Advertisement

ವಸತಿ ಯೋಜನೆಗೆ ಹಿಡಿದ ಗ್ರಹಣ 

08:35 PM Aug 05, 2021 | Team Udayavani |

ಪುತ್ತೂರು: 3 ವರ್ಷಗಳಿಂದ ಸರ ಕಾರದ ಆಶ್ರಯ ಯೋಜನೆಗಳಲ್ಲಿ ಮನೆ ಮಂಜೂರುಗೊಳ್ಳದ  ಕಾರಣ ಗ್ರಾ.ಪಂ.ಗಳಲ್ಲಿ ಅರ್ಜಿಗಳು ಧೂಳು ಹಿಡಿದಿವೆ.

Advertisement

ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸರಕಾರವು ಬಸವ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜ ನೆಗಳನ್ನು ರೂಪಿಸಿದೆ. ಆದರೆ ಇದನ್ನು ನಂಬಿ ಮನೆಕಟ್ಟಲು ಹೊರಟವರಿಗೆ ದಿಕ್ಕಿಲ್ಲದ ಪರಿಸ್ಥಿತಿ ಉಂಟಾಗಿದೆ. ದ.ಕ.ಜಿಲ್ಲೆಯಲ್ಲಿ 46,983 ವಸತಿ ಮತ್ತು ನಿವೇಶನ ರಹಿತರಿದ್ದು ಸೂರಿಗಾಗಿ ಕಾಯುತ್ತಿದ್ದಾರೆ.

ಅರ್ಜಿ ಸ್ವೀಕಾರ ಮಾತ್ರ:

ಸ್ವಂತ ಮನೆ    ಕಟ್ಟಿಕೊಳ್ಳುವ ಪ್ರಯತ್ನ ದಲ್ಲಿದ್ದ ಸಾವಿ ರಾರು ಫಲಾನುಭವಿಗಳು ಗ್ರಾ.ಪಂ.ಮೂಲಕ ವಸತಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ ದ್ದಾರೆ. ವಸತಿ ನಿರ್ಮಾಣಕ್ಕೆ ಎಸ್‌ಸಿ-ಎಸ್‌ಟಿ ಫಲಾನುಭವಿಗೆ ತಲಾ 1.50 ಲ. ರೂ. ಮತ್ತು ಇತರರಿಗೆ ತಲಾ 1.20 ಲಕ್ಷ ರೂ. ಸಹಾಯಧನ ಪಾವತಿ ಸಲಾಗುತ್ತದೆ. ಗ್ರಾ.ಪಂ. ಸಭೆಗಳಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಗ್ರಾ.ಪಂ.ಗೆ ಅಲೆದಾಡುತ್ತಿದ್ದರೂ ಬಸವ ವಸತಿ ಯೋಜನೆ ಸೇರಿ ಯಾವುದೇ ಯೋಜನೆಗಳಲ್ಲಿ ಮನೆ ಮಂಜೂರಾಗದ ಪರಿಣಾಮ ಸಹಾಯಧನ ಒದಗಿಸಲಾಗದ ಸ್ಥಿತಿ ಗ್ರಾ.ಪಂ.ಗಳಾದ್ದಾಗಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ)ಯಡಿ 2020-21ನೇ ಸಾಲಿನಲ್ಲಿ ರಾಜ್ಯದ ಪ್ರತೀ ಗ್ರಾ.ಪಂ.ಗೆ 20 ಮನೆ ನಿರ್ಮಾಣ ಗುರಿ ನಿಗದಿಪಡಿಸಿ ವರ್ಷ ಸಂದರೂ ಮನೆ ನಿರ್ಮಾಣದ ಬಗ್ಗೆ ಗ್ರಾ.ಪಂ.ಗಳಿಗೆ ಸೂಚನೆ ತಲುಪಿಲ್ಲ. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ 20 ಮನೆ ಗಳಲ್ಲಿ ಶೇ. 60 ಪ.ಜಾತಿ- ಪಂಗಡಕ್ಕೆ, ಶೇ. 25 ಸಾಮಾನ್ಯ ವರ್ಗಕ್ಕೆ, ಶೇ. 15 ಅಲ್ಪಸಂಖ್ಯಾ ಕರಿಗೆ ಒದಗಿಸಲು ಸೂಚಿಸ ಲಾಗಿತ್ತು.

ಶಾಸಕರಿಗೆ ಆಯ್ಕೆಯ ಹೊಣೆ:

Advertisement

ಫಲಾನುಭವಿಗಳ ಗುರುತಿಸುವಿಕೆ ಪಿಡಿಒ, ತಾ.ಪಂ. ಇಒ ಮೂಲಕ ನಡೆದು ಶಾಸಕರ ಅಧ್ಯಕ್ಷತೆಯಲ್ಲಿ ಪಟ್ಟಿ ಅಂತಿಮ ಗೊಳಿಸಲು ನಿರ್ಧರಿಸಿ ಆ  ಪಟ್ಟಿಯನ್ನು ಜಿ.ಪಂ. ಮೂಲಕ ಸರಕಾರಕ್ಕೆ ಸಲ್ಲಿಸ ಲಾಗಿತ್ತು. ಸಿದ್ಧಪಡಿಸಿದ ವಸತಿ ರಹಿತರ ಪಟ್ಟಿಯ ಫಲಾನುಭವಿಗಳ ಜತೆಗೆ ಅರ್ಹರು ಬಿಟ್ಟು ಹೋಗಿದ್ದಲ್ಲಿ ಅವರನ್ನು ಸೇರಿಸಿ ಪಟ್ಟಿ ತಯಾರಿಸಿ ಆಯಾ ತಾ.ಪಂ. ವಸತಿ ನೋಡಲ್‌ ಅ ಧಿಕಾರಿಗಳು ಪಿಡಿಒಗಳ ಮೂಲಕ ಪಟ್ಟಿ ತಯಾರಿಸಿ ಸಲ್ಲಿಕೆಯಾದರೂ ಮನೆ ನಿರ್ಮಾಣಕ್ಕೆ ಗ್ರೀನ್‌ ಸಿಗ್ನಲ್‌ ದೊರೆತಿಲ್ಲ.

ವಸತಿ ಮತ್ತು ನಿವೇಶನ

ರಹಿತ ಕುಟುಂಬಗಳ ವಿವರ

ಮಂಗಳೂರು     11,141

ಬಂಟ್ವಾಳ           14,387

ಬೆಳ್ತಂಗಡಿ           9,990

ಪುತ್ತೂರು            2,606

ಸುಳ್ಯ    2,861

ಮೂಡುಬಿದಿರೆ 2,052

ಕಡಬ   3,946

ಒಟ್ಟು   46,983

ಆಶ್ರಯ ಯೋಜನೆಗೆ ಮರು ಚಾಲನೆ ನೀಡಲಾಗಿದ್ದು ರಾಜ್ಯದಲ್ಲಿ ಐದು ಲಕ್ಷ ಮನೆಗಳು ನಿರ್ಮಾಣಗೊಳ್ಳಲಿದೆ. ಪುತ್ತೂರಿಗೆ 1,260 ಮನೆ ಮಂಜೂರಾಗಿದ್ದು ಪ್ರತೀ ಗ್ರಾ.ಪಂ.ನಲ್ಲಿ 35 ಮನೆ ನಿರ್ಮಾಣಗೊಳ್ಳಲಿದೆ. ಸಂಜೀವ ಮಠಂದೂರು, ಶಾಸಕರು, ಪುತ್ತೂರು

 

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next