Advertisement

ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮ: 6 ಮಂದಿಗೆ ಗಾಯ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

12:55 PM Sep 20, 2020 | keerthan |

ವಿಟ್ಲ: ಗುಡ್ಡ ಕುಸಿದು ಮನೆ ಸಂಪೂರ್ಣವಾಗಿ ನೆಲಸಮಗೊಂಡ ಪರಿಣಾಮ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ಮಂಗಳಪದವು ಸಮೀಪದ ಬನಾರಿ ಬಾಬುಕಟ್ಟೆಯಲ್ಲಿ ಸಂಭವಿಸಿದೆ‌.

Advertisement

ತರಕಾರಿ ವ್ಯಾಪಾರಿ ಅಬ್ದುಲ್ಲ ಅವರ ಮನೆಯ ಪಕ್ಕದ ಧರೆಯು ಜೋರಾದ ಮಳೆಗೆ ಕುಸಿದು ಮನೆ ಮೇಲೆ ಬಿದ್ದಿದೆ. ಕುಟುಂಬದ ಆರು ಮಂದಿ ಕುಸಿದು ಬಿದ್ದ ಮನೆಯೊಳಗೆ ಸಿಕ್ಕಿಹಾಕಿಕೊಂಡಿದ್ದರು. ತಕ್ಷಣ ಸ್ಥಳೀಯರು ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮನೆ ಯಜಮಾನ ಅಬ್ದುಲ್ಲ, ಪತ್ನಿ ಜೋಹಾರ, ಮಕ್ಕಳಾದ ಅರಫಾಝ್, ಇರ್ಪಾನ್, ತಸ್ಲೀಮಾ, ಮಿಶ್ರಿಯಾ ಗಾಯಗೊಂಡಿದ್ದು, ವಿಟ್ಲ ಹಾಗೂ ತುಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: ಉತ್ತರೆಯ ಆರ್ಭಟಕ್ಕೆ ಕರಾವಳಿ ತತ್ತರ: ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತ

Advertisement

ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next