಗಂತೂ ಯಾವ ಸಂಬಂಧವೂ ಖುಷಿ ಕೊಡುವುದಿಲ್ಲ. ತಂದೆ-ತಯಿ ಮಾತನಾಡಿದರೆ ರೇಗಾಡುತ್ತಾರೆ. ಹೆಂಡತಿ ಮಾತ ನಾಡಿದರೆ ಹೊಡೆಯಲು ಹೋಗುತ್ತಾರೆ. ಕೆಲ ಹೆಂಡತಿ ಯರಿಗೂ ಸಹ ಗಂಡನ ಮಾತುಗಳು, ನಡವಳಿಕೆ ನೆಮ್ಮದಿ ಕೊಡುವುದಿಲ್ಲ. ಇವೆಲ್ಲ ಎಲ್ಲರ ಜೀವನದಲ್ಲೂ ಇದ್ದಿದ್ದೇ. ಆದರೆ ನನಗೆ ಮಾತ್ರ ಹೀಗಾಗುತ್ತಿದೆ ಅಂತ ಬೇರೆ ಕಡೆ ಸಂಬಂಧ ಹುಡುಕಿಕೊಂಡು ಹೋಗುವವರು ಹೆಚ್ಚು ಕಷ್ಟ ಅನುಭವಿಸುತ್ತಾರೆ. ಈಗಿರುವ ಸಂಬಂಧವನ್ನು ನಿಭಾಯಿಸಲು ಬಾರದವರಿಗೆ ಮುಂದಿನ ಹೊಸ ಸಂಬಂಧವನ್ನೂ ನಿಭಾಯಿಸಲು ಬರುವುದಿಲ್ಲ. ಇದರಲ್ಲಿ ಅನುಮಾನವೇ ಬೇಡ.

ಹೊರಗಿನ ಸಂಬಂಧಗಳು
ಕೆಲವು ಸಲ ಋಣಾನುಬಂಧಗಳು ಮಿಸ್‌ ಮ್ಯಾಚ್‌ ಆಗಿರುತ್ತವೆ. ಆ ಸಂಬಂಧಗಳು ಸುಖಕ್ಕಿಂತ ಹೆಚ್ಚು ದುಃಖ, ನೋವುಗಳನ್ನೇ ಕೊಡುತ್ತವೆ. ಆದರೂ ಆ ಸಂಬಂಧಗಳನ್ನು ಕಿತ್ತು ಹಾಕುವುದು ಅಷ್ಟು ಸುಲಭ ಅಲ್ಲ! ಎಷ್ಟೇ ಆದರೂ ಹೊರಗಿನ ಸಂಬಂಧಗಳಿಗೆ ಕಾಲಾವಧಿ ಇರುತ್ತದೆ. ಅವು ಶಾಶ್ವತವಾಗಿರಲು ಸಾಧ್ಯವಿಲ್ಲ. ಆಕರ್ಷಣೆ ಇರುವವರೆಗೆ ಅವು ಜೀವಂತವಾಗಿರುತ್ತವೆ. ಆಕರ್ಷಣೆ ಮಾಡಿದ ಮೇಲೆ ಮುರಿದು ಬೀಳುತ್ತವೆ. ಇದಕ್ಕೆ ಮೂಲ ಕಾರಣ ನಮ್ಮ ಮನಸ್ಸು. ಅದು ವಯಸ್ಸು ಸಂದರ್ಭಗಳು ಬದಲಾದಂತೆ ತಾನೂ ಬದಲಾಗುತ್ತಿರುತ್ತದೆ. ನಮಗೆ ಹದಿನೆಂಟನೇ ವಯಸ್ಸಿನಲ್ಲಿ ಇಷ್ಟವಾದದ್ದು ಈಗ ಇಷ್ಟವಾಗದೇ ಇರಬಹುದು. ಇನ್ನೂ ಹತ್ತು ವರ್ಷಗಳ ನಂತರ ನಮ್ಮ ಜೀವನ ಬೇರೆ ರೂಪಾಂತರವನ್ನೇ ಪಡೆಯಬಹುದು.

ಯಾವುದೇ ಸಂಬಂಧಕ್ಕೂ ಬೇಕಾದಾಗ ಎಂಟ್ರಿ ಪಡೆದು ಬೇಡದಿದ್ದಾಗ ಎಕ್ಸಿಟ್‌ ಆಗಲು ಸಾಧ್ಯವಿಲ್ಲ, ಎಲ್ಲ ಹೊರಗಿನ ಸಂಬಂಧ ಗಳೂ ಹೊಸದರಲ್ಲಿ ಸುಂದರವಾಗಿ ಕಾಣುತ್ತವೆ. ದಿನ ಕಳೆಯುತ್ತಿದ್ದಂತೆ ಅದಕ್ಕಿರುವ ಲಿಮಿಟೇಷನ್‌ಗಳು ಗೊತ್ತಾಗುತ್ತವೆ. ಆ  ಸಮಯದಲ್ಲಿ ಅದರಿಂದ ಹೊರಬರಲು ಸಾಕಷ್ಟು ಜಂಜಾಟಗಳೂ ಇರುತ್ತವೆ. ಆಗ ನಮ್ಮ ತಪ್ಪುಗಳು ಅರಿವಿಗೆ ಬರತೊಡಗುತ್ತವೆ. ನಾವು ಬಯಸಿ ದಂತೆ ಯಾವ ಸಂಬಂಧದಲ್ಲೂ ಶೇ.100 ರಷ್ಟು ತೃಪ್ತಿ ಸಿಗುವುದಿಲ್ಲ. ಏಕೆಂದರೆ ಮೂಲತಃ ನಮ್ಮ ಮನಸ್ಸಿಗೆ ತೃಪ್ತಿ ಎಂಬುದೇ ಇಲ್ಲ. ಅದು ಇನ್ನಷ್ಟು ಮತ್ತಷ್ಟು ಕೇಳುತ್ತಲೇ ಇರುತ್ತದೆ. ಆದ್ದರಿಂದಲೇ ನಮಗೆ ಜೀವನ ಸಂಗಾತಿಯ ಜೊತೆಗೂ, ತಂದೆ-ತಾಯಿಯ ಜೊತೆಗೂ ಮನಸ್ತಾಪಗಳು ಇದ್ದೇ ಇರುತ್ತವೆ. ಅವೆಲ್ಲಾ ಜೀವನದ ಅಮೂಲ್ಯ ಅನುಭವಗಳು. ಒಂದೊಂದು ಜಗಳವೂ ನಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತವೆ. ಅವು ನಮ್ಮ ಮನಸ್ಸನ್ನು ಪರಿವ ರ್ತನೆ ಮಾಡಿ, ಸಂಬಂಧಗಳ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ.

ಒಂದು ಸಂಗತಿ ನೆನಪಿಡಿ. ಎಷ್ಟೇ ಪ್ರೀತಿಯ ಸಂಬಂಧವಾಗಿದ್ದರೂ ಅದರಲ್ಲಿ ಕೊರತೆಗಳಿರುತ್ತವೆ. ಎಷ್ಟೇ ದ್ವೇಷಿಸುವ ಸಂಬಂಧವಾಗಿದ್ದರೂ ಅದರಲ್ಲಿ ಆಪ್ತತೆಯಿರುತ್ತದೆ. ಸ್ವಲ್ಪ ಪ್ರಯತ್ನಪಟ್ಟರೆ ಅವುಗಳನ್ನು ಸುಧಾರಿಸಿಕೊಳ್ಳಬಹುದು. ಸಂಬಂಧ ಎಂಬ ಪದದಲ್ಲಿ ಇರುವ ಬಂಧವೇ ಇದನ್ನು ಹೇಳುತ್ತದೆ. ಈ ಬಂಧ ಅಷ್ಟು ಸುಲಭಕ್ಕೆ ಕಳಚಿಕೊಳ್ಳುವಂಥದ್ದಲ್ಲ.

Advertisement

Udayavani is now on Telegram. Click here to join our channel and stay updated with the latest news.

Next