ಹೊಸದಿಲ್ಲಿ: ಮನೆಯಲ್ಲಿ ಗೃಹಿಣಿ ಮಾಡುವ ಕೆಲಸಗಳ ಮೌಲ್ಯವು, ಕಚೇರಿಯಲ್ಲಿ ಕೆಲಸ ಮಾಡಿ ಸಂಬಳ ತರುವ ಕೆಲಸಕ್ಕಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಅಭಿ ಪ್ರಾಯಪಟ್ಟಿದೆ. ಮೋಟಾರು ವಾಹನ ಅಪ ಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯ ಮೂರ್ತಿಗಳಾದ ಸೂರ್ಯಕಾಂತ್ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ನ್ಯಾಯ ಪೀಠ, ಮನೆಯನ್ನು ನೋಡಿ ಕೊಳ್ಳುವ ಮಹಿಳೆಯ ಮೌಲ್ಯವು ಉನ್ನತ ಮಟ್ಟದ್ದು. ಆಕೆಯ ಕೊಡುಗೆಯನ್ನು ವಿತ್ತೀಯ ಪರಿಭಾಷೆಯಲ್ಲಿ ಪ್ರಮಾಣೀ ಕರಿಸುವುದು ಕಷ್ಟ. ಮೋಟಾರು ವಾಹನ ಪರಿಹಾರ ಪ್ರಕರಣಗಳಲ್ಲಿ ಕೋರ್ಟ್‌ಗಳು ಗೃಹಿಣಿಯರು ಮಾಡು ವ ಕೆಲಸ, ಶ್ರಮ, ತ್ಯಾಗದ ಆಧಾರದಲ್ಲಿ ಆದಾಯ ವನ್ನು ಲೆಕ್ಕ ಹಾಕಬೇಕು ಎಂದಿದೆ.
ವಿಚಾರಣೆಯಾದ ಪ್ರಕರಣ ಯಾವುದು ?
ಉತ್ತರಾಖಂಡದಲ್ಲಿ 2006ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದರು. ಅವರಿಗೆ ಢಿಕ್ಕಿ ಹೊಡೆದು, ಸಾವಿಗೆ ಕಾರಣವಾದ ವಾಹನ ವಿಮೆ ಹೊಂದಿರಲಿಲ್ಲ. ಬಳಿಕ ಮಹಿಳೆ ಕುಟುಂಬ ಕೋರ್ಟ್ ಮೆಟ್ಟಿಲೇರಿದಾಗ ಮೋಟಾರು ಅಪ ಘಾತ ನ್ಯಾಯ ಮಂಡಳಿಯು, ಮಹಿಳೆಯ ಕುಟುಂಬಕ್ಕೆ 2.5 ಲಕ್ಷ ರೂ. ಪರಿಹಾರಕ್ಕೆ ಆದೇಶಿಸಿತ್ತು. ಉತ್ತರಾಖಂಡ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರೂ ಅರ್ಜಿ ತಿರಸ್ಕೃತ ಗೊಂಡಿತ್ತು. ಹೀಗಾ ಗಿ, ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.