ಇದು ಗುಬ್ಬಚ್ಚಿಯಂತೆ ಚಿಕ್ಕದಾದ, ಹಳದಿ ಮಿಶ್ರಿತ ಕಂದು ಬಣ್ಣದ ಹಕ್ಕಿ. House Swift (Apus affinis) RM -Sparrow+ ಕುತ್ತಿಗೆ, ಬಾಲದ ಮೇಲ್ಭಾಗ ಬಿಳಿ ಬಣ್ಣದಿಂದ ಕೂಡಿರುತ್ತದೆ. 15 ಸೆಂ.ಮೀ ಚಿಕ್ಕದಿದ್ದು, ಬಾಲದ ಅಡಿ ಬಿಳಿ ಬಣ್ಣದಿಂದ ಕೂಡಿದೆ. 20-25 ಗ್ರಾಂ. ತೂಕವಿದೆ. ಡೆ, ಡೆ, ಡೆ, ಡೆಡೆಡೆ ಎಂದು ಗೆಜ್ಜೆ ಸಪ್ಪಳ ಹೋಲುವ ಕೂಗು ಇದರದು. ಗುಬ್ಬಿಗಳಂತೆ ಇವು ಮನುಷ್ಯರು ವಾಸಿಸುವ ಪ್ರದೇಸದ ಹತ್ತಿರವೇ ಇರುತ್ತವೆ. ಸಲಿಗೆ ಬೆಳೆದರೆ ಸನಿಹಕ್ಕೂ ಬಂದು ಸ್ನೇಹ ಬೆಳೆಸುತ್ತವೆ. ಇದು ಕಂದು ಮಿಶ್ರಿತ ಬೂದು ಬಣ್ಣದ ಹಕ್ಕಿ. ಬಣ್ಣ , ರೆಕ್ಕೆ ಬಾಲಗಳಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಸ್ವಿಫ್ಟ್- ಆಕಾಶ ಗುಬ್ಬಿ. ಅಂಬರಗುಬ್ಬಿ. ಮಾರ್ಟಿನ್. ಮುಂಗುಸಿ ಮುಖವನ್ನು ಹೋಲುವುದರಿಂದ ಇದಕ್ಕೆ ಮಾರ್ಟಿನ್ ಎಂದು ಕರೆಯುತ್ತಾರೆ.
ಆಕಾಶ ಗುಬ್ಬಿ ಮತ್ತು ಅಂಬರ ಗುಬ್ಬಿಗಳು ಹುರುಂಡಿನಿಡೇ ಕುಟುಂಬಕ್ಕೆ ಸೇರಿವೆ. ಆಕಾಶ ಗುಬ್ಬಿ ಪ್ರಬೇಧದಲ್ಲಿ, ಸಾದಾ ಆಕಾಶ ಗುಬ್ಬಿ, ಚೊಟ್ಟೆ , ಸೋರು, ತಾಳೆ ಆಕಾಶ ಗುಬ್ಬಿ ಎಂದು ಉಪ ಪ್ರಬೇಧ ಇದೆ. ಕೆಲವೊಮ್ಮೆ ಪ್ರಾದೇಶಿಕವಾಗಿ ಬಣ್ಣ ಮತ್ತು ರೆಕ್ಕೆಯ ಚೂಪು ಇಲ್ಲವೇ ಮೀನಿನ ಬಾಲದಂತೆ ವ್ಯತ್ಯಾಸವಾಗುತ್ತದೆ. ಬಾಲದ ಎರಡೂ ಅಂಚಿನಲ್ಲಿರುವ ಕಡ್ಡಿಯಂತಿರುವ ಭಾಗವನ್ನು ಆಧರಿಸಿ ಮತ್ತೆ ಉಪ ಭಾಗ ಮಾಡಲಾಗಿದೆ. ಸ್ವಿಫ್ಟ್ ಅಂದರೆ ವೇಗವಾಗಿ ಹಾರುವ ಹಕ್ಕಿ ಎಂದರ್ಥ. ಇವೆಲ್ಲವೂ ವೇಗವಾಗಿ ಹಾರುವ ಹಕ್ಕಿಗಳೇ. ಆದರೆ ಹಾರುವಾಗ ಇದರ ರೆಕ್ಕೆ ವಿನ್ಯಾಸದಲ್ಲಿ ಸ್ವಲ್ಪ ಭಿನ್ನತೆ ಇರುತ್ತದೆ. ಇದಲ್ಲದೇ ಇವು ಗೂಡು ನಿರ್ಮಿಸುವ ಸ್ಥಳವೂ ಭಿನ್ನವಾಗಿರುತ್ತದೆ. ಸಹ ಅಧ್ಯಯನದಿಂದ ತಿಳಿದಿದೆ.
ಸ್ವಲೋ ಅಂಬರ ಗುಬ್ಬಿಗಳು ಸಾಮಾನ್ಯವಾಗಿ ಕಲ್ಲು ಬಿರುಕು, ಕೋಟೆ, ಇಲ್ಲವೇ ಚರಂಡಿಗಳ ಅಡಿಯಲ್ಲಿ ಗೂಡು ನಿರ್ಮಿಸುತ್ತವೆ. ಆದರೆ ಸೂರು ಆಕಾಶ ಗುಬ್ಬಿ -ಮನುಷ್ಯರ ವಾಸದ ಮನೆಗಳ ಸೋರು ಅಂದರೆ ಮಾಡಿನ ಅಂಚು, ಇಲ್ಲವೇ ಸಿಮೆಂಟಿನ ಕಟ್ಟಡದ ಸಂದುಗಳಲ್ಲಿ ಗೂಡು ನಿರ್ಮಿಸುತ್ತವೆ. ಕಾಲಿನ ವಿನ್ಯಾಸದಲ್ಲೂ ಭಿನ್ನತೆ ಇದೆ. ಸೋರು ಗುಬ್ಬಿಗೆ ಕುಳಿತು ಕೊಳ್ಳುವುದು ಕಷ್ಟ. ಇದಕ್ಕೆ ನಾಲ್ಕು ಬೆರಳು ಮುಂದಿದೆ. ಹಾಗಾಗಿ ಇದು ಚಿಕ್ಕ ಸಂದು ಇಲ್ಲವೇ ಕಚ್ಚಿಗೆ ಕಾಲಿನಿಂದ ಹಿಡಿದು ಜೋತಾಡುವುದೇ ಇದರ ಕುಳಿತುಕೊಳ್ಳವ ಭಂಗಿ. ಸೋರುಗುಬ್ಬಿಯ ಬಾಲ ಮೊಂಡಾಗಿದೆ. ರೆಕ್ಕೆ ತುದಿ ಸಹ ಅಂಬರ ಗುಬ್ಬಿಯ ರೆಕ್ಕೆಯಷ್ಟು ಚೂಪಾಗಿಲ್ಲ. ಬೇಕಾದಂತೆ ಹಾರಲು, ಕೆಲವೊಮ್ಮೆ ಜೋತಾಡಿದಂತೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಇದರ ಕಾಲಿನ ರಚನೆ ಇದೆ.
ಸೋರು ಆಕಾಶ ಗುಬ್ಬಿಯನ್ನು ಕ್ವಂಗ್ಲಿಂಗ್ ಅಂತಲೂ ಕರೆಯುತ್ತಾರೆ. ಕ್ವಂಗ್ಲಿಂಗ್ ಅಂದರೆ ಆಕಾಶದಲ್ಲಿ ವೇಗವಾಗಿ ಹಾರುವ ಹಕ್ಕಿ ಎಂದು ಅರ್ಥ. ಸ್ವಿಫ್ಟ್ ಹಕ್ಕಿಗಳ ರೆಕ್ಕೆ ಚೂಪಾಗಿದೆ. ಮಾರ್ಟಿನ್ ಹಕ್ಕಿಗಳದ್ದು ಮೊಂಡಾಗಿದೆ. ಇದರ ಬಾಲದ ತುದಿ ಮೀನಿನ ಬಾಲದ ತುದಿಯಂತಿರುವುದು. ಸ್ವಿಫ್ಟ್ ಹಕ್ಕಿಗಳ ರೆಕ್ಕೆ ಹಾರುವಾಗ ಸೆಟೆದುಕೊಂಡಿರುತ್ತದೆ.
ಗಂಡು ಹೆಣ್ಣು ಒಂದೇರೀತಿ ಇವೆ. ಮೂರೂರಿನ ಗುಡ್ಡ, ಕುಮಟಾದ ಹತ್ತಿರ, ಹಾಗೂ ಹಾವೇರಿಯಲ್ಲಿ ಈ ಗುಬ್ಬಿಗಳು ನೋಡಲು ಸಹ ಸಿಕ್ಕಿವೆ. ಗೂಡು ಕಟ್ಟುವಾಗ ಗಂಡು ಹೆಣ್ಣು ಎರಡೂ ಸೇರಿ ಕಟ್ಟುವುದು. ಇದು ಗೂಡಿಗೆ ಬಳಸುವ ಮಣ್ಣು ಸ್ವಲ್ಪ ಕಪ್ಪಾಗಿತ್ತು. ಇದರ ಜೊಲ್ಲಿನ ಸಹಾಯದಿಂದ ಸೋರಿಗೆ ಅಂಟಿಸಿತ್ತು.
ಮನೆ, ಹಾಳುಬಿದ್ದ ಕಟ್ಟಡ, ಚರ್ಚ್, ದೇವಾಲಯಗಳಲ್ಲಿ ಗೂಡನ್ನು ಕಟ್ಟವುದರಿಂದ ಇದಕ್ಕೆ ಸೋರು ಆಕಾಶ ಗುಬ್ಬಿ ಎಂಬ ಹೆಸರು ಬಂದಿದೆ. ಚಿಕ್ಕ, ಚಿಕ್ಕ ಪತಂಗ, ಹಾರುವಹುಳ, ದೀಪದ ರೆಕ್ಕೆ ಹುಳ, ಹುಲ್ಲು ಮಿಡತೆ, ರೆಕ್ಕೆಬಂದ ಇರುವೆಗಳು ಇದಕ್ಕೆ ಪ್ರಿಯ. ಇದರ ಚುಂಚು ತುಂಬಾ ಚಿಕ್ಕದು. ಬಾಯನ್ನು ಅಗಲಿಸಿಕೊಂಡು ಹಾರುವಾಗ ಕೀಟಗಳನ್ನು ಇದು ಕಬಳಿಸುವುದು. ಇದರಿಂದ ಚಿಕ್ಕ ,ಚಿಕ್ಕ ಕೀಟ ನಿಯಂತ್ರಣದಲ್ಲಿ ಇದರ ಪಾತ್ರ ಹಿರಿದು.
ಮಾಡಿನ ಸೋರಿಗೆ ಮಣ್ಣು ಕಡ್ಡಿಗಳನ್ನು ಜೊಲ್ಲಿನ ಸಹಾಯದಿಂದ ಅಂಟಿಸಿ ಗೂಡು ಮಾಡುವುದು. ಇದರ ಗೂಡು ತುಂಬಾ ಚಿಕ್ಕದು. ಅದಕ್ಕೆ ತನ್ನ ಜೊಲ್ಲಿನ ಸಹಾಯದಿಂದ ಮೊಟ್ಟೆಯನ್ನು ಅಂಟಿಸುವುದೋ ಎಂಬುದನ್ನೂ ಸಹ ಗನಿಸಬೇಕಾದ ಅಂಶ.