ಬಾಗೇಪಲ್ಲಿ: ತಾಲೂಕಿನ ಗೂಳೂರು ಗ್ರಾಮದ ಗ್ರಾಮ ದೇವತೆ ಶ್ರೀ ಪಾತಕೋಟಮ್ಮ ಧರ್ಮರಾಯ ಹೂವಿನ ಕರಗವನ್ನು ರಾತ್ರಿ ವೈಭೋವೋಪೇತವಾಗಿಲಾಯಿತು.
ಹೂವಿನ ಕರಗವನ್ನು ಬೇತಮಂಗಲದ ನಾಗರಾಜ್ ಹೊತ್ತಿದ್ದರು. ಗೂಳೂರು ಪಟ್ಟಣದಲ್ಲಿ ರಾತ್ರಿ ನಡೆದ ಹೂವಿನ ಕರಗ ವೈಭವೋಪೇತವಾಗಿ ಸಡಗರ ಸಂಬ್ರಮದಿಂದ ನಡೆಸಲಾಯಿತು.
ಕರಗವನ್ನು ಶ್ರೀ ಪಾತಕೋಟಮ್ಮ ದೇವಾಲಯದ ಬಳಿ ತಲೆಗೆ ಹೇರಿಸಿಕೊಂಡ ಬೇತಮಂಗಲದ ನಾಗರಾಜ್ ತಮಟೆಯಲಯಬದ್ಧವಾದ ನಾದಕ್ಕೆ ಅನುಗುಣವಾಗಿ ನರ್ತಿಸಿ ಪ್ರೇಕ್ಷಕರನ್ನು ರಂಜಿಸಿದರು. ಹಸಿ ಕರಗ, ಹೂವಿನ ಕರಗ ಇತ್ಯಾದಿ ಗಳು ನಡೆದು, ಬಾರಿ ಜನಾಕರ್ಷಣೆಯೊಂದಿಗೆ ಯಶಸ್ವಿಯಾಯಿತು.
ಗೂಳೂರಿನಲ್ಲಿ ಪ್ರಪ್ರಥಮವಾಗಿ ಈ ಕರಗ ಮಹೋತ್ಸವಗಳನ್ನು ಆಚರಿಸಿದ್ದು, ಗೂಳೂರು ಹೋಬಳಿಯಾದ್ಯಂತ ಅಪಾರ ಜನಸ್ತೋಮ ಈ ಕರಗ ಮಹೋತ್ಸವಕ್ಕೆ ಹರಿದುಬಂದಿತ್ತು. ಶಾಸಕ ಎಸ್.ಎನ್. ಸುಬ್ಟಾರೆಡ್ಡಿ ಹಾಗೂ ಶ್ರೀ ಪಾತಕೋಟಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಸ್. ರಮೇಶ್‌ಬಾಬು ಶ್ರೀ ಪಾತಕೋಟಮ್ಮ ದೇವಾಲಯದಲ್ಲಿ ಭಕ್ತಿಬಾವನೆಯಿಂದ ಪ್ರಾರ್ಥಿಸಿ ವಿದ್ಯುಕ್ತ ವಾಗಿ ಕರಗ ಮಹೋತ್ಸವಕ್ಕೆ ಚಾಲನೆ ನೀಡಿದರು.
ಮುಖಂಡ ಸಿ.ಮುನಿರಾಜು ಭಕ್ತಾದಿಗಳಿಗೆ ಭೋಜನ ವ್ಯವಸ್ಥೆ ಮಾಡಿದ್ದರು. ವಿವಿಧ ಬಗೆಯ ಅಂಗಡಿ ಮುಗ್ಗಟ್ಟುಗಳು ಬಂದಿದ್ದವು, ಸಂಗೀತ ರಸ ಮಂಜರಿ ಕಾರ್ಯಕ್ರಮವನನು ಏರ್ಪಡಿಲಾಗಿತ್ತು