Advertisement

ಹೊಸ ಮನೆಗೆ ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್ ಹೆಸರಿಟ್ಟು ಗುರುಭಕ್ತಿ ಮೆರೆದ ಬಿಜೆಪಿ ಸಂಸದ

05:47 PM Aug 29, 2020 | sudhir |

ವಿಜಯಪುರ: ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಜನತಾ ಪರಿವಾರದ ನಾಯಕರ ಹೆಸರನ್ನು ಮನೆಗೆ ನಾಮಕರಣ ಮಾಡುವ ಮೂಲಕ ಬಿಜೆಪಿ ಸಂಸದ ಗುರುಭಕ್ತಿ ಮೆರೆದಿದ್ದಾರೆ.

Advertisement

ಜನತಾ ಪರಿವಾರ ಮೂಲದ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಮ್ಮ ಮನೆಗೆ ತಮ್ಮ ರಾಜಕೀಯ ಗುರುಗಳಾದ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಜೆ.ಎಚ್.ಪಾಟೇಲ್ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.

ಶನಿವಾರ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮದಿನ. ಹೀಗಾಗಿ ದಶಕದ ಹಿಂದೆ ನಗರದ ಹೊರ ವಲಯದಲ್ಲಿರುವ ಭೂತನಾಳ ಬಳಿ ನಿರ್ಮಿಸಿರುವ ಮನೆಗೆ ಹೆಗಡೆ, ಪಟೇಲ್ ಅವರ ನಾಮಕರಣ ಮಾಡುವ ಮೂಲಕ ಗುರುಭಕ್ತಿ ಮೆರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next