ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಮೊಗರು ಹೊಸಮನೆ ದೇವನಂದಿನಿ ಮಾರ್ಲ ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸುಮಾರು 5 ಲಕ್ಷ ರೂ. ಸಾಮಗ್ರಿಗಳು ಬೆಂಕಿಗಾಹುತಿಯಾಗಿದೆ.
ಬೆಂಕಿ ಸುಮಾರು ಬೆಳಗ್ಗೆ 9ರ ವೇಳೆಗೆ ತಗಲಿದ್ದು ಮನೆಯಲ್ಲಿ ಯಾರೂ ಇರಲಿಲ್ಲಿ. ಸಮೀಪದ ಮನೆಯವರು ಮನೆಗೆ ಛಾವಣಿಯಲ್ಲಿ ಹೊಗೆ ಬರುವುದನ್ನು ನೋಡಿ ಬೆಂಕಿ ಮನೆಗೆ ತಗಲಿದ್ದು ಗೊತ್ತಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತ್ ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ, ಮೆಸ್ಕಾಂ ಹಾಗೂ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದರು. ವಿದ್ಯುತ್ ಶಾರ್ಟ್ ಸರ್ಕ್ನೂಟ್‌ನಿಂದ ಬೆಂಕಿ ತಗಲಲು ಕಾರಣವೆಂದು ಹೇಳಲಾಗಿದೆ.