ಹೊಸದಿಲ್ಲಿ : 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ 2018ರ ಚುನಾವಣೆಗೆ ಮೇ 12ರಂದು ಮತದಾನ, ಮೇ 15ರಂದು ಮತ ಎಣಿಕೆಯ ದಿನಾಂಕಗಳು ಮುಖ್ಯ ಚುನಾವಣಾ ಆಯುಕ್ತರಿಂದ ಅಧಿಕೃತವಾಗಿ ಪ್ರಕಟವಾಗುವ ಮುನ್ನವೇ ಹೇಗೆ ಸೋರಿಕೆಯಾದವು ಎಂಬ ಮಾಧ್ಯಮ ಪ್ರಶ್ನೆ, ಇಸಿ ಓಂ ಪ್ರಕಾಶ್ ರಾವತ್ ಅವರು ಸುದ್ದಿಗೋಷ್ಠಿಯಲ್ಲಿ ಗೊಂದಲ, ಕ್ಷೋಭೆಗೆ ಕಾರಣವಾಯಿತು.
ಆದರೆ ಇದನ್ನೊಂದು ವಿವಾದ ವಿಷಯವನ್ನಾಗಿ ಮಾಡಬಯಸದ ರಾವತ್ ಅವರು ಇಂದಿನಿಂದಲೇ ಜಾರಿಗೆ ಬಂದಿರುವ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳನ್ನು ಕಣ್ಣಲ್ಲಿ ಕಣ್ಣಿಟ್ಟು ವರದಿ ಮಾಡುವಂತೆ ಮಾಧ್ಯಮದವರನ್ನು ಕೋರಿದರು. ಯಾವುದೇ ಅಭ್ಯರ್ಥಿ ಅಥವಾ ಪಕ್ಷ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಅದಕ್ಕೆ ಅತ್ಯಧಿಕ ಮಹತ್ವ ನೀಡಿ ಪ್ರಕಟಗೊಳಿಸಿ ಎಂದು ರಾವತ್ ಕರೆ ನೀಡಿದರು.
ಮತದಾರರ ವ್ಯವಸ್ಥಿತಿ ಜಾಗೃತಿ ಅಭಿಯಾನ ಜಾರಿಯಲ್ಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನಕ್ಕೆ ಬರುವಂತೆ ಮಾಡುವುದಕ್ಕೆ ಆದ್ಯತೆ ಮತ್ತು ಮಹತ್ವ ನೀಡಬೇಕು ಎಂದವರು ಹೇಳಿದರು.
ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣಾ ವೆಚ್ಚಕ್ಕೆ 28 ಲಕ್ಷ ರೂ.ಗಳ ಗರಿಷ್ಠ ಮಿತಿಯನ್ನು ಹೇರಲಾಗಿದೆ. ಮತಗಟ್ಟೆ ಖರ್ಚುಗಳು ಕೂಡ ಅಭ್ಯರ್ಥಿಯ ಖರ್ಚಿನ ಬಾಬಿ¤ನಲ್ಲಿ ಸೇರುತ್ತವೆ ಎಂದು ಇಸಿ ಹೇಳಿದರು.
ಮುಕ್ತ ಹಾಗೂ ನಿರ್ಭೀತ ಮತದಾನಕ್ಕಾಗಿ ದುರ್ಬಲ ವರ್ಗದವರಿಗೆ ಪೂರ್ಣ ರಕ್ಷಣೆ ನೀಡಲಾಗುವುದು. ಕಳೆದ ಚುನಾವಣೆಗಳಲ್ಲಿ ಕೆಲವೊಂದು ಅಪಾಧಗಳು ನಡೆದಿರುವುದರಿಂದ ಈ ಬಾರಿ ಅವು ಮರುಕಳಿಸದಂತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವ ಸಲುವಾಗಿ ಸಿಆರ್‌ಪಿಎಫ್ ನಿಯೋಜಿಸಲಾಗುವುದು ಎಂದು ಓಂ ಪ್ರಕಾಶ್ ರಾವತ್ ಹೇಳಿದರು.