Advertisement

ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಕೋಟ್ಯಾಂತರ ಆಸ್ತಿ ಮಾಡಿದ್ದು ಹೇಗೆ? ಕಾಂಗ್ರೆಸ್

04:24 PM Apr 14, 2021 | Team Udayavani |

ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಅಬ್ಬೇಪಾರಿಯಂತೆ ತಿರುಗುತ್ತಿದ್ದ ಸಿ.ಟಿ.ರವಿ ಎನ್ನುವ ಮತಿಗೆಟ್ಟ ಅಸಾಮಿಯ ಖಜಾನೆ ಕೆಲವೇ ವರ್ಷದಲ್ಲಿ ತುಂಬಿದ್ದು ಹೇಗೆ? ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಕೋಟ್ಯಾಂತರ ಬೆಲೆಯ ಆಸ್ತಿ ಬಂದಿದ್ದು ಹೇಗೆ? ಲೋಕಾಯುಕ್ತ ಕೋರ್ಟಿನಲ್ಲಿ 409,420, 120, 463, 466, 120B ಪ್ರಕರಣಗಳು ಇರುವುದೇಕೆ? ಲೂಟಿ ರವಿ ಉತ್ತರಿಸುವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Advertisement

ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಿದ್ದು ಸಿ.ಟಿ.ರವಿ ಸೇರಿದಂತೆ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.

ಜನತೆ ಸಂಕಷ್ಟದಲ್ಲಿದ್ದಾರೆ, ಪ್ರತಿ ಕುಟುಂಬಕ್ಕೆ 10 ಸಾವಿರ ನೀಡಿ ಎನ್ನುವ ಸಿದ್ದರಾಮಯ್ಯನವರ ಸಲಹೆಗೆ ಬುದ್ದಿ ಭ್ರಮಣೆಯಾದವರಂತೆ ಮಾತನಾಡುವ ಡಿಸಿಎಂ ಅಶ್ವಥ್ ನಾರಾಯಣ ಮತ್ತು ಸಿ.ಟಿ.ರವಿ ಅವರೇ, ‘ಪಿಎಂ ಕೇರ್ಸ್,ಕರೋನಾ ಪ್ಯಾಕೇಜ್, 20 ಲಕ್ಷ ಕೋಟಿ ಪ್ಯಾಕೇಜ್’ ಇವೆಲ್ಲ ಎಲ್ಲಿ ಹೋದವು ಎಂದು ಹೇಳಿ, ಇಲ್ಲವೇ ಅವೆಲ್ಲ ಬೋಗಸ್ ಎಂದು ಒಪ್ಪಿಕೊಳ್ಳಿ ಎಂದಿದೆ.

“ರಾಜ್ಯದಲ್ಲಿ ಕರೋನಾ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆಕ್ಸಿಜನ್ ಕೊರತೆ, ವೈದ್ಯರ ಕೊರತೆ, ಆಂಬ್ಯುಲೆನ್ಸ್ ಕೊರತೆ, ಪಿಪಿಇ ಕಿಟ್ ಕೊರತೆ, ಬೆಡ್‌ಗಳ ಕೊರತೆ, ಐಸಿಯು ಕೊರತೆ, ಸ್ಮಶಾನದಲ್ಲಿ ಜಾಗದ ಕೊರತೆ, ಸರ್ಕಾರಕ್ಕೆ ಮನಿಷ್ಯತ್ವದ ಕೊರತೆ” ಬಿಜಪಿ ಸರ್ಕಾರದ ಲಜ್ಜೆಗೆಟ್ಟ ಆಡಳಿತದಲ್ಲಿ ರಾಜ್ಯ ಸ್ಮಶಾನವಾಗುವತ್ತ ಸಾಗುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next