Advertisement

ನೆಲಮಂಗಲ: ಗಂಡನ ಮನೆಯಲ್ಲಿ ಗೃಹಿಣಿ ಆತ್ಮಹತ್ಯೆ: ಪೋಷಕರಿಂದ ಕೊಲೆ ಆರೋಪ

03:18 PM Jun 04, 2022 | Team Udayavani |

ನೆಲಮಂಗಲ: ಗಂಡನ ಮನೆಯಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ( ಜೂ.4 ರಂದು) ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ.

Advertisement

ಪೂಜಾ ಮೃತ ಗೃಹಿಣಿ. ಎರಡು ವರ್ಷದ ಹಿಂದೆ ಮಂಜುನಾಥ್‌ ಎಂಬವನಿಗೆ ಪೂಜಾಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು.

ಕೊಲೆ ಆರೋಪ: ಘಟನೆ ಬಗ್ಗೆ ಪೂಜಾಳ ಮನೆಯವರು ಮಾತಾನಾಡಿ, ಕೊಲೆ ಮಾಡಿ ನೇಣು ಹಾಕಿದ್ದಾರೆ ಎನ್ನುವ ಆರೋಪವನ್ನು ಮಾಡಿದ್ದಾರೆ. ಹೆಂಡತಿಯೊಂದಿಗೆ ಗಂಡ ಮುಂಜುನಾಥ ಪ್ರತಿನಿತ್ಯ ಕುಡಿದು  ಬಂದು ಗಲಾಟೆ ಮಾಡುತ್ತಿದ್ದ, ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕಷ್ಟ ಕೊಡುತ್ತಿದ್ದರು. ಮಂಜುನಾಥನಿಗೆ ಶಿಕ್ಷೆ ಆಗಬೇಕು ಎಂದು ಮೃತಳ ಪೋಷಕರು, ಸಂಬಂಧಿಕರು ಆಗ್ರಹಿಸಿದ್ದಾರೆ.

ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next