Advertisement

ಹುಮನಾಬಾದ್: ಕಲ್ಲು ಗಣಿಗಾರಿಕೆಯ ಭಾರೀ ಪ್ರಮಾಣದ ಸ್ಫೋಟಕದಿಂದ ಕುಸಿದು ಬಿದ್ದ ಮನೆ ಗೋಡೆ

12:55 PM Jun 26, 2022 | Team Udayavani |

ಹುಮನಾಬಾದ್: ಕಲ್ಲು ಗಣಿಗಾರಿಕೆಗಾಗಿ ಸ್ಪೋಟಿಸಿದ ಭಾರೀ ಪ್ರಮಾಣದ ಸ್ಫೋಟಕದಿಂದ ಮನೆಯೊಂದು ಕುಸಿದು ಬಿದ್ದಿರುವ ಘಟನೆ ತಾಲೂಕಿನ ಹಳ್ಳಿಖೇಡ(ಕೆ) ವಾಡಿಯಲ್ಲಿ ನಡೆದಿದೆ.

Advertisement

ತಾಲೂಕಿನ ಹಳ್ಳಿಖೇಡ(ಕೆ) ವಾಡಿ ಗ್ರಾಮದ ಲಕ್ಷ್ಮಣ ಸುಭಾಷ್ ಎಂಬುವರ ಮನೆಯ ಗೋಡೆಯಲ್ಲಿ ಬಿರುಕು ಬಿಟ್ಟು ಗೋಡೆ ಕುಸಿದು ಬಿದ್ದಿದೆ. ಶನಿವಾರ ಮಧ್ಯಾಹ್ನ ಭಾರೀ ಪ್ರಮಾಣದ ಸ್ಫೋಟಕವನ್ನು ಗಣಿಗಾರಿಕೆ ಪ್ರದೇಶದಲ್ಲಿ ಸ್ಪೋಟಿಸಿದ ಹಿನ್ನೆಲೆಯಲ್ಲಿ ಮನೆ ಬಿರುಕುಬಿಟ್ಟಿದ್ದು ಸಂಜೆ ಹೊತ್ತಿಗೆ ಗೋಡೆ ಕುಸಿದು ಬಿದ್ದಿದೆ. ಘಟನೆ ಸಂದರ್ಭದಲ್ಲಿ ರುಕ್ಮಿಣಿ ಹಾಗೂ ಅವಳ ಮಕ್ಕಳು  ಪ್ರಾಣಾಪಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯವಾಗಿದೆ ಎಂದು ಮನೆಯ ಮಾಲಿಕ ಲಕ್ಷ್ಮಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆಯ ಮಾಹಿತಿ ಪಡೆದ ಚಿಟಗುಪ್ಪ ಸಿಪಿಐ ಅಮೂಲ ಕಾಳೆ, ಹುಮನಾಬಾದ್ ತಹಶೀಲ್ದಾರ ಪ್ರದೀಪಕುಮಾರ ಭೇಟಿನೀಡಿ ಭಾನುವಾರ ಪರಿಶೀಲನೆ ನಡೆಸಿದ್ದಾರೆ. ‌

ಘಟನೆಯ ಕುರಿತು ಗ್ರಾಮಸ್ಥರು ಒಂದಾಗಿ ಕಲ್ಲು ಗಣಿಗಾರಿ ಘಟಕದ ಹತ್ತಿರ ಜಮಾಗೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆದಿದೆ.

Advertisement

ಸರ್ಕಾರಿ ಭೂಮಿ, ಅರಣ್ಯ ಭೂಮಿ, ಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆದಿದ್ದರು ಕೂಡ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಕ್ಷೇತ್ರದ ರಾಜಕಾರಣಿಗಳ ವಿರುದ್ದ ಹಾಗೂ ಗಣಿಗಾರಿಕೆ, ಜಿಲ್ಲಾಡಳಿತ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಹಿಡಿ ಶಾಪ ಹಾಕುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next