Advertisement

ಬ್ರಾಹ್ಮಣಳಲ್ಲ ಎಂಬ ಕಾರಣಕ್ಕೆ ಕೆಲಸದವಳ ಮೇಲೆ ದೂರು

09:30 AM Sep 09, 2017 | Team Udayavani |

ಮುಂಬಯಿ: ನಮ್ಮ ದೇಶದಲ್ಲಿ ಜಾತಿಪದ್ಧತಿಯೆಂಬ ಪಿಡುಗು ಎಷ್ಟು ಆಳವಾಗಿ ಬೇರೂರಿದೆ ಹಾಗೂ ವಿದ್ಯಾವಂತರೂ ಇದರಿಂದ ಹೊರತಾಗಿಲ್ಲ ಎಂಬುದಕ್ಕೆ ಸಾಕ್ಷಿಯೆಂಬಂತೆ ಮುಂಬಯಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ.

Advertisement

‘ಅಡುಗೆ ಕೆಲಸದಾಕೆ 2016ರಿಂದಲೂ ತಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳೆಂದು ಹೇಳಿಕೊಂಡು ನನಗೆ ಮೋಸ ಮಾಡಿದ್ದಾಳೆ’ ಎಂದು ಆರೋಪಿಸಿ ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಡಾ| ಮೇಧಾ ವಿನಾಯಕ್‌ ಖೋಲೆ ಪೊಲೀಸರಿಗೆ ದೂರು ನೀಡಿದ್ದಾರೆ. ನಮಗೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಹಿಳೆಯೇ ಅಡುಗೆ ಕೆಲಸಕ್ಕೆ ಬೇಕಿತ್ತು. ಆದರೆ, ನಿರ್ಮಲಾ ಯಾದವ್‌ ಬ್ರಾಹ್ಮಣಳೇ ಎಂದು ಹೇಳಿಕೊಂಡು ಕೆಲಸಕ್ಕೆ ಸೇರಿ ನಮಗೆ ಮೋಸ ಮಾಡಿದ್ದಾರೆ. ಇತ್ತೀಚೆಗೆ ಆಕೆ ಬ್ರಾಹ್ಮಣಳಲ್ಲ, ಮರಾಠಾ ಸಮುದಾಯದವಳು ಎಂದು ಗೊತ್ತಾಯಿತು ಎಂದು ಆರೋಪಿಸಿದ್ದಾರೆ. ಆದರೆ, ‘ಅವರು ನನ್ನ ಜಾತಿ ಕೇಳಿರಲಿಲ್ಲ. ಮೊನ್ನೆ ಮನೆಗೆ ನುಗ್ಗಿ, ನಿಮ್ಮದು ಬೀದಿ ಬದಿಯ ದೇವರು, ನಮ್ಮದು ಸ್ವರ್ಗದಲ್ಲಿರುವ ದೇವರು ಎಂದು ಅವಹೇಳನ ಮಾಡಿದ್ದಾರೆ’ ಎಂದು ನಿರ್ಮಲಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next