Advertisement

ವಲಸೆ ಹಕ್ಕಿಗಳ ಗುಟ್ಟು ರಟ್ಟು!

12:21 AM Jun 25, 2021 | Team Udayavani |

ಹೊಸದಿಲ್ಲಿ: ನಮ್ಮ ದೇಶದಲ್ಲಿ ಸದ್ಯದಲ್ಲೇ ಆಗಮಿಸುವ ಚಳಿಗಾಲದಲ್ಲಿ ರಾಜ್ಯದ ರಂಗನತಿಟ್ಟು ಸೇರಿದಂತೆ ದೇಶದ ಹಲವಾರು ಪಕ್ಷಿಧಾಮಗಳಲ್ಲಿ ವಲಸೆ ಹಕ್ಕಿಗಳ ಕಲರವ ಇಡೀ ಪ್ರಾಂತ್ಯದಲ್ಲೆಲ್ಲಾ ಅನುರಣಿಸುತ್ತದೆ. ದೂರದ ಆಫ್ರಿಕಾ, ಅಮೆರಿಕ ಖಂಡಗಳಿಂದ ಸಾವಿರಾರು ಮೈಲುಗಳ ದೂರ ಕ್ರಮಿಸಿ ಬರುವ ಈ ಹಕ್ಕಿಗಳಿಗೆ ದಾರಿ ತೋರುವು­ದಾದರೂ ಹೇಗೆ? ಪುನಃ ಹೇಗೆ ಅವು ತಮ್ಮ ನೆಲೆಗಳಿಗೆ ಕರಾರುವಾಕ್‌ ಆಗಿ ಹಿಂದಿರುಗುತ್ತವೆ? ಮರು ವರ್ಷ, ಪುನಃ ಹೇಗೆ ತಾವು ಹಿಂದೆ ಬಂದಿದ್ದ ಪ್ರದೇಶಗಳಿಗೆ ವಲಸೆ ಬರುತ್ತವೆ? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಶತಮಾನಗಳಿಂದ ಚಾಲ್ತಿಯಲ್ಲಿರುವ ಇಂಥ ಸೋಜಿಗಗಳಿಗೆ ಆಕ್ಸ್‌ಫ‌ರ್ಡ್‌ ಹಾಗೂ ಓಲ್ಡನ್‌ಬರ್ಗ್‌ ವಿಶ್ವವಿದ್ಯಾನಿಲಯಗಳ ಪಕ್ಷಿ ತಜ್ಞರು ಉತ್ತರ ಕಂಡುಕೊಂಡಿದ್ದಾರೆ.

Advertisement

ದಿಕ್ಕು ತೋರುವ “ಕ್ರಿಪ್ಟೋಕ್ರೋಮ್ಸ್‌’: “ನೇಚರ್‌’ ಎಂಬ ವೈಜ್ಞಾನಿಕ ನಿಯತ ಕಾಲಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನ ವರದಿಯ ಪ್ರಕಾರ, ಪಕ್ಷಿಗಳ ಕಣ್ಣಿನ ಅಕ್ಷಿಪಟಲದಲ್ಲಿ ಕ್ರಿಪ್ಟೋಕ್ರೋಮ್ಸ್‌ ಎಂಬ ಪ್ರೋಟೀನ್‌ ಇದ್ದು, ಅದು ಭೂಮಿಯ ಅಯಸ್ಕಾಂತೀಯ ಧ್ರುವಗಳ ಶಕ್ತಿಯನ್ನು ಅರಿಯಬಲ್ಲವಾಗಿವೆ. ಇದರ ಸಹಾಯದಿಂದ ತಾವಿರುವ ಕಡೆ ತಮಗೆ ಪ್ರತಿಕೂಲ ಹವಾಮಾನ ಬಂದೊದಗುವುದನ್ನು ಪಕ್ಷಿಗಳು ಮೊದಲೇ ಗ್ರಹಿಸಬಲ್ಲವು. ಅದರ ಆಧಾರದ ಮೇಲೆ, ತಾವಿರುವ ಜಾಗವನ್ನು ಯಾವಾಗ ಬಿಡಬೇಕು, ಯಾವ ದಾರಿಯನ್ನು ಆರಿಸಿಕೊಂಡು ಯಾವ ದಿಕ್ಕಿನೆಡೆಗೆ ಹಾರಿ ಎಲ್ಲಿ ಹೋಗಿ ಸೇರಬೇಕು ಎಂಬುದನ್ನೂ ಅವು ಅರಿಯುತ್ತವೆ. ಹಿಂದೆ ತಾವು ಬಂದಿದ್ದ ನೆಲೆಗಳತ್ತ ಮತ್ತೆ ಪ್ರಯಾಣ ಬೆಳೆಸಲು ಕ್ರಿಪ್ಟೋಕ್ರೋಮ್ಸ್‌ ನೆರವಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next