Advertisement
ಸದ್ಯ ಹೌಸ್ ಬೋಟ್ ಖಾಸಗಿಯಾಗಿ ಉಡುಪಿ ಭಾಗದಲ್ಲಿ ಎರಡು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರವಾಸಿಗರನ್ನು ನೀರಿನಲ್ಲಿ ಬೋಟ್ ಮೂಲಕ ಕರೆದುಕೊಂಡು ಹೋಗಿ, ಅಲ್ಲಿಯೇ ಊಟ, ನೃತ್ಯ, ಸಂಗೀತದ ಆಸ್ವಾದನೆಯೊಂದಿಗೆ ರಾತ್ರಿ ವಿಶ್ರಾಂತಿಗೆ ಕೂಡ ವ್ಯವಸ್ಥೆ ಕಲ್ಪಿಸ ಲಾಗುತ್ತದೆ. ರಾತ್ರಿಯೆಲ್ಲ ನೀರಿನ ಮಧ್ಯೆಯೇ ಹೌಸ್ ಬೋಟ್‌ನಲ್ಲಿ ಕಾಲ ಕಳೆಯಬೇಕಾಗುತ್ತದೆ. ಇದೇ ರೀತಿ ಬೋಟಿನಲ್ಲಿ ತೇಲಾಡುತ್ತಲೇ ಹೊಟೇಲ್ ಸೌಲಭ್ಯವನ್ನು ಪಡೆ ಯುವ “ತೇಲುವ ಉಪಾಹಾರ ಗೃಹ’ ಕೂಡ ಪ್ರವಾಸೋದ್ಯಮದ ಬೆಳವಣಿಗೆಯ ದೃಷ್ಟಿಯಲ್ಲಿ ಹೊಸ ಬೆಳವಣಿಗೆಯಾಗಿದೆ.
Related Articles
ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಅವಕಾಶವಿದೆ. ಇದೇ ರೀತಿ ಮಂಗಳೂರು ಮಹಾನಗರ ಪಾಲಿಕೆ ಸಹಿತ ನಗರಸಭೆ/ಪುರಸಭೆಗಳಲ್ಲಿ ಪೌರ ಕಾರ್ಮಿಕರಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ನಾಮ ನಿರ್ದೇಶನ ಮಾಡಲಾಗುತ್ತದೆ. ಇದರಿಂದಾಗಿ ಮಂಗಳೂರು ಪಾಲಿಕೆಯಲ್ಲಿ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಪಾಲಿಕೆ ಸಭೆಯಲ್ಲಿ ಧ್ವನಿಯಾಗಲು ಓರ್ವ ಪೌರಕಾರ್ಮಿಕನಿಗೆ ಜವಾಬ್ದಾರಿ ನೀಡಿದಂತಾಗಿದೆ.
Advertisement
ಇದೇ ರೀತಿ, ಬಹುಮಹಡಿ ಕಟ್ಟಡ ನಿರ್ಮಾಣದ ಯೋಜನೆಯನ್ನು ರಾಜ್ಯದ ಎಲ್ಲ ನಗರ ಪ್ರದೇಶಗಳಿಗೂ ವಿಸ್ತರಿಸಿ, “ಮುಖ್ಯಮಂತ್ರಿಗಳ ನಗರ ವಸತಿ ಯೋಜನೆ’ ಜಂಬ ಹೆಸರಿನ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದು ಮಂಗಳೂರಿಗೆ ಅನ್ವಯವಾಗಲಿದೆ. ಇದರ ಜತೆಗೆ, ನಗರ ಪ್ರದೇಶದಲ್ಲಿ ವಸತಿ ಯೋಜನೆಗಳ ಅನುಷ್ಠಾನಕ್ಕಾಗಿ ಮಂಗಳೂರು ಪಾಲಿಕೆಯಲ್ಲಿ 500 ಎಕರೆ, ನಗರಸಭೆ/ಪುರಸಭೆ ವ್ಯಾಪ್ತಿಯಲ್ಲಿ 250 ಎಕರೆ ಹಾಗೂ ಇತರ ಪಟ್ಟಣ ಪ್ರದೇಶಗಳಲ್ಲಿ 100 ಎಕರೆ ಸರಕಾರಿ ಜಮೀನನ್ನು ವಸತಿಗಾಗಿ ಮೀಸಲಿಡಲು ಉದ್ದೇಶಿಸಲಾಗಿದೆ. ಸ್ಮಾರ್ಟ್‌ಸಿಟಿಗೆ ಆಯ್ಕೆಯಾದ ಮಂಗಳೂರಿನಲ್ಲಿ ವಿದ್ಯುತ್ ಉಳಿತಾಯ ಮಾಡಲು ಸಾಂಪ್ರದಾಯಿಕ ಬೀದಿ ದೀಪಗಳ ಬದಲಿಗೆ ಕೇಂದ್ರೀಕೃತ ನಿಯಂತ್ರಣ ಮತ್ತು ಉಸ್ತುವಾರಿ ವ್ಯವಸ್ಥೆ ಹೊಂದಿದ ಎಲ್‌ಇಡಿ ದೀಪಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗುತ್ತದೆ. ನಗರದಲ್ಲಿ ಪ್ರತ್ಯೇಕ “ಉಸ್ತುವಾರಿ ಕೋಶ’ ಸ್ಥಾಪಿಸಿ, ನೀರಿನ ಸೋರಿಕೆ ಪ್ರಮಾಣ ಶೇ.5ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ.
ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹಮಂಗಳೂರಿನಲ್ಲಿರುವ ಪ್ರಸ್ತುತ ಜೈಲನ್ನು ಸ್ಥಳಾಂತರಗೊಳಿಸಬೇಕು ಎಂಬ ಬಗ್ಗೆ ಸುದೀರ್ಘ ಬೇಡಿಕೆಯಂತೆ ಈಗ ನಗರದ ಹೊರವಲಯದಲ್ಲಿ ಸುಸಜ್ಜಿತ ಜೈಲು ನಿರ್ಮಾಣಕ್ಕೆ ಸರಕಾರ ಕೊನೆಗೂ ಮನಸ್ಸು ಮಾಡಿದೆ. ಇತ್ತೀಚೆಗೆ ಜೈಲು ನಿರ್ಮಾಣಕ್ಕೆ ಪೂರಕ ಕಾಮಗಾರಿಗೆ ಮುಡಿಪು ಸಮೀಪದ ಇರಾದಲ್ಲಿ ಸಚಿವ ಖಾದರ್ ಅವರು ಶಿಲಾನ್ಯಾಸ ನಡೆಸಿದ್ದರು. ಇದೀಗ ಜೈಲು ನಿರ್ಮಾಣಕ್ಕೆ 85 ಕೋ.ರೂ. ಅನುದಾನವನ್ನು ಮೀಸಲಿಡಲಾಗಿದೆ. ಹಳೆ ಬಂದರಿನಲ್ಲಿ ಕೋಸ್ಟಲ್ ಬರ್ತ್
ಹಳೆ ಮಂಗಳೂರು ಬಂದರಿನಲ್ಲಿ 65 ಕೋ.ರೂ.ಗಳ ಮೊತ್ತದಲ್ಲಿ 300 ಮೀಟರ್ ಉದ್ದ “ಕೋಸ್ಟಲ್ ಬರ್ತ್’ ನಿರ್ಮಾಣ ಹಾಗೂ ಬಂದರಿನ ಆಳವನ್ನು 29 ಕೋ.ರೂ. ವೆಚ್ಚದಲ್ಲಿ 7 ಮೀಟರ್‌ವರೆಗೆ ಹೆಚ್ಚಿಸಲು ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ವಿದ್ಯುತ್ ಪ್ರಸರಣಾ ಜಾಲವನ್ನು ಬಲವರ್ಧನೆಗೊಳಿಸುವ ಇರಾದೆಯಿಂದ ಮಂಗಳೂರು ತಾಲೂಕಿನ ಮೂಲ್ಕಿಯಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಹಾಗೂ ಕರಾವಳಿ ಪ್ರದೇಶಗಳ ಅಭಿವೃದ್ಧಿ ಮಂಡಳಿಗಳಿಗೆ 25 ಕೋ.ರೂ. ಒದಗಿಸಲು ಬಜೆಟ್‌ನಲ್ಲಿ ತೀರ್ಮಾನಿಸಲಾಗಿದೆ. ನೇತ್ರಾವತಿಗೆ ಇನ್ನೊಂದು ಡ್ಯಾಂ..!
ಪಶ್ಚಿಮವಾಹಿನಿ ಯೋಜನೆಯನ್ನು 2017-18ನೇ ಸಾಲಿನಲ್ಲಿ ಜಾರಿಗೆ ತರಲಾಗಿದೆ. ಹರೇಕಳ ಎಂಬಲ್ಲಿ ಕುಡಿಯುವ ನೀರು, ನೀರಾವರಿ ಸೌಲಭ್ಯ ಕಲ್ಪಿಸಲು ನೇತ್ರಾವತಿ ನದಿಗೆ ಉಪ್ಪು ನೀರು ತಡೆಯುವ ಕಿಂಡಿ ಅಣೆಕಟ್ಟನ್ನು 174 ಕೋ.ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಸಿಎಂ ಬಜೆಟ್ ಭಾಷಣದಲ್ಲಿ ಉಲ್ಲೇಖೀಸಿದ್ದಾರೆ. ಈ ಮೂಲಕ ತುಂಬೆಯ ಸಮೀಪದಲ್ಲಿ ನೇತ್ರಾವತಿ ನದಿಗೆ ಇನ್ನೊಂದು ಡ್ಯಾಂ ನಿರ್ಮಾಣಗೊಳ್ಳುವುದು ಖಚಿತವಾಗಿದೆ. ತುಂಬೆ ಡ್ಯಾಂನಿಂದ ನೇತ್ರಾವತಿ ನದಿಯ ದಕ್ಷಿಣ ಭಾಗದ ಪ್ರದೇಶಗಳಿಗೆ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳಿಗೆ ಸಚಿವ ಯು.ಟಿ. ಖಾದರ್ ಅವರು ಕೆಲವು ಸಮಯದ ಹಿಂದೆಯೇ ಮನವಿ ಸಲ್ಲಿಸಿದ್ದರು. 15 ಹಳ್ಳಿಗಳಿಗೆ ಈ ನೀರಿನ ಸೌಲಭ್ಯ ದೊರೆಯಲಿದೆ. ಮೀನುಗಾರರಿಗೆ ಉಚಿತವಾಗಿ ದೊರೆಯಲಿವೆ ಮೆಶ್ ಬಲೆಗಳು..!
ಮೀನು ಮರಿಗಳನ್ನು ಹಿಡಿಯುವುದನ್ನು ತಪ್ಪಿಸಿ ಮತ್ಸ ಸಂಪತ್ತನ್ನು ರಕ್ಷಿಸಲು ಮೀನುಗಾರರಿಗೆ “ಕಾಡ್ ಎಂಡ್’ನಲ್ಲಿ 35 ಎಂಎಂ ಚೌಕದ ಮೆಶ್ ಬಲೆಗಳನ್ನು ಉಚಿತವಾಗಿ ನೀಡಲು ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ. ಇದಕ್ಕಾಗಿ 2,500 ಟ್ರಾಲ್ ದೋಣಿಗಳಿಗೆ ತಲಾ 10,000 ರೂ.ಗಳಂತೆ 2.50 ಕೋ.ರೂ. ಅನುದಾನ ಒದಗಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮೀನು ಮಾರಾಟಗಾರರು ಮಾರಾಟವಾಗದೇ ಉಳಿಯುವ ಮೀನನ್ನು ಮೀನು ಮಾರುಕಟ್ಟೆಗಳಲ್ಲಿ ಶೀಥಲೀಕೃತ ಘಟಕದಲ್ಲಿ ಸಂಗ್ರಹಿಸಲು “ಮತ್ಸ ಜೋಪಾಸಣೆ’ ಯೋಜನೆ’ಯಡಿ ರಾಜ್ಯದಲ್ಲಿ 10 ಶೀಥಲೀಕೃತ ಘಟಕಗಳನ್ನು ತಲಾ 10 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತದೆ. ಇದಕ್ಕಾಗಿ ಒಂದು ಕೋ.ರೂ. ಮೀಸಲಿರಿಸಿದೆ. ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಮಹಿಳಾ ಮೀನುಗಾರರಿಗೆ 50,000 ರೂ.ವರೆಗೆ ಶೇ.2ರ ಬಡ್ಡಿ ದರದಲ್ಲಿ ವಾಣಿಜ್ಯ/ಗ್ರಾಮೀಣ ಪ್ರಾದೇಶಿಕ ಬ್ಯಾಂಕ್‌ಗಳಿಂದ ನೀಡಲಾಗುತ್ತಿರುವ ಸಾಲವನ್ನು 2018-19ನೇ ಸಾಲಿನಿಂದ ಶೂನ್ಯ ಬಡ್ಡಿ ದರದಲ್ಲಿ ನೀಡಲು ನಿರ್ಧರಿಸಲಾಗಿದೆ. ಇವೆಲ್ಲವೂ ಮಂಗಳೂರು ಸಹಿತ ಬೇರೆ ಬೇರೆ ಭಾಗದ ಮೀನುಗಾರ ಕುಟುಂಬಗಳಿಗೆ ನೆರವಾಗಲಿದೆ.