Advertisement

ಮಳೆಗಾಲದಲ್ಲಿ ಜಲಾವೃತವಾಗುವ ಮನೆಗಳು

12:45 AM Feb 25, 2020 | Sriram |

ಕುಂದಾಪುರ: ಬಹದ್ದೂರ್‌ಶಾ, ಚಿಕ್ಕನ್‌ಸಾಲ್‌, ಖಾರ್ವಿಕೇರಿ ಹೀಗೆ ಮೂರು ವಾರ್ಡ್‌ಗಳಿಗೆ ಸಂಬಂಧಿಸಿದ ಸುಡುಗಾಡು ತೋಡಿಗೆ ಕಾಂಕ್ರಿಟ್‌ ಚಪ್ಪಡಿ ಹಾಕಬೇಕು ಎಂದು ಮೂರೂ ವಾರ್ಡ್‌ಗಳ ಜನರ ಬೇಡಿಕೆಯಿದೆ.

Advertisement

ಸುದಿನ ವಾರ್ಡ್‌ ಸುತ್ತಾಟ ಸಂದರ್ಭ ಬಹದ್ದೂರ್‌ ಶಾ ರಸ್ತೆಯ ಮನೆಗಳಿಗೆ ಭೇಟಿ ನೀಡಿದಾಗಲೂ ಜನ ಹೇಳಿದ್ದು ಪ್ರಮುಖವಾಗಿ ಇದನ್ನೇ.

ಸ್ಲ್ಯಾಬ್ ಹಾಕಲಿ
ಸುಡುಗಾಡು ತೋಡಿನಲ್ಲಿ ಕಸ, ಕಡ್ಡಿ, ತ್ಯಾಜ್ಯದ ರಾಶಿಯೇ ಇದೆ. ಸುತ್ತೆಲ್ಲ ಮನೆಗಳಿಗೆ ಈ ನೀರಿನ ವಾಸನೆ, ಸೊಳ್ಳೆ ಕಾಟ. ನೀರು ಹರಿಯುವ ಕ್ರಮವೂ ಕಡಿಮೆ. ಸ್ವಚ್ಛತೆಯ ಪ್ರಶ್ನೆಯೇ ಇಲ್ಲ. ಮಕ್ಕಳು ಮರಿ ಎಂದು ಇದರೆಡೆಗೆ ಹೋಗದಂತೆ ಸುತ್ತಮುತ್ತಲ ಮನೆಯವರು ಸದಾ ಎಚ್ಚರಿಕೆ ವಹಿಸುತ್ತಾರೆ. ಹಾಇದ ತಡೆಗೋಡೆ ಕೆಲವೆಡೆ ಬಿದ್ದಿವೆ. ಇದರಿಂದ ಮನೆಗಳೂ ಅಪಾಯದಲ್ಲಿವೆ. ಹಾಗಾಗಿ ಇದಕ್ಕೊಂದು ಸಿಮೆಂಟ್‌ ಸ್ಲಾéಬ್‌ ಹಾಕಿ. ಆಗ ವಾಸನೆ ಬರುವುದಿಲ್ಲ. ತ್ಯಾಜ್ಯ ನೇರ ಎಸೆಯಲಾಗುವುದಿಲ್ಲ. ರಸ್ತೆಯಂತೆ ಬಳಕೆ ಮಾಡಲೂ ಸಾಧ್ಯವಿದೆ ಎನ್ನುತ್ತಾರೆ ಸ್ಥಳೀಯರು. ಹಾಗೊಂದು ವೇಳೆ ಇದು ರಸ್ತೆಯಂತೆ ಬಳಕೆಯಾದರೆ ಬಹದ್ದೂರ್‌ ಶಾ ರಸ್ತೆಗೆ ಪರ್ಯಾಯ ರಸ್ತೆಯೇ ಆಗಲಿದೆ. ಏಕೆಂದರೆ ಬಹದ್ದೂರ್‌ ಶಾ ರಸ್ತೆಯಂತೆಯೇ ಇದೂ ಖಾರ್ವಿಕೇರಿಯಿಂದ ಸಂಗಮ ಸೇತುವೆಯನ್ನು ಸಂಪರ್ಕಿಸುತ್ತದೆ. ಬಹದ್ದೂರ್‌ ಷಾ ರಸ್ತೆಯಿಂದ ಜೈ ಹಿಂದ್‌ ಹೋಟೆಲ್‌ ಮಾರ್ಗವಾಗಿ ಸಂತೆ ಮಾರ್ಕೆಟ್‌ಗೆ ಹೊಂದುವ ರಸ್ತೆ ಕಾಮಗಾರಿ ಅಧ‌ìದಲ್ಲಿ ನಿಂತಿದೆ. ಈ ಬಗ್ಗೆಯು ಪುರಸಭೆ ಕೂಡಲೆ ಗಮನಹರಿಸಬೇಕು.

ಸ್ವಚ್ಛತೆಗೆ ಆದ್ಯತೆ ನೀಡಿ
ಜನರ ಅನುಕೂಲಕ್ಕಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಿಂಗ್‌ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಇದರ ಸ್ವತ್ಛತೆ ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಸ್ಥಳೀಯ ಯುವ ಬ್ರಿಗೇಡ್‌ನ‌ವರು ಸ್ವಚ್ಛತೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪುರಸಭೆಯು ಪಂಚಗಂಗಾವಳಿ ಸ್ವಚ್ಛತೆಗೆ ಕನಸು ನನಸು ಮಾಡಬೇಕಿದೆ.

ಅಧಿಕಾರ ಕೊಡಲಿ
ಚುನಾವಣೆ ನಡೆದು 2 ವರ್ಷಗಳಾಗುತ್ತಾ ಬಂದರೂ ಪುರಸಭಾ ಆಡಳಿತ ನಡೆಸಲು ಸಾಧ್ಯವಾಗಿಲ್ಲ. ಮತ ಚಲಾಯಿಸಿದ ಜನಪ್ರತಿನಿಧಿ ಯಿಂದ ಕೆಲಸಗಳ ನಿರೀಕ್ಷೆ ಕುಂಠಿತಗೊಂಡಿದೆ. ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದ್ದು ಈ ಬಗ್ಗೆ ಸರಕಾರ ಶೀಘ್ರವಾಗಿ ಗಮನಹರಿಸಬೇಕಿದೆ ಎನ್ನುತ್ತಾರೆ ವಾರ್ಡ್‌ನ ಜನ.

Advertisement

ಕಾಮಗಾರಿ
ಪುರಸಭೆ ವತಿಯಿಂದ ಈ ಭಾಗದಲ್ಲಿ ಹರಿಯುವ ರಾಜಾಕಾಲುವೆಗೆ 4 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ಕಟ್ಟಿ ಸ್ಲಾéಬ್‌ ಹಾಕುವ ಕಾರ್ಯ ಈಚೆಗೆ ನಡೆದಿದೆ. ಸುಡುಗಾಡು ತೋಡಿಗೆ ಎರಡು ವರ್ಷಗಳ ಹಿಂದೆ 11 ಲಕ್ಷ ರೂ. ಮಂಜೂರಾಗಿದ್ದರೂ ಕಾಮಗಾರಿಯಾಗದೇ ಅನುದಾನವನ್ನು ಬೇರೆ ವಾರ್ಡ್‌ಗೆ ಬಳಸಲಾಗಿದೆ ಎನ್ನುತ್ತಾರೆ ಇಲ್ಲಿನವರು. ಕೆಲವೆಡೆ ಬೀದಿದೀಪ ಅಳವಡಿಸಬೇಕೆಂಬ ಬೇಡಿಕೆ ಇದೆ. ಕೆರೆಯೊಂದಿದ್ದು ಶುಚಿಗೊಳಿಸಿ ಆವರಣ ಗೋಡೆ ನಿರ್ಮಿಸಬೇಕಿದೆ.

ಜಲಾವೃತ
ಐವತ್ತಕ್ಕೂ ಅಧಿಕ ಮನೆಗಳು ಈ ಭಾಗದಲ್ಲಿ ಮುಖ್ಯರಸ್ತೆ ಬಿಟ್ಟು ಗದ್ದೆಗಳಲ್ಲಿ ನಿರ್ಮಾಣವಾಗಿವೆ. ಇವುಗಳಿಗೆ ಸರಿಯಾದ ರಸ್ತೆ ಇಲ್ಲ ಎನ್ನುವ ಬೇಡಿಕೆಯಿದೆ. ಇದು ಹೇಗೆ ಪೂರೈಸಬಹುದು ಎನ್ನುವುದೂ ಗೊತ್ತಿಲ್ಲ. ಏಕೆಂದರೆ ಅಂತಹ ಇಕ್ಕಟ್ಟಾದ ಪರಿಸರ ಇದೆ. ಹಾಗಾಗಿ ಈ ಮನೆಗಳವರು ವಾಹನ ಕೊಂಡರೆ ಎಲ್ಲೆಲ್ಲೋ, ರಸ್ತೆ ಬದಿ ಇಟ್ಟು ಬರಬೇಕಾಗುತ್ತದೆ. ಇದಕ್ಕಿಂತ ಘೋರ ಎಂದರೆ ಮಳೆಗಾಲದ ಮೂರ್ನಾಲ್ಕು ತಿಂಗಳು ಈ ಮನೆಗಳು ಮಳೆನೀರಿನಿಂದ ಜಲಾವೃತವಾಗಿರುತ್ತವೆ. ಈ ನೀರು ಸುಡುಗಾಡು ತೋಡು ಸೇರುವಂತೆ ಮಾಡಿದರೆ ಅಷ್ಟೂ ಮನೆಯವರಿಗೆ ನೆಮ್ಮದಿ.

ಬೇಡಿಕೆ ಇಟ್ಟಿದ್ದೇನೆ
ಸುಡುಗಾಡು ತೋಡಿಗೆ ಕಾಂಕ್ರೀಟ್‌ ಮುಚ್ಚಿಗೆ ಹಾಕುವಂತೆ ಪುರಸಭೆಯಲ್ಲಿ ಬೇಡಿಕೆಯಿಟ್ಟಿದ್ದೇನೆ. ಬೇರೆ ವಾರ್ಡ್‌ಗಳಲ್ಲಿ ರಾಜಾಕಾಲುವೆಗೆ ಮುಚ್ಚಿಗೆ ಹಾಕಿ ರಸ್ತೆಯನ್ನು ಮಾಡಲಾಗಿದ್ದು ಇಲ್ಲೂ ಅದೇ ಮಾದರಿಯಲ್ಲಿ ಬೇಕೆಂದು ಜನರ ಬೇಡಿಕೆಯಿದೆ. ಈ ಬೇಡಿಕೆ ಈಡೇರಿದರೆ ಮೈಲಾರೇಶ್ವರದಿಂದ ಸಂಗಂ ಸೇತುವೆವರೆಗೆ ಬಹದ್ದೂರ್‌ಶಾ ರಸ್ತೆಗೆ ಪರ್ಯಾಯ ರಸ್ತೆಯೇ ಆಗಲಿದೆ.
-ಸಂದೀಪ್‌ ಖಾರ್ವಿ, ಸದಸ್ಯರು, ಪುರಸಭೆ

ರಸ್ತೆಉಬ್ಬು ಸರಿಪಡಿಸಿ
ಒಳಚರಂಡಿ ಕಾಮಗಾರಿ ಸಂದರ್ಭ ಕಾಂಕ್ರಿಟ್‌ ರಸ್ತೆ ಅಗೆದು ಹಾಳುಗೆಡವಿದ್ದೇ ಅಲ್ಲದೇ ರಸ್ತೆಗಿಂತ ಎತ್ತರವಾಗಿ ಮ್ಯಾನ್‌ಹೋಲ್‌ ಮುಚ್ಚಳಗಳನ್ನು ಹಾಕಲಾಗಿದೆ. ಅಲ್ಲಲ್ಲಿ ಇಂತಹ ರಸ್ತೆಯುಬ್ಬುಗಳಿಂದಾಗಿ ಆಗಾಗ ಅಪಘಾತಗಳು ಸಂಭವಿಸುತ್ತಿರುತ್ತವೆ. ಈ ನಿಟ್ಟಿನಲ್ಲಿ ಗಮನ ಅಗತ್ಯ.
-ಗಣೇಶ್‌ ಎಚ್‌. ಖಾರ್ವಿ,
ಬಹದ್ದೂರ್‌ ಶಾ ರಸ್ತೆ

ಸುಡುಗಾಡು ತೋಡಿಗೆ ಮುಚ್ಚಿಗೆ
ಮೂರು ವಾರ್ಡ್‌ಗಳಿಗೆ ಸಂಬಂಧಿಸಿದ ಸುಡುಗಾಡು ತೋಡಿಗೆ ಮುಚ್ಚಿಗೆ ಹಾಕಬೇಕು. ಆಗ ಸಾವಿರಾರು ಜನರಿಗೆ ಪ್ರಯೋಜನವಾಗುತ್ತದೆ. ಅದರ ಸನಿಹದ ಮನೆಗಳಿಗೂ ಉಪಕಾರವಾಗುತ್ತದೆ.
-ಸುನಿಲ್‌ ಖಾರ್ವಿ,ಬಹದ್ದೂರ್‌ ಶಾ ರಸ್ತೆ

Advertisement

Udayavani is now on Telegram. Click here to join our channel and stay updated with the latest news.

Next