Advertisement

ವಸತಿ ಯೋಜನೆ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತರಾಟೆ

08:34 AM Jun 28, 2019 | Team Udayavani |

ಕೋಲಾರ: ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ವಸತಿ ಒದಗಿಸಲು ನೀಡಿದ್ದ ಗುರಿ ಸಾಧನೆ ಮಾಡದ ಅಧಿಕಾರಿಗಳನ್ನುಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತರಾಟೆ ತೆಗೆದುಕೊಂಡರು.

Advertisement

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಸಮಾಧಾನ: ಜಿಲ್ಲೆಯಲ್ಲಿ ಸಾಕಷ್ಟು ಮಂದಿ ವಸತಿ ಹಾಗೂ ನಿವೇಶನ ರಹಿತರು ಇದ್ದಾರೆ. ಅಂತಹ ವಸತಿ ರಹಿತರಿಗೆ ವಸತಿ ಕಲ್ಪಿಸಿದ್ದರೆ ಅನುಕೂಲವಾಗುತ್ತಿರಲಿಲ್ಲವೆ ಎಂದು ಪ್ರಶ್ನಿಸಿ, ಜನರ ಕಷ್ಟಗಳ ಅರಿವು ಇಲ್ಲದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಸೂಚನೆ: ಸ್ಥಳೀಯ ಸಂಸ್ಥೆಗಳಿಂದ ಯಾವ ಯಾವ ಯೋಜನೆಗಳಡಿ ಎಷ್ಟು ಮಂದಿ ಫಲಾನುಭವಿಗಳಿಗೆ ವಸತಿ ಸೌಕರ್ಯ ಕಲ್ಪಿಸಲಾಗಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಬೇಕು ಎಂದು ಯೋಜನಾ ನಿರ್ದೇಶಕರಿಗೆ ಸೂಚಿಸಿದರು.

ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಿದಾಗ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಸಹಕಾರಿಯಾಗುತ್ತದೆ. ಇಲಾಖಾಧಿಕಾರಿಗಳು ಯೋಜನೆಗಳ ಕುರಿತು ವ್ಯಾಪಕ ಪ್ರಚಾರ ನಡೆಸಿದರೆ ಜನ ಅರ್ಜಿ ಹಾಕಿಕೊಳ್ಳುತ್ತಾರೆ ಎಂದರು.

Advertisement

ಡೇಟಾ ಎಂಟ್ರಿ ಮಾಡಿಸಿ: ವಿವಿಧ ಇಲಾಖೆಗಳಿಂದ ರೈತರಿಗೆ ಸೌಕರ್ಯ ಕಲ್ಪಿಸಲು ಪ್ರಧಾನ ಮಂತ್ರಿ ಕಿಸಾನ್‌ ಯೋಜನೆ ಜಾರಿಗೆ ತಂದಿದ್ದು, ಕೆಲ ಇಲಾಖಾಧಿಕಾರಿಗಳು ಅರ್ಜಿ ಆಹ್ವಾನಿಸಿಲ್ಲ. ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆಗೆ ಯೋಜನೆಯಡಿ ಹೆಚ್ಚು ಅರ್ಜಿಗಳು ಬರುತ್ತವೆ. ಬೇರೆ ಇಲಾಖೆಗಳ ಕಂಪ್ಯೂಟರ್‌ ಅಪರೇಟ್‌ಗಳಿಗೆ ಅರ್ಜಿಗಳನ್ನು ಕೊಟ್ಟು ಡೇಟಾ ಎಂಟ್ರಿ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಪ್ರತಿ ದಿನ ಇಲಾಖಾವಾರು ತಲಾ 100 ಅರ್ಜಿ ದಾಖಲು ಮಾಡಬೇಕು. ಈ ಕೆಲಸವೇನು ವರ್ಷ ಪೂರ್ತಿ ಹಿಡಿಯುವುದಿಲ್ಲ. ಕೆಲವೇ ದಿನ ಮಾತ್ರ ಎಂದರು.

ರೈತರ ಅನುಕೂಲಕ್ಕೆ ಕೆಲಸ ಮಾಡಿ: ಅದಕ್ಕೂ ಇಲಾಖೆಯಿಂದ ಹಣ ಕೊಡುತ್ತಾರೆ, ನಿಮ್ಮನ್ನೇನು ಸುಮ್ಮನೆ ಮಾಡಿ ಎಂದು ಹೇಳುತ್ತಿಲ್ಲ, ರೈತರ ಅನು ಕೂಲಕ್ಕಾಗಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ ವಿವಿಧ ಯೋಜ ನೆಗಳಿಂದ ಸೌಕರ್ಯ ಕಲ್ಪಿಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಗಳು ಬಳ ಕೆಯಾಗುತ್ತಿಲ್ಲ. ಬೇರೆ ಇಲಾಖೆಗಳಿಗೆ ಅಲ್ಪ ಸಂಖ್ಯಾತರು ಅರ್ಜಿ ಸಲ್ಲಿಸಿದ್ದರೆ ಅವುಗಳನ್ನು ಅಲ್ಪಸಂಖ್ಯಾತರ ಇಲಾಖೆಗೆ ವರ್ಗಾವಣೆ ಮಾಡಬೇಕೆಂದರು.

ಅರ್ಜಿ ಸ್ವೀಕರಿಸಿ: ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯಡಿ ಗ್ರಾಮಗಳಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ರೈತರಿಂದ ಅರ್ಜಿ ಸ್ವೀಕರಿಸುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next