Advertisement

Delhi: CCTV ಇದ್ದರೂ ನಿಷ್ಪ್ರಯೋಜಕವಾಯ್ತು…25 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು

02:53 PM Sep 26, 2023 | Team Udayavani |

ನವದೆಹಲಿ: ಚಿನ್ನಾಭರಣಗಳ ಶೋರೂಮ್‌ ನ ಸ್ಟ್ರಾಂಗ್‌ ರೂಂಗೆ ಕನ್ನ ಕೊರೆದ ಕಳ್ಳರು 25 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಘಟನೆ ದಕ್ಷಿಣ ದೆಹಲಿಯ ಜಂಗ್‌ ಪುರದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:Cauvery water: ಕಾವೇರಿ ಹೋರಾಟ; ಎಲ್ಲಾ ಪಕ್ಷದ ನಾಯಕರ ಒಗ್ಗಟ್ಟಿಗೆ ಕಿಚ್ಚ ಸುದೀಪ್ ಮನವಿ

ಭಾನುವಾರ ಮಧ್ಯರಾತ್ರಿ ಭೋಗಾಲ್‌ ಪ್ರದೇಶದಲ್ಲಿರುವ ಉಮ್ರಾವೊ ಜ್ಯುವೆಲ್ಲರ್ಸ್‌ ನ ಸ್ಟ್ರಾಂಗ್‌ ರೂಂ ಅನ್ನು ಕೊರೆದು ಲಾಕರ್‌ ಅನ್ನು ಹೊತ್ತೊಯ್ದಿದ್ದಾರೆ. ಈ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮರಾಗಳ ಸಂಪರ್ಕ ಕತ್ತರಿಸಿ ಹಾಕಿರುವುದಾಗಿ ವರದಿ ತಿಳಿಸಿದೆ.

ನಾಲ್ಕು ಮಹಡಿಯ ಕಟ್ಟಡದ ಟೆರೆಸ್‌ ಮೇಲಿನಿಂದ ಬಂದು ಕೆಳಅಂತಸ್ತಿನಲ್ಲಿರುವ ಸ್ಟ್ರಾಂಗ್‌ ರೂಂ ಇರುವ ಪ್ರದೇಶಕ್ಕೆ ಬಂದಿದ್ದು, ನಂತರ ಗೋಡೆಯನ್ನು ಡ್ರಿಲ್‌ ನಿಂದ ಕೊರೆದು ಸ್ಟ್ರಾಂಗ್‌ ರೂಂ ಒಳಗೆ ಪ್ರವೇಶಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಶೋರೂಂ ಮಾಲೀಕರು ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಸಿಸಿಟಿವಿ ಫೂಟೇಜ್‌ ಪರಿಶೀಲಿಸಲು ಹೋದಾಗ ಅದರ ಸಂಪರ್ಕವನ್ನು ಕತ್ತರಿಸಿ ಹಾಕಿರುವುದು ಗಮನಕ್ಕೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next