Advertisement

ಪಿಲಿಂಜ: ಧರ್ಣಮ್ಮಜ್ಜಿ ಮನೆ ಗೃಹಪ್ರವೇಶ

08:16 PM Apr 24, 2019 | mahesh |

ಬಂಟ್ವಾಳ: ಕುಸಿಯುವ ಹಂತದಲ್ಲಿ ಇದ್ದಂತಹ ಗೋಳ್ತಮಜಲು ಗ್ರಾಮ ಕಲ್ಲಡ್ಕ ಪಿಲಿಂಜ ನಿವಾಸಿ ಧರ್ಣಮ್ಮಜ್ಜಿ (65) ಮನೆಯನ್ನು ಕಲ್ಲಡ್ಕದ ಕುಟುಂಬ ಸಂಘಟನೆ ಸದಸ್ಯರು ಪುನರ್‌ ನಿರ್ಮಿಸಿ ಕೊಟ್ಟಿದ್ದು, ಎ. 24ರಂದು ಗೃಹಪ್ರವೇಶ ನಡೆದಿದೆ. ಸಂಘಟನೆಯ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.

Advertisement

ಧರ್ಣಮ್ಮಜ್ಜಿ ಪುತ್ರ ವರ್ಷದ ಮೊದಲು ಮೃತಪಟ್ಟಿದ್ದ. ಅನಾಥ ಅಜ್ಜಿಯ ಮನೆ ಬೀಳುವ ಹಂತಕ್ಕೆ ಬಂದಾಗ ಸಾಲ್ಯಾನ್‌ ಸರ್ವೀಸಸ್‌ ಮಾಲಕ ಚಂದ್ರಶೇಖರ್‌, ಗ್ರಾ.ಪಂ. ಸದಸ್ಯ ಗಿರೀಶ್‌ ಕುಲಾಲ್‌, ಬಂಟ್ವಾಳ ನಗರ ಠಾಣಾಧಿಕಾರಿ ಚಂದ್ರಶೇಖರ್‌, ಬೀಟ್‌ ಪೊಲೀಸ್‌ ನಾಗರಾಜ್‌ ಕೆ., ಸಿಬಂದಿ ಚೆನ್ನಪ್ಪ ಗೌಡ ಸಹಿತ ಕುಟುಂಬ ತಂಡದ ಸದಸ್ಯರು ಧರ್ಣಮ್ಮ ಅವರ ಮನೆ ಮರು ನಿರ್ಮಾಣಕ್ಕೆ ಕೈ ಜೋಡಿಸಿದರು. ತಾವೇ ಕಲ್ಲು ಹೊತ್ತು, ಗೋಡೆ ಕಟ್ಟಿದರು. ಎ. 24ರಂದು ಸಾಂಕೇತಿಕವಾಗಿ ಪೂಜೆ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಜ್ಜಿಯ ಮನೆ ಗೃಹ ಪ್ರವೇಶ ನಡೆದಿದೆ. ಎ. 28ರಂದು ಈ ಮನೆಗೆ ನೆರವು ನೀಡಿದ ದಾನಿಗಳನ್ನು ಕರೆದು ಗೃಹ ಪ್ರವೇಶ ಕಾರ್ಯಕ್ರಮ ನಡೆಯಲಿದೆ.

ಮಿತವೆಚ್ಚದ ಕಾರ್ಯಕ್ರಮ
ಧರ್ಣಮ್ಮಜ್ಜಿ ಮನೆಗೆ ಹೊಸ ಛಾವಣಿ, ಹೊಸ ಶೌಚಾಲಯ, ಮೂಲ ಸೌಕರ್ಯಗಳ ಅಳವಡಿಕೆ ಮೂಲಕ ಮನೆ ಹಸ್ತಾಂತರ ಕಾರ್ಯಕ್ರಮ ಮಿತವೆಚ್ಚದಲ್ಲಿ ನಡೆದಿದೆ.

ಕುಟುಂಬ ಸಂಘಟನೆ
ಕುಟುಂಬ ಎಂಬುದು ನೆಟ್ಲ, ಗೋಳ್ತಮಜಲು ಪರಿಸರದ ನಿಸ್ವಾರ್ಥಿ ಯುವಕರ ತಂಡ. ಅಧ್ಯಕ್ಷ ಧನಂಜಯ ಗುಂಡಿಮಜಲು, ಉಪಾಧ್ಯಕ್ಷ ದಿನೇಶ್‌ ಕೆದ್ಲ, ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ ಗುಂಡಿಮಜಲು ಮತ್ತು ಪುರುಷೋತ್ತಮ ಗೋಳ್ತ ಮಜಲು ತೊಡಗಿಸಿಕೊಂಡಿದ್ದಾರೆ. ನಾವೆಲ್ಲರೂ ಒಂದೇ ಎಂಬ ಮೂಲ ತತ್ತದಡಿ ಸೇವೆಯ ಉದ್ದೇಶ ಇಟ್ಟು ಕೊಂಡು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ.

ಸೇವಾ ಚಟುವಟಿಕೆ
ಕುಟುಂಬ ಸಂಘಟನೆ ಸದಸ್ಯರು ಶ್ರಮಸೇವೆಯಿಂದ ಮನೆ ನಿರ್ಮಾಣದ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಸಲಕರಣೆ, ಆರ್ಥಿಕ ಸಹಕಾರವನ್ನು ದಾನಿಗಳು ನೀಡಿದ್ದಾರೆ. ಮಾ. 23ರಂದು ಮನೆ ನಿರ್ಮಾಣದ ಕೆಲಸ ಆರಂಭಿಸಿದ್ದು, ಎ. 24ರಂದು ಗೃಹ ಪ್ರವೇಶ ಆಗಿದೆ. ಇದಲ್ಲದೆ ಸಂಘಟನೆ ಸಾರ್ವಜನಿಕ ಸ್ಥಳಗಳಲ್ಲಿ, ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವತ್ಛತಾ ಕಾರ್ಯ, ರಕ್ತದಾನ, ಪರಿಸರ ಸಂರಕ್ಷಣೆ, ಬಡ ಕುಟುಂಬ-ವಿದ್ಯಾರ್ಥಿಗಳಿಗೆ ನೆರವು, ಸರಕಾರದ ಯೋಜನೆಗಳ ಅನುಷ್ಠಾನ. ನೆರವು, ಪ್ರಾಕೃತಿಕ ವಿಕೋಪದ ಸಂದರ್ಭ ರಕ್ಷಣಾ ತಂಡಕ್ಕೆ ಸಹಕರಿಸುವ ಸೇವಾ ಕಾರ್ಯ ಮಾಡುತ್ತದೆ. ಸೇವಾ ಸಮಯದಲ್ಲಿ ಸಂಘದ ಸದಸ್ಯರು ಸಮವಸ್ತ್ರದಲ್ಲಿರುವುದು. ಮೊಬೈಲ್‌ ಬಳಕೆ ನಿಷಿದ್ಧ.
– ಧನಂಜಯ ಗುಂಡಿಮಜಲು, ಅಧ್ಯಕ್ಷರು, ಕುಟುಂಬ ಸಂಘಟನೆ, ಕಲ್ಲಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next