Advertisement

ಹ್ಯೂಸ್ಟನ್‌ನಲ್ಲಿ ಪ್ರಧಾನಿ ಊಟಕ್ಕೆ ಸ್ಪೆಷಲ್‌ “ನಮೋ ಥಾಲಿ’

09:39 AM Sep 23, 2019 | sudhir |

ಹ್ಯೂಸ್ಟನ್‌: ಅಮೆರಿಕದಲ್ಲಿ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹೌಡಿ ಮೋದಿ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅವರು ಉಳಿದುಕೊಂಡಿರುವ ಹೋಟೆಲ್‌ನಲ್ಲೀಗ ಇಡೀ ತಂಡಕ್ಕೆ ಆಹಾರ ತಯಾರು ಮಾಡುವ ಹೊಣೆ ಹೊತ್ತುಕೊಂಡಿರುವುದು ಖ್ಯಾತ ಬಾಣಸಿಗರಾದ ಕಿರಣ್‌ ವರ್ಮಾ ಅವರು. ಪ್ರಧಾನಿ ಮೋದಿ ಅವರಿಗಾಗಿಯೇ ಅವರು ಹಲವು ಖಾದ್ಯಗಳನ್ನು ತಯಾರು ಮಾಡುವುದಾಗಿ ಹೇಳಿದ್ದಾರೆ.

Advertisement

ನಮೋ ಥಾಲಿ ಎಂದವರು ಇದಕ್ಕೆ ಹೆಸರು ಇಟ್ಟಿದ್ದು, ಪ್ರಧಾನಿ ಸಸ್ಯಾಹಾರಿಗಳಾಗಿರುವುದರಿಂದ ಎಲ್ಲ ಆಹಾರ ಸಸ್ಯಾಹಾರ ಮತ್ತು ಸಾತ್ವಿಕವಾಗಿರಲಿದೆ ಎಂದು ಹೇಳಿದ್ದಾರೆ. ಅಲ್ಲದೇ ದೇಸೀ ಶುದ್ಧ ತುಪ್ಪದಲ್ಲೇ ಆಹಾರ ತಯಾರು ಮಾಡುವುದಾಗಿ ಹೇಳಿದ್ದಾರೆ. ಹಲವು ವಿಧದ ಚಟ್ನಿಗಳೂ ಇದರಲ್ಲಿ ಇವೆಯಂತೆ.

ನಮೋ ಥಾಲಿಯಲ್ಲಿ ವಿಶೇಷವಾಗಿ ರಸ್‌ಮಲೈ, ಶ್ರೀಖಂಡ, ಕ್ಯಾರೆಟ್‌ ಹಲ್ವಾ, ಬಾದಾಮ್‌ ಹಲ್ವಾ, ಖೀಚಡಿ, ಖಚೋರಿ, ಮೇಥಿ ತೆಪ್ಲಾ ಮುಂತಾದ ಹಲವು ವೈವಿಧ್ಯಗಳು ಇರಲಿವೆಯಂತೆ.

ಪ್ರಧಾನಿ ನರೇಂದ್ರ ಮೋದಿಯವರು ವಿಶೇಷವಾಗಿ ಯಾವುದೇ ಖಾದ್ಯ ಮಾಡಬೇಕೆಂದು ಸೂಚಿಸದಿದ್ದರೂ, ಅವರ ಬಯಕೆಗಳನ್ನು ಗಮನಿಸಿ ಖಾದ್ಯ ತಯಾರು ಮಾಡುವುದಾಗಿ ಕಿರಣ್‌ ಹೇಳಿದ್ದಾರೆ. ಅಮೆರಿಕಕ್ಕೆ ಆಗಮಿಸಿದ ಹಲವು ವಿವಿಐಪಿಗಳಿಗೆ ಕಿರಣ್‌ ಅವರು ಬಾಣಸಿಗರಾಗಿದ್ದು, ಪ್ರಧಾನಿ ಅವರಿಗೂ ಅಡುಗೆ ಮಾಡುವುದು ಗೌರವ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next