Advertisement
ಬರ್ಗ್ ಅಲ್ಲ ಬರೋ !“ಎಡಿನ್‌ಬರೋ’ ಸ್ಪೆಲ್ಲಿಂಗ್ ಏಕೆ ಹೀಗೆ (Edinburgh) “ಎಡಿನ್‌ಬರ್ಗ್’ ಎನ್ನುವ ಬದಲು ಸ್ಪೆಲ್ಲಿಂಗ್ ಹೀಗೆ ಬರೆದು, “ಬರ್ಗ್’ ಬದಲು “ಬರೋ’ ಅಂತ ಏಕೆ ಹೇಳುತ್ತಾರೆ ಎಂಬ ಚರ್ಚೆಯ ಮಧ್ಯೆ ಸ್ಕಾಟ್‌ಲೆಂಡಿನ ಈ ತಾತ್ಕಾಲಿಕ “ಮನೆ’ಗೆ ಬಂದಿಳಿದಿ¨ªೆವು. ಮೊದಲೇ ಕೊಟ್ಟಿದ್ದ ಪಾಸ್‌ವರ್ಡ್ ಉಪಯೋಗಿಸಿ ಕೀ ಇಟ್ಟಿರುವ ಸಣ್ಣ ಪೆಟ್ಟಿಗೆಯನ್ನು ತೆರೆಯಬೇಕು. ಆ ಕೀ ಉಪಯೋಗಿಸಿ ಮನೆಯೊಳಗೆ ಹೊಕ್ಕರಾಯಿತು. ಯಾರನ್ನೂ ಕಾಯಬೇಕಿಲ್ಲ. ನಾವಿದ್ದ 10 ದಿನಗಳೊಳಗೆ ಒಮ್ಮೆಯೂ ಮನೆಯ ಮಾಲೀಕರ ಭೇಟಿಯಾಗಲೇ ಇಲ್ಲ! ಮಾಲೀಕರನ್ನು ಬಿಡಿ, ಒಂದು ನರಪಿಳ್ಳೆಯೂ ವಿಚಾರಿಸಲಿಲ್ಲ. ಹಾಗೆಂದು ಸೌಲಭ್ಯಗಳೆಲ್ಲವೂ ಪರಿಪೂರ್ಣ. ಒಂದು ಸುಸಜ್ಜಿತ ಮನೆಗೆ ಇರಬೇಕಾ¨ªೆಲ್ಲವೂ ಇತ್ತು. ಆದರೆ ಕೆಲಸ ಮಾಡಲು, ಸ್ವಿಚ್ ಒತ್ತಲು ಮನುಷ್ಯರ ಕೊರತೆ. ನಮ್ಮ ಕೆಲಸ ನಾವೇ ಮಾಡಬೇಕು. ಸಂಪೂರ್ಣ ಸ್ವಾವಲಂಬನೆ.
Related Articles
Advertisement
ದುಡೂx ಹಾಕುತ್ತಾರೆ! ಹಾಗೆಯೇ ಕೋಟೆಯ ಸುತ್ತಮುತ್ತ ಭೂತ-ರಾಕ್ಷಸರ ವೇಷದಲ್ಲಿ, ಉದ್ದ ನಿಲುವಂಗಿ, ಕೋಟು ಧರಿಸಿ ಉದ್ದ ಕೋಲಿನ ಕಾಲಿನ ಮನುಷ್ಯರು ಓಡಾಡುತ್ತಾರೆ. ಇವರ ಜೊತೆ ಫೋಟೋ ತೆಗೆಯಬೇಕೆಂದರೆ ಕಾಸು ಬಿಚ್ಚಬೇಕು! ಹಾಗೊಮ್ಮೆ ಕಾಸು ಕೊಡದೇ ಫೋಟೋ ತೆಗೆಯಲು ಹೋದರೆ ಬೇರೆಡೆ ತಿರುಗಿ, ಬೆನ್ನು ತೋರಿಸಿ, ಮುಖ ಮುಚ್ಚಿಕೊಳ್ಳುತ್ತಾರೆ!.
ಎಡಿನ್‌ಬರೋ ಕೋಟೆಯ ಸುತ್ತಮುತ್ತ ಕಿರಿದಾದ ಬೀದಿಗಳು. ಬೀದಿಗಳು ಚಿಕ್ಕ ಚೌಕಾಕಾರದ ಕಲ್ಲುಗಳಿಂದ ಮಾಡಲ್ಪಟ್ಟವು. ಹಾಗಾಗಿ ಸಹಜವಾಗಿ ಇಡೀ ವಾತಾವರಣ ನಮ್ಮನ್ನು ಹಳೆಯ ಕಾಲಕ್ಕೆ ಕೊಂಡೊಯ್ಯುತ್ತವೆ. ವಾಹನಗಳೇ ಇಲ್ಲದ, ಬಿಳಿ ಬಿಳೀ ಜನರು ಅಲ್ಲಲ್ಲಿ ಓಡಾಡುತ್ತಿರುವ, ದೊಡ್ಡ ದೊಡ್ಡ ಬಿಯರ್ ಮಗ್‌ಗಳ, ಅಗ್ಗಿಷ್ಟಿಕೆಗಳ ಚಿತ್ರವಿರುವ ಬೋರ್ಡುಗಳು ತುಂಬಿರುವ ಬೀದಿಗಳು.
ಎಡಿನ್‌ಬರೋ ಕೋಟೆ ಎಂಬ ಪುಟ್ಟ ಜಗತ್ತುಎಡಿನ್ಬರೋ ಕ್ಯಾಸಲ್ ಅಥವಾ ಕೋಟೆ ಸ್ಕಾಟ್‌ಲೆಂಡ್‌ನ ಜಗತøಸಿದ್ಧ ನಿಶಾನೆ. ಕೋಟೆಯೊಳಗೆ ಅದರದ್ದೇ ಆದ ಒಂದು ಪುಟ್ಟ ಜಗತ್ತು. ಒಂದು ಕೋಟೆ ಎಂದರೆ ಹೇಗಿರಬಹುದು ಎಂಬ ನಮ್ಮ ಕಲ್ಪನೆಗೆ ಅತಿ ಹತ್ತಿರವಾಗಿ ಎಡಿನ್‌ಬರೋ ಕೋಟೆ ನಿಲ್ಲುತ್ತದೆ. ಇಡೀ ಕೋಟೆ ನಿಂತಿರುವುದು ಭೌಗೋಳಿಕವಾಗಿ 70 ಮಿಲಿಯನ್ ವರ್ಷಗಳ ಹಿಂದೆ ಜ್ವಾಲಾಮುಖೀಯೊಂದರಿಂದ ರೂಪುಗೊಂಡ ¸ೃಹದಾಕಾರವಾದ ಬಂಡೆಯ ಮೇಲೆ. ಕೋಟೆಯ ಸುತ್ತ ಬೆಟ್ಟಗುಡ್ಡಗಳು, ಇಡೀ ಎಡಿನ್‌ಬರೋದ ಪಟ್ಟಣದ ಮನೆಗಳು, ಹಸಿರು ಗಿಡಮರಗಳು ಕಾಣುತ್ತವೆ. ಒಳಹೋಗಲು 15 ಪೌಂಡ್ ಕೊಡಬೇಕು. ಎಂದರೆ ಬರೋಬ್ಬರಿ 1350 ರೂಪಾಯಿ. ಶತಮಾನಗಳ ಹಿಂದಿನ ಚರಿತ್ರೆ ನಮ್ಮ ಕಣ್ಣ ಮುಂದೆ ತೆರೆಯತೊಡಗುತ್ತದೆ. ಸೇಂಟ್ ಮಾರ್ಗರೆಟ್ ಚಾಪೆಲ್ 12ನೇ ಶತಮಾನ¨ªಾದರೆ, ಇಲ್ಲಿರುವ “ಗ್ರೇಟ್‌ಹಾಲ್’ ನಾಲ್ಕನೇ ಜೇಮ್ಸ್ ದೊರೆಯಿಂದ ನಿರ್ಮಾಣವಾದದ್ದು 1510ರಲ್ಲಿ. ಸ್ಕಾಟ್‌ಲೆಂಡ್‌ನ ರಾಷ್ಟ್ರೀಯ ಸಮರ ಸಂಗ್ರಹಾಲಯ ಇಲ್ಲಿಯೇ ಇದೆ. ಯುದ್ಧದಲ್ಲಿ ಮಡಿದ ವಿವಿಧ ರೆಜಿಮೆಂಟ್‌ನ ಸೈನಿಕರ ನೆನಪಿಗೆ, ಅವರ ವಿವರಗಳಿರುವ ದೊಡ್ಡ ದೊಡ್ಡ ಪುಸ್ತಿಕೆಗಳು. ಮೈಸೂರು ಯುದ್ಧದ ವಿವರಗಳನ್ನು ಅಲ್ಲಿ ನೋಡಿ ನಮಗೆ ಒಂದು ಥರ ರೋಮಾಂಚನ!. ರಾಜಮನೆತನದ ಸಂಗ್ರಹಾಲಯ, ಅವರಿಗೆ ಸಂಬಂಧಿಸಿದ ಆಭರಣ, ಕಿರೀಟ, ವಸ್ತುಗಳನ್ನು ತೋರಿಸುತ್ತದೆ. ಇವೆಲ್ಲವೂ ಇತರ ಸಂಗ್ರಹಾಲಯ ಗಳಂತೆಯೇ. ಆದರೆ ಮಧ್ಯೆ ಮಧ್ಯೆ ಇರುವ ದೃಶ್ಯಾವಳಿಗಳು, ಕಥಾಫಲಕಗಳಿಂದ ಈ ಆಭರಣ ಗಳು-ವಸ್ತುಗಳು ನಮ್ಮೊಡನೆ ಮಾತನಾಡುವ ರೀತಿ ಭಾಸವಾಗುತ್ತದೆ. ಅನುಭವವನ್ನು ಮತ್ತಷ್ಟು ಅರ್ಥಪೂರ್ಣ ಎನಿಸುವಂತೆ ಮಾಡುತ್ತದೆ. 6-7ನೇ ತರಗತಿಯಲ್ಲಿ ನಾವು ಓದಿದ್ದ ಜೇಡರ ಬಲೆಯಿಂದ ಸ್ಫೂರ್ತಿಗೊಂಡ ಕಿಂಗ್ ಬ್ರೂಸನ ಕತೆ ಇಲ್ಲಿಯದೇ. ಹಾಗೆ ಸ್ಫೂರ್ತಿಗೊಂಡ ಬ್ರೂಸ್ ಗೆದ್ದಿದ್ದು ಇದೇ ಕೋಟೆಯನ್ನು. ಕೋಟೆಯ ವಿವಿಧ ಸ್ಥಳಗಳಲ್ಲಿ ನಿರ್ದಿಷ್ಟ ಸಮಯಕ್ಕೆ ಕೆಲವು ಪ್ರದರ್ಶನಗಳೂ ನಡೆಯುತ್ತವೆ. ದಿನದಲ್ಲಿ ನಡೆಯುವ ಈ “ಶೋ’ಗಳು ಉಚಿತ. “ಗ್ರೇಟ್‌ಹಾಲ್’ ನಲ್ಲಿ ಒಬ್ಬ ಸಂಗೀತ ಕಲಾವಿದ ಏಳು ವಾದ್ಯಗಳನ್ನು ಒಮ್ಮೆಲೇ ನುಡಿಸಿ ತೋರಿಸುತ್ತಿದ್ದ. ಹೀಗೆ ನಡೆಯುವ ಯಾವ ಪ್ರದರ್ಶನಗಳಾದರೂ, ಅವು ಚರಿತ್ರೆಯನ್ನು ಎತ್ತಿ ತೋರಿಸುವ, ಇಲ್ಲಿಯ ಜನರ ಹಾಸ್ಯ-ಮಾತಿನ ಚಾಕಚಕ್ಯತೆ, ನಟನಾ ಕೌಶಲ, ತಮ್ಮನ್ನು ಹೊಗಳಿಕೊಳ್ಳುತ್ತಲೇ ಇತರ ದೇಶದವರನ್ನು ಸ್ವಲ್ಪ ಗೇಲಿ ಮಾಡುವ, ಒಟ್ಟಿನಲ್ಲಿ “ಮಾತೇ’ ಬಂಡವಾಳವಾಗಿರುವ “ಶೋ’ ಗಳು. ಪ್ರವಾಸಿಗರಿಗೆ ಖಂಡಿತವಾಗಿ “ಮಜಾ’ ನೀಡುವಂತಹವು. ಎಡಿನ್‌ಬರೋ ಕೋಟೆಯಿಂದ ನಿಧಾನವಾಗಿ ನಡೆಯುತ್ತ “ಹೇಮಾರ್ಕೆಟ್’ ಗೆ ಬಂದರೆ ದಾರಿಯಲ್ಲಿ ಸಿಗುವ “ಪ್ರಿನ್ಸೆಸ್ ಗಾರ್ಡನ್’ ನಲ್ಲಿ ಹೂವುಗಳ ರಾಶಿ. ವಿಶಾಲವಾಗಿ ಹರಡಿಕೊಂಡ ಲಾನ್. ಅಲ್ಲಲ್ಲಿ ನಾಯಿಗಳು ಸ್ಮಾರಕಗಳು. ಕರಡಿ ಕೊಂದ ನಾಯಿ, ತನ್ನ ಒಡೆಯನಿಗಾಗಿ ಹೋರಾಡಿದ ದಿಟ್ಟ ಬುಲ್‌ಡಾಗ್ ಹೀಗೆ ಮನುಷ್ಯರಂತೆಯೇ ನಾಯಿಗಳ ಮೂರ್ತಿಗಳು! ಎಡಿನ್‌ಬರೋದ ಮನೆ ನಮ್ಮ ಮನೆಯಿಂದ ದೂರವಾಗಿದ್ದರೂ, ಮನೆಯ ನೆಮ್ಮದಿ ನೀಡುವಂತಿತ್ತು. ನಾನು ಮತ್ತೆ ಮತ್ತೆ “ಅಲ್ಲಿಹುದು ನಮ್ಮ ಮನೆ, ಇಲ್ಲಿರುವುದು ಸುಮ್ಮನೆ’ ಎಂದು ಹಾಡಿದರೂ, ಸುತ್ತ ಕೋಟೆ ಕಾಣುವ ಮನೆ ಇಷ್ಟವೇ ಆಗಿತ್ತು. ಸ್ವಾವಲಂಬನೆಯ ಪಾಠ ಕಲಿಸಿತ್ತು! “”ಇವರು ಹೇಗೆ ಮಾನಿಟರ್ ಮಾಡ್ತಾರೆ? ನಾವೇನಾದ್ರೂ ಇಲ್ಲಿಯ ಸಾಮಾನು ಕದ್ದುಕೊಂಡು ಹೋದರೆ?” ಎಂಬ ಮಕ್ಕಳ ಪ್ರಶ್ನೆಗೆ “”ಸಿಸಿಟಿವಿ’ ಇರುತ್ತೆ’ ಎಂದು ತಕ್ಷಣ ಉತ್ತರ ಬಂದರೂ, “”ಹಾಗೆ ಮಾಡದಿರುವುದು ನಮ್ಮ “ಒಳಗಿನ’ ಜವಾಬ್ದಾರಿ. ಈ ನಂಬಿಕೆಯಿಂದ ನಾವು ನಡೆದುಕೊಳ್ಳಬೇಕು. ಇಲ್ಲದೆ ಹೋದರೆ ಪರದೇಶದಲ್ಲಿ “ಭಾರತ’ಕ್ಕೆ ಕೆಟ್ಟ ಹೆಸರು” ಎಂಬ ಉತ್ತರ ಹೊಳೆದಿತ್ತು! – ಡಾ. ಕೆ. ಎಸ್. ಪವಿತ್ರಾ