Advertisement
ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಆಶ್ರಯ ಸಮಿತಿಗೆ 4 ಮಂದಿಯನ್ನು ಸರ್ಕಾರ ನಾಮಕರಣ ಮಾಡಿ ಒಂದು ವರ್ಷದ ಮೇಲಾಗಿದ್ದರೂ, ಆಶ್ರಯ ಸಮಿತಿಗೆ ಅಧ್ಯಕ್ಷರಾದ ಶಾಸಕ ಕೆ. ಶ್ರೀನಿವಾಸಗೌಡರ ಇಚ್ಛಾ ಕೊರತೆಯಿಂದ ಈವರೆಗೆ ಒಂದು ಸಭೆಯನ್ನು ಕರೆದಿಲ್ಲ ಎಂದು ದೂರಿದರು.
ಕರೆಯಲು ಶಾಸಕರಿಗೆ ಹಲವಾರು ಬಾರಿ ನಾಮಕರಣ ಸದಸ್ಯರು ಮನವಿ ಮಾಡಿದ್ದರೂ, ಇಂದು, ನಾಳೆ ಎಂದು ಶಾಸಕರು ಸಭೆಯ ದಿನಾಂಕ ನಿಗದಿ ಪಡಿಸುವಲ್ಲಿ ವಿಫಲರಾಗಿ ದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಈ ಹಿಂದೆ ಅಂಬರೀಶ್ ವಸತಿ ಸಚಿವರಾಗಿದ್ದಾಗ ರಾಜೀವ್ ಗಾಂಧಿ ವಸತಿ ಯೋಜನೆ ಮತ್ತು ವಾಜಪೇಯಿ ವಸತಿ ಯೋಜನೆಯಲ್ಲಿ ಭೂಮಿ ಖರೀದಿಸಿ ಮನೆ ನಿರ್ಮಿಸಿ ಕೊಡಲು ವಸತಿ ರಹಿತರಿಗೆ ಅರ್ಜಿ ಕರೆಯಲು ಸೂಚಿಸಿದ್ದರು. ಆಗ ಅರ್ಜಿಗಳು
ಬಂದಿದ್ದವು. ಈ ಪೈಕಿ ಕಂದಾಯ ಅಧಿಕಾರಿಗಳು ಮತ್ತು ನಿರೀಕ್ಷಕರು ಅರ್ಜಿಗಳನ್ನು ಪರಿಶೀಲಿಸಿ ಮನೆ ಇಲ್ಲದವರ 3,470 ಅರ್ಜಿ ಆರ್ಹತೆ ಪಡೆದಿದೆ ಎಂದು ಗುರುತಿಸಲಾಗಿತ್ತು ಎಂದರು. ಜಮೀನು ನೀಡಲು ಮುಂದಾಗಲಿಲ್ಲ: ಜಮೀನು ನೀಡಲು ನಗರ ಸುತ್ತಮುತ್ತ ಯಾವ ರೈತರು ಮುಂದೆ ಬರಲಿಲ್ಲ. ನಂತರದಲ್ಲಿ ಕೃಷ್ಣಪ್ಪನವರು ವಸತಿ ಸಚಿವರಾದ ಮೇಲೆ ಎಕರೆ ಜಮೀನಿಗೆ 15 ಲಕ್ಷದಿಂದ 22 ಲಕ್ಷಕ್ಕೆ ಏರಿಕೆ ಮಾಡಿ ನಿಗದಿ ಪಡಿಸಿದರು. ಬೆಂಗಳೂರಿಗೆ ಕೋಲಾರ ಸಮೀಪ ಇರುವುದರಿಂದ ಜಮೀನಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ನಿರೀಕ್ಷಿಸಿರುವ ರೈತರು ಜಮೀನು ನೀಡಲು ಯಾರೂ ಮುಂದಾಗಲಿಲ್ಲ ಎಂದರು.
Related Articles
ತೀರ್ಮಾನಿಸಲಾಯಿತು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗೆ ಮತ್ತು ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಯಿತು. ಈ ಕುರಿತು ಜಿಲ್ಲಾಧಿಕಾರಿ ನಗರಾಭಿವೃದ್ಧಿ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
Advertisement
ಪ್ರಸ್ತಾವನೆ ಸಲ್ಲಿಸದೆ ಮೀನಮೇಷ: ನಾವು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು. ನಮ್ಮ ಅಧಿಕಾರ ಮೀರಿದ್ದು ಆಗಿದೆ ಎಂದು ಪ್ರಸ್ತಾವನೆಯನ್ನು ಸಲ್ಲಿಸದೆ ಮೀನಮೇಷ ಎಣಿಸುತ್ತಿರುವುದರಿಂದ ಜಮೀನು ಖರೀದಿ ವಿಷಯವು ನೆನಗುದಿಗೆ ಬಿದ್ದಿದೆ. ಈ ಕುರಿತು ಆಶ್ರಯ ಸಮಿತಿ ಸದಸ್ಯರು ಪ್ರತಿದಿನವು ನಗರಸಭೆಗೆ ಆಗಮಿಸಿ, ಪೌರಾಯುಕ್ತರ ಮೇಲೆ ಒತ್ತಡ ಹೇರುತ್ತಿದ್ದಾರೆ. ಮೊನ್ನೆ ಶಾಸಕರು ಬಜೆಟ್ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಪೌರಾಯುಕ್ತರು ಶಾಸಕರ ಗಮನಸೆಳೆದಾಗ ನನಗೆ ಸ್ವಲ ಕೆಲಸವಿದೆ. 8 ದಿನ ಕಳೆದ ಮೇಲೆ ಯಾವೂದಾದರೂ ಶನಿವಾರ ಸಭೆ ನಿಗದಿ ಪಡಿಸಿ ಎಂದು ಸೂಚಿಸಿದ್ದಾರೆ. ಆದರೆ, ಶಾಸಕರಿಗೆ ಶನಿವಾರ ಸಭೆಯ ದಿನಾಂಕವನ್ನು ನಿಗದಿ ಪಡೆಸಲು ಪೌರಾಯುಕ್ತರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ಪಡೆಯಬೇಕಾಗಿದೆ ಎಂದರು. ರೈತರನ್ನು ಸಂರ್ಪಕಿಸುತ್ತಿಲ್ಲ: ಸರ್ಕಾರವು ಆಶ್ರಯ ಯೋಜನೆ ಅನುಷ್ಠಾನಕ್ಕೆ ತರಲು ಮುಂದಾಗಿದ್ದರೂ, ಸ್ಥಳೀಯ ಶಾಸಕರ ಮತ್ತು ಅಧಿಕಾರಿಗಳ ಇಚ್ಛಾಕೊರತೆಯಿಂದ ನೆನಗುದಿಗೆ ಬಿದ್ದಿದೆ. ಇದರಿಂದ ನಗರದಲ್ಲಿ ಸಾವಿರಾರು ವಸತಿಹೀನರು ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸಬೇಕಾಗಿದೆ. ಅಧಿಕಾರಿ ಗಳು ನಗರದ ಸುತ್ತಮುತ್ತಲಿನ ಸರ್ಕಾರಿ ಜಾಗವನ್ನು ಗುರುತಿಸುವ ಕೆಲಸವನ್ನು ಮುಂದಾಗುತ್ತಿಲ್ಲ. ಇತ್ತ ರೈತರನ್ನು ಸಂರ್ಪಕಿಸುತ್ತಿಲ್ಲ ಎಂದು ಆಶ್ರಯ ಸಮಿತಿ ಸದಸ್ಯರು ಆರೋಪಿಸಿದರು.