Advertisement

ಐಪಿಎಲ್‌ ಹರಾಜು ಮೊತ್ತ ಆಟಗಾರರಿಗೆ ಹೇಗೆ ಸಿಗುತ್ತದೆ?

12:06 AM Feb 16, 2022 | Team Udayavani |

ಮೊನ್ನೆಯಷ್ಟೇ ಐಪಿಎಲ್‌ ಹರಾಜು ಮುಗಿದಿದೆ. ಇಶಾನ್‌ ಕಿಶನ್‌ ಈ ಬಾರಿ ಅತೀ ಹೆಚ್ಚು ಅಂದರೆ, 15.25 ಕೋಟಿ ರೂ.ಗಳಿಗೆ ಮಾರಾಟವಾಗಿದ್ದಾರೆ. ಇವರ ಜತೆ 10 ಕೋಟಿ ರೂ.ಗಳಿಗಿಂತಲೂ ಮಾರಾಟವಾದ ಬಹಳಷ್ಟು ಮಂದಿ ಇದ್ದಾರೆ. ಪ್ರತೀ ತಂಡಗಳು ಹರಾಜಿನಲ್ಲಿ ಖರೀದಿಸಿದ ಆಟಗಾರರಿಗೆ ಯಾವ ರೀತಿ ಹಣ ಕೊಡುತ್ತಾರೆ? ಎಂಬ ಮಾಹಿತಿ ಇಲ್ಲಿದೆ.

Advertisement

1.ಆಟಗಾರರಿಗೆ ವೇತನ ಇರುತ್ತದೆಯೇ?
ಐಪಿಎಲ್‌ ಹರಾಜಿನಲ್ಲಿ ಖರೀದಿಸಿದ ಹಣವೇ ಆಟಗಾರನ ವೇತನ. ಇದರಲ್ಲಿ ತೆರಿಗೆ ಕಡಿತವಾಗಿ ಉಳಿದ ಹಣವನ್ನು ನೀಡಲಾಗುತ್ತದೆ.

2.ಇದು ವಾರ್ಷಿಕ ವೇತನವೇ?
ಹೌದು, ಇಶಾನ್‌ ಕಿಶನ್‌ ಅವರನ್ನು 15.25 ಕೋಟಿ ರೂ.ಗೆ ಖರೀದಿ ಮಾಡಲಾಗಿದ್ದು, ಇದು ಅವರ ವಾರ್ಷಿಕ ವೇತನವಾಗಿರುತ್ತದೆ. ಮೂರು ವರ್ಷಕ್ಕೆ ಒಪ್ಪಂದ ಮಾಡಿಕೊಂಡರೆ 45.75 ಕೋಟಿ ರೂ. ಅನ್ನು ವೇತನವಾಗಿ ನೀಡಲಾಗುತ್ತದೆ.

3.ವೇತನ ಸಿಗುವುದು ಡಾಲರ್‌ನಲ್ಲೋ ಅಥವಾ ರೂಪಾಯಿಯಲ್ಲೋ?
2008ರ ಐಪಿಎಲ್‌ ಹರಾಜು ವೇಳೆ ಡಾಲರ್‌ ಲೆಕ್ಕದಲ್ಲಿ ವೇತನ ನೀಡಲಾಗುತ್ತಿತ್ತು. ಆಗ ಡಾಲರ್‌ ಎದುರು ಭಾರತೀಯ ರೂಪಾಯಿ ಮೌಲ್ಯ 40 ರೂ.ಗಳಿತ್ತು. ಈಗ ರೂಪಾಯಿ ಮೌಲ್ಯ 75 ರೂ.ಗಳ ಸುಮಾರಿಗೆ ಹೋಗಿರುವುದರಿಂದ ರೂಪಾಯಿಯಲ್ಲೇ ವೇತನ ನೀಡಲಾಗುತ್ತದೆ.

4.ಆಟಗಾರನಿಗೆ ಪೂರ್ಣ ಹಣ ನೀಡಲಾಗುತ್ತದೆಯೇ?
ಒಂದು ವೇಳೆ ಒಬ್ಬ ಆಟಗಾರ ಐಪಿಎಲ್‌ ಪಂದ್ಯಾವಳಿಯುದ್ಧಕ್ಕೂ ಲಭ್ಯವಿದ್ದರೆ ಹಾಗೂ ಅವರು ಆಡದಿರಲಿ ಅಥವಾ ಇಲ್ಲದಿರಲಿ ಅವರಿಗೆ ಪೂರ್ಣ ಮೊತ್ತ ನೀಡಲೇಬೇಕು.

Advertisement

5.ಆಟಗಾರನಿಗೆ ಗಾಯವಾದರೆ ಮಧ್ಯದಲ್ಲೇ ವಾಪಸ್‌ ಹೋದರೆ ಪೂರ್ಣ ಹಣ ಕೊಡಬೇಕಾ?
ಪಂದ್ಯಾವಳಿ ಸಮಯದಲ್ಲಿ ಆಟಗಾರನೊಬ್ಬ ಗಾಯದಿಂದ ಹೊರಗುಳಿದರೆ ಈತನಿಗೆ ಪೂರ್ಣ ಹಣ ಕೊಡಬೇಕಾಗಿಲ್ಲ. ಆದರೆ ಈತನ ಆಸ್ಪತ್ರೆ ಖರ್ಚಿಗೆ ಹಣ ನೀಡಲಾಗುತ್ತದೆ. ಒಂದು ವೇಳೆ ಇಂತಿಷ್ಟೇ ಪಂದ್ಯಗಳಿಗೆ ಆಡಿದರೆ ಎಷ್ಟು ಪಂದ್ಯಗಳಿಗೆ ಆಡುತ್ತಾರೋ ಅದನ್ನು ಲೆಕ್ಕ ಹಾಕಿ ನೀಡಲಾಗುತ್ತದೆ.

6.ಒಪ್ಪಂದ ಮುರಿದುಕೊಂಡರೆ…?
ಒಂದು ವೇಳೆ ಆಟಗಾರ ಅವಧಿಗೆ ಮುನ್ನವೇ ಒಪ್ಪಂದ ಮುರಿದುಕೊಂಡರೆ ಫ್ರಾಂಚೈಸಿ ಒಪ್ಪಿಕೊಂಡರೆ ಮಾತ್ರ ಪೂರ್ಣ ಹಣ ಕೊಡಬಹುದು. ಇದು ಆಯಾ ಫ್ರಾಂಚೈಸಿಗಳಿಗೆ ಬಿಟ್ಟ ವಿಚಾರ.

7.ಮೊದಲೇ ಪೂರ್ಣ ಹಣ ಕೊಡಲಾಗುತ್ತದೆಯೇ?
ಇಲ್ಲ, ಎಲ್ಲ ಫ್ರಾಂಚೈಸಿಗಳು ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಪೂರ್ಣ ಹಣ ನೀಡುವುದಿಲ್ಲ. ಕೆಲವು ಫ್ರಾಂಚೈಸಿಗಳು ಮೊದಲು ಶೇ.50 ಹಣ ನೀಡಿ ಬಳಿಕ ಜಾಹೀರಾತಿನಿಂದ ಬರುವ ಹಣದಿಂದ ಉಳಿದ ಹಣ ನೀಡುತ್ತವೆ. ಕೆಲವು ಶ್ರೀಮಂತ ಫ್ರಾಂಚೈಸಿಗಳು ಮಾತ್ರ ಆರಂಭದಲ್ಲೇ ಪೂರ್ಣ ಹಣ ನೀಡುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next