Advertisement
ಮೂರು ವರ್ಷಗಳಿಂದ ರಾಜ್ಯ ದಲ್ಲಿ ಬಸವ, ಅಂಬೇಡ್ಕರ್, ಪ್ರಧಾನ ಮಂತ್ರಿ ವಸತಿ ಯೋಜನೆ ಸಹಿತ ಯಾವುದೇ ಯೋಜನೆ ಯಡಿ ಫಲಾನುಭವಿಗಳಿಗೆ ಆಶ್ರಯ ಮನೆ ನೀಡಲಾಗಿಲ್ಲ. ಈಗ ಗ್ರಾಮೀಣ ಪ್ರದೇಶದ 4 ಲಕ್ಷ ಮತ್ತು ನಗರ ಪ್ರದೇಶದ 1 ಲಕ್ಷ ಫಲಾನುಭವಿಗಳಿಗೆ ಮನೆ ಗಳನ್ನು ಹಂಚಿಕೆ ಮಾಡಲು ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಜ. 31ರೊಳಗೆ ಫಲಾ ನುಭವಿಗಳನ್ನು ಆಯ್ಕೆ ಮಾಡಿ ಕಳುಹಿಸುವಂತೆ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿದೆ.
ರಾಜ್ಯದ 6,004 ಗ್ರಾ.ಪಂ.ಗಳಲ್ಲಿ ಸದಸ್ಯರ ಸಂಖ್ಯಾಬಲದ ಆಧಾರದಲ್ಲಿ ಎ, ಬಿ ಮತ್ತು ಸಿ ಎಂದು ವಿಂಗಡಿಸಿ ಸರಕಾರ ಮನೆಗಳನ್ನು ಹಂಚಿಕೆ ಮಾಡಿದೆ. ಗರಿಷ್ಠ 15ಕ್ಕಿಂತ ಕಡಿಮೆ ಸದಸ್ಯ ರಿರುವ ಪಂಚಾಯತ್‌ಗಳಿಗೆ 30 ಮನೆಗಳು, 15ಕ್ಕಿಂತ ಹೆಚ್ಚು, 25ರೊಳಗೆ ಸದಸ್ಯರಿರುವ ಪಂಚಾಯತ್‌ಗಳಿಗೆ 40 ಮನೆಗಳು ಮತ್ತು 25ಕ್ಕಿಂತ ಹೆಚ್ಚು ಸದಸ್ಯರಿರುವ ಪಂಚಾಯತ್‌ಗಳಿಗೆ 50 ಮನೆಗಳನ್ನು ಹಂಚಿಕೆ ಮಾಡಿ ಆದೇಶಿಸಿದೆ. ಗ್ರಾಮೀಣ ಪ್ರದೇಶದ 4 ಲಕ್ಷ ಮನೆಗಳಲ್ಲಿ ಬಸವ ವಸತಿ ಯೋಜನೆ ಅಡಿ 1,65,510 ಮನೆಗಳು ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ 53,190 ಮನೆಗಳನ್ನು ಹಂಚಿಕೆ ಮಾಡಲು ಸೂಚಿಸಲಾಗಿದೆ.
Related Articles
ಗ್ರಾ.ಪಂ.ನಲ್ಲಿ ಫಲಾನುಭವಿಗಳ ಆಯ್ಕೆ ಯನ್ನು ಗ್ರಾಮ ಸಭೆಗಳ ಮೂಲಕ ಮಾಡಲಾಗು ತ್ತದೆ. ಹಿಂದಿನಿಂದಲೂ ಈ ನಿಯಮ ಇದ್ದು, ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿದ ಅನಂತರ ಬದಲಾವಣೆಗೆ ಅವಕಾಶ ಇಲ್ಲ.
Advertisement
ಆದರೆ ಸರಕಾರ ಈಗ ಹೊರಡಿಸಿ ರುವ ಆದೇಶದಲ್ಲಿ ಫಲಾನುಭವಿ ಗಳನ್ನು ಯಾರು ಮತ್ತು ಯಾವ ಮಾನದಂಡದ ಆಧಾರದಲ್ಲಿ ಆಯ್ಕೆ ಮಾಡಬೇಕು ಎಂದು ಸ್ಪಷ್ಟವಾಗಿ ಉಲ್ಲೇ ಖೀಸಿಲ್ಲ. ಪ್ರತಿ ಬಾರಿ ಸಾಮಾನ್ಯವಾಗಿ ಪಂಚಾಯತ್‌ಗಳಿಗೆ ಇಂತಿಷ್ಟು ಎಂದು ಮನೆ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಸದಸ್ಯರ ಬಲದ ಆಧಾರದಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಹೀಗಾಗಿ ಗ್ರಾ.ಪಂ. ಸದಸ್ಯರು ಫಲಾನುಭವಿಗಳನ್ನು ಆಯ್ಕೆ ಮಾಡಬೇಕೇ ಅಥವಾ ಗ್ರಾಮ ಸಭೆ ಕರೆದು ಅಲ್ಲಿ ಆಯ್ಕೆ ಮಾಡಬೇಕೇ ಎಂಬ ಗೊಂದಲ ಪಂಚಾಯತ್ ಮಟ್ಟದಲ್ಲಿ ಉಂಟಾಗಿದೆ.
ಇದನ್ನೂ ಓದಿ:ಅತಿಥಿ ಉಪನ್ಯಾಸಕರ ಸೇವಾ ವಿಲೀನತೆಯಾಗಲಿ
ಶಾಸಕರ ಗಮನಕ್ಕೆ ತನ್ನಿಗ್ರಾ.ಪಂ. ಮಟ್ಟದಲ್ಲಿ ಆಯ್ಕೆ ಯಾದ ಫಲಾನುಭವಿಗಳ ಪಟ್ಟಿ ಯನ್ನು ಸಂಬಂಧಪಟ್ಟ ಕ್ಷೇತ್ರದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಗಮನಕ್ಕೆ ತರಬೇಕೆಂದು ಸೂಚಿಸಲಾಗಿದೆ. ಇದೂ ಅಧಿಕಾರಿಗಳ ಗೊಂದಲಕ್ಕೆ ಕಾರಣವಾಗಿದ್ದು, ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರೆ, ಯಾವುದನ್ನು ಪರಿಗಣಿಸಬೇಕೆಂಬ ಗೊಂದಲ ಉಂಟಾಗಲಿದೆ. ನಿಗಮಕ್ಕೆ ಪಿಡಿಒಗಳ ಪತ್ರ
ವಸತಿ ಯೋಜನೆಗಳಲ್ಲಿ ಫಲಾನು ಭವಿಗಳ ಆಯ್ಕೆ ಮತ್ತು ಯೋಜನೆ ಅನುಷ್ಠಾನದಲ್ಲಿ ಆಗುವ ಸಮಸ್ಯೆಗಳ ಕುರಿತು ಚರ್ಚಿಸಲು ಪಿಡಿಒ ಸಂಘ ದವರು ರಾಜೀವ್ ಗಾಂಧಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ಗೊಂದಲಗಳನ್ನು ನಿವಾರಿಸಲು ಮನವಿ ಮಾಡಿದ್ದಾರೆ. 3 ವರ್ಷಗಳಿಂದ ಮನೆಗಳನ್ನು ನೀಡಲಾಗಿಲ್ಲ. ಹಿಂದಿನ ಅವಧಿಯ ಲ್ಲಿದ್ದ ಸದಸ್ಯರು ಆಯ್ಕೆ ಮಾಡಿರುವ ಫಲಾನುಭವಿಗಳ ಪಟ್ಟಿ ಇದ್ದು, ಈಗ ಹೊಸದಾಗಿ ಸದಸ್ಯರು ಆಯ್ಕೆಯಾಗಿ ರುವುದರಿಂದ ಈ ಹಿಂದೆ ಆಯ್ಕೆ ಆಗಿದ್ದ ಫಲಾನುಭವಿಗಳಿಗೆ ಮನೆ ನೀಡಬೇಕೆ, ಬೇಡವೇ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿದ್ದಾರೆ. ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಿದರೂ ಶಾಸಕರ ಗಮನಕ್ಕೆ ತರಬೇಕೆಂಬ ಸೂಚನೆ ಇದೆ. ಶಾಸಕರು ಗ್ರಾಮ ಸಭೆಯ ತೀರ್ಮಾನ ಒಪ್ಪದಿದ್ದರೆ ಸಮಸ್ಯೆಯಾಗುತ್ತದೆ. ಅನರ್ಹರು ಆಯ್ಕೆಯಾಗಿದ್ದರೆ ಪಿಡಿಒಗಳನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಈ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೇಳಿದ್ದೇವೆ.
-ಬೋರಯ್ಯ, ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ