Advertisement

SEBI ಮುಖ್ಯಸ್ಥೆ ಪಿಂಚಣಿ ವೇತನಕ್ಕಿಂತ ಹೆಚ್ಚಿರಲು ಹೇಗೆ ಸಾಧ್ಯ?: ಕಾಂಗ್ರೆಸ್‌

08:41 PM Sep 03, 2024 | Team Udayavani |

ನವದೆಹಲಿ: ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ ಅವರು ವೇತನ ಪಡೆದಿಲ್ಲ. ಬದಲಿಗೆ ತಮ್ಮ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪಡೆದಿದ್ದಾರೆ ಎಂದು ಐಸಿಐಸಿಐ ಬ್ಯಾಂಕ್‌ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಮತ್ತೆ ತಿರುಗೇಟು ನೀಡಿರುವ ಕಾಂಗ್ರೆಸ್‌, ಪಿಂಚಣಿ ಸೌಲಭ್ಯಗಳು ವೇತನಕ್ಕಿಂತ ಹೆಚ್ಚಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ.

Advertisement

ಮಾಧವಿ ಅವರು ಐಸಿಐಸಿಐನಿಂದ 16.80 ಕೋಟಿ ರೂ. ವೇತನ ಪಡೆದಿದ್ದಾರೆಂದು ಕಾಂಗ್ರೆಸ್‌ ಆರೋಪಿಸಿದ ಬೆನ್ನಲ್ಲೇ ಐಸಿಐಸಿಐ ಸ್ಪಷ್ಟನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್‌ ನಾಯಕ ಪವನ್‌ ಖೇರಾ, ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡುವಾಗ ಮಾಧವಿ ಅವರ ವಾರ್ಷಿಕ ಸರಾಸರಿ ವೇತನ 1.30 ಕೋಟಿ ರೂ. ಇತ್ತು. ನಿವೃತ್ತಿ ನಂತರದ ಸೌಲಭ್ಯಗಳು ಮತ್ತು ಪಿಂಚಣಿ ಸರಾಸರಿ 2.77 ಕೋಟಿ ರೂ. ಆಗುತ್ತಿದೆ. ಹೀಗಿರುವಾಗ 16 ಕೋಟಿ ನಿವೃತ್ತಿ ನಂತರದ ಸೌಲಭ್ಯ ಪಡೆಯಲು ಹೇಗೆ ಸಾಧ್ಯ? ವೇತನಕ್ಕಿಂತ ಪಿಂಚಣಿ ಹೆಚ್ಚಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, ಅವರು ಸೆಬಿಯ ಪೂರ್ಣಾವಧಿ ಸದಸ್ಯೆಯಾಗುವ ಮತ್ತು ಐಸಿಐಸಿಐ ಬ್ಯಾಂಕಿನಲ್ಲಿರುವಾಗ ವೇತನ ಪಡೆದಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next