ರಕ್ಷಣೆಯ ದೃಷ್ಟಿಯಿಂದ ಹೋವರ್‌ಕ್ರಾಫ್ಟ್ ಕೆಲವು ಸಂದರ್ಭ ಫಲ್ಗುಣಿ ನದಿಯಲ್ಲಿ ವೇಗವಾಗಿ ಸಂಚರಿಸುತ್ತದೆ. ಈ ವೇಳೆ ನೀರಿನ ಏರಿಳಿತ ಉಂಟಾಗಿ ನದಿಯ ಬದಿಯಲ್ಲಿ ಲಂಗರು ಹಾಕಿದ್ದ ನಾಡದೋಣಿಗಳು ಕೂಡ ಏರಿಳಿತ ವಾಗಿ ಒಂದಕ್ಕೊಂದು ಢಿಕ್ಕಿಯಾಗಿ ಹಾನಿಯಾಗುತ್ತಿದೆ ಎಂದು ಬೆಂಗರೆ ಮಹಾಜನ ಸಭಾ ಹಾಗೂ ನಾಡದೋಣಿ ಮಾಲಕರು ದೂರಿದ್ದಾರೆ.
Advertisement
ಭದ್ರತೆಯ ದೃಷ್ಟಿಯಿಂದ ಕರಾವಳಿ ಕಾವಲು ನಡೆಸುತ್ತಿರುವ ಹೋವರ್ ಕ್ರಾಫ್ಟ್ ಫಲ್ಗುಣಿ ನದಿಯಲ್ಲಿ ವೇಗವಾಗಿ ಸಂಚರಿಸುವುದರಿಂದ ನೀರಿನಲ್ಲಿ ಉಬ್ಬರ ಇಳಿತ ಉಂಟಾಗಿ ಮೀನುಗಾರಿಕೆ ನಡೆ ಸುವ ನಾಡದೋಣಿಗಳಿಗೆ ಸಮ ಸ್ಯೆಯಾಗುತ್ತಿದೆ. ಜತೆಗೆ ಲಂಗರು ಹಾಕಿದ್ದರೂ ಅಲೆಯ ಏರಿಳಿತದಿಂದ ದೋಣಿಗಳಿಗೆ ಹಾನಿಯಾಗಿದೆ. ಈ ಬಗ್ಗೆ ಕೋಸ್ಟ್‌ಗಾರ್ಡ್, ಕರಾವಳಿ ಕಾವಲು ಪೊಲೀಸರ ಗಮನಕ್ಕೆ ಮೀನುಗಾರರು ತಂದಿದ್ದಾರೆ.
ಹೋವರ್ ಕ್ರಾಫ್ಟ್ ಸಮುದ್ರ ಕಣ್ಗಾವಲಿಗೆ ಇರುವಂತಹುದು. ಅದರ ಸಂಚಾರವನ್ನು ಮೊಟಕುಗೊಳಿಸುವುದು ಸಾಧ್ಯವಿಲ್ಲ. ಆದರೆ ಹೋವರ್‌ಕ್ರಾಫ್ಟ್ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ನಾಡದೋಣಿ ಗಳಿಗೆ ಹಾನಿಯಾಗದಂತೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ನಾಡದೋಣಿ ಮೀನುಗಾರಿಕೆ ನಡೆಸುವ ಮುಖಂಡರು, ಬಂದರು ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು.
– ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ