Advertisement

ವಸತಿ ಯೋಜನೆ: ಫ್ಲ್ಯಾಟ್‌ ಮಾರಾಟ ಮೇಳಕ್ಕೆ ಚಾಲನೆ

11:05 AM Nov 07, 2017 | Team Udayavani |

ಕಲಬುರಗಿ: ಕರ್ನಾಟಕ ಗೃಹ ಮಂಡಳಿಯಿಂದ ನಗರದ ಶೇಖರರೋಜಾ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕೆ.ಎಚ್‌.ಬಿ. ಗ್ರೀನ್‌ ಪಾರ್ಕ್‌ ವಸತಿ ಯೋಜನೆ ಫ್ಯ್ಲಾಟ್‌ಗಳ ಮಾರಾಟ ಮೇಳಕ್ಕೆ ಮಂಡಳಿ ಅಧ್ಯಕ್ಷರಾಗಿರುವ ಅಫಜಲಪುರ ಶಾಸಕ ಮಾಲೀಕಯ್ಯ ವಿ. ಗುತ್ತೇದಾರ ಚಾಲನೆ ನೀಡಿದರು.

Advertisement

ಗ್ರೀನ್‌ ಪಾರ್ಕ್‌ ವಸತಿ ಸಮುತ್ಛಯದಲ್ಲಿ ಆಯೋಜಿಸಲಾಗಿದ್ದ ಫ್ಯ್ಲಾಟ್‌ಗಳ ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ಸಮೀಪದ ಕೆಂಗೇರಿ, ಮಂಗಳೂರು ಮತ್ತು ಕಲಬುರಗಿಯಲ್ಲಿ 3 ವರ್ಷಗಳಿಂದ ದರ, ಸ್ಥಳ ಮತ್ತು ಪ್ರಚಾರದ ಕೊರತೆಯಿಂದ ಬಾಕಿ ಉಳಿದಿದ್ದ ಫ್ಯ್ಲಾಟ್‌ಗಳಿಗೆ ಶೇ.10ರಷ್ಟು ರಿಯಾಯಿತಿ ನೀಡುವ ಮೂಲಕ ಸುಮಾರು 10 ಸಾವಿರ ವಿಲೇವಾರಿಗೆ ಚಾಲನೆ ನೀಡಿದ್ದೇನೆ. ಕರ್ನಾಟಕ ರಾಜ್ಯೋತ್ಸವದ ಕೊಡುಗೆಯಾಗಿ ಕಲಬುರಗಿಯ ಈ ಸಮುತ್ಛಯದಲ್ಲಿ ಖರೀದಿಸುವ ಗ್ರಾಹಕರಿಗೆ ಶೇ.2ರಷ್ಟು ಹೆಚ್ಚುವರಿ ರಿಯಾಯಿತಿ ಸಹ ನೀಡಲಾಗುತ್ತಿದೆ ಎಂದು ಹೇಳಿದರು.

ಗ್ರೀನ್‌ ಪಾರ್ಕ್‌ನ ಫ್ಯ್ಲಾಟ್‌ಗಳ ಖರೀದಿಗೆ ಇಂದಿನಿಂದ 3 ದಿನಗಳ ಪ್ರಾಪರ್ಟಿ ಎಕ್ಸಪೋ ನಡೆಯಲಿದೆ. ಮೊದಲ ದಿನವೇ 303 ಫ್ಯ್ಲಾಟ್‌ಗಳು ಬುಕ್ಕಿಂಗ್‌ ಆಗಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಗ್ರಾಹಕರ ಅನುಕೂಲಕ್ಕಾಗಿ ಸ್ಥಳದಲ್ಲಿಯೆ ಸಾಲ ಪಡೆಯಲು ಬ್ಯಾಂಕ್‌ಗಳಿಂದ ಸ್ಟಾಲ್‌ ಸಹ ಲಭ್ಯವಿದೆ. ಗ್ರಾಹಕರಿಗೆ ಸಾಲ ನೀಡಲು ಹಿಂಜರಿಯ ಬಾರದು ಎಂಬ ಕಾರಣಕ್ಕೆ ಮಂಡಳಿಯೆ 3ನೇ ವ್ಯಕ್ತಿಯಾಗಿ ಬ್ಯಾಂಕ್‌ಗೆ ಜಾಮೀನು ನೀಡಲಿದ್ದು, ರಾಜ್ಯದ ಇತಿಹಾಸದಲ್ಲಿಯೆ ಇದು ಮೊದಲಾಗಿದೆ ಎಂದು ಹೇಳಿದರು.

ತಾವು ಅಧ್ಯಕ್ಷರಾದ ನಂತರ ಮಂಡಳಿಯ 600 ಕೋಟಿ ರೂ. ಸಾಲ ತೀರಿಸಿ 300 ಕೋಟಿ ರೂ.ಗಳನ್ನು ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇಡಲಾಗಿದೆ. ಮಂಡಳಿಯೂ ಯಾವುದೇ ಲಾಭ ನಷ್ಟವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಒಟ್ಟಿನಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಮನೆ ಮತ್ತು ನಿವೇಶನ ನೀಡುವುದಲ್ಲದೆ ಮೂಲಭೂತ ಸೌಲಭ್ಯ ನೀಡುವುದು ಮಂಡಳಿಯ ಪ್ರಥಮಾದ್ಯತೆಯಾಗಿದೆ ಎಂದು ಹೇಳಿದರು.

25 ಎಕರೆ ವಿಸ್ತೀರ್ಣದ ವಸತಿ ಸಮುತ್ಛಯದಲ್ಲಿ ನುರಿತ ವಾಸ್ತುಶಿಲ್ಪಿಗಳಿಂದ ತಯಾರಿಸಲ್ಪಟ್ಟ ಜಿ+3 ಹೊಂದಿದ ಸುಂದರವಾದ 26 ಬ್ಲಾಕ್‌ಗಳಿವೆ. 2 ಬಿಎಚ್‌ಕೆ 448 ಫ್ಯ್ಲಾಟ್‌ಗಳು ಹಾಗೂ 2.5 ಬಿಎಚ್‌ಕೆ 384 ಫ್ಯ್ಲಾಟ್‌ಗಳು
ಮಾರಾಟಕ್ಕೆ ಲಭ್ಯವಿದೆ. 2 ಬಿಎಚ್‌ಕೆ ಫ್ಯ್ಲಾಟ್‌ಗಳ ಮೊತ್ತ 15,22,880 ರೂ. ಹಾಗೂ 2.5 ಬಿಎಚ್‌ಕೆ ಪ್ಲಾಟ್‌ಗಳ
ಮೊತ್ತ 20,38,800 ರೂ. ನಿಗದಿಪಡಿಸಲಾಗಿದೆ. ಪ್ರಾಪರ್ಟಿ ಎಕ್ಸಪೋ ಅಂಗವಾಗಿ ಮೌಲ್ಯದಲ್ಲಿ ಶೇ.2ರಷ್ಟು ವಿಶೇಷ
ರಿಯಾಯಿತಿ ಮತ್ತು 12 ತಿಂಗಳ ಹಣ ಪಾವತಿಗೆ ವಿಶೇಷ ಅವಕಾಶ ಕಲಬುರಗಿ ಜನರಿಗೆ ನೀಡಲಾಗುತ್ತಿದೆ ಎಂದು
ಮಂಡಳಿ ಉಪ ಪ್ರಧಾನ ವ್ಯವಸ್ಥಾಪಕ ಸುರೇಶ ಮಾಹಿತಿ ನೀಡಿದರು.

Advertisement

ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕರ್ನಾಟಕ ಗೃಹ ಮಂಡಳಿ ಆಯುಕ್ತ ಬಿ.
ಶಿವಮೂರ್ತಿ, ನಿರ್ದೇಶಕ ಅನೀಲಸಿಂಗ್‌, ಮುಖ್ಯ ಅಭಿಯಂತ ಗಣೇಶ, ಕಾರ್ಯಪಾಲಕ ಅಭಿಯಂತ ಕೆ.ಎನ್‌.
ಕುಲಕರ್ಣಿ, ಸಹಾಯಕ ಕಾರ್ಯಪಾಲಕ ಅಭಿಯಂತ ಪಾಶಾ, ಎಪಿಎಂಸಿ ನಿರ್ದೇಶಕ ಭೂಕಾಂತಗೌಡ ಎಸ್‌.
ಪಾಟೀಲ, ರಾಜ್ಯ ಖಾದಿ ಮಂಡಳಿ ನಿರ್ದೇಶಕ ಮಲ್ಲಿನಾಥ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವಣಪ್ಪ ಪಾಟೀಲ
ಅಂಕಲಗಿ, ಮುಖಂಡರಾದ ಶಿವಪುತ್ರಪ್ಪ ಕರೂರ, ಚಂದ್ರಕಾಂತ ಬಸನಾಳ, ಬಸಣ್ಣಗೌಡ ತಿಪ್ಪಶೆಟ್ಟಿ ಸರಡಗಿ
ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next