Advertisement
ಸೋಮವಾರ ಕಾಸರಗೋಡು ಜಿಲ್ಲೆಯಲ್ಲಿ “ಆರೆಂಜ್’ ಅಲರ್ಟ್ ಘೋಷಿಸಲಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಸಾರಿದ್ದರೂ, ಸರಕಾರಿ ಕಚೇರಿಗಳಿಗೆ ರಜೆ ಅನ್ವಯಿಸಿಲ್ಲ. ವಯನಾಡು, ಕಲ್ಲಿಕೋಟೆ, ಮಲಪ್ಪುರಂ, ಪಾಲಾ^ಟ್, ತೃಶೂರು, ಎರ್ನಾಕುಳಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲೂ ಸೋಮವಾರ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ತೀವ್ರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಣ್ಣೂರು, ಕಲ್ಲಿಕೋಟೆ ಮತ್ತು ವಯನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಾಲಾ^ಟ್, ಕೋಟ್ಟಯಂ, ಆಲಪ್ಪುಳ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
Related Articles
ಬದಿಯಡ್ಕ ಕರಿಂಬಿಲ ರಸ್ತೆ ಬದಿಯ ಗುಡ್ಡೆ ಜರಿದು ಬೀಳುವ ಭೀತಿಯಲ್ಲಿದೆ. ಇಲ್ಲಿನ ಸಂಕದ ಬಳಿ ಒಂದು ಭಾಗದ ಗುಡ್ಡೆ ಜರಿದು ನಿಂತಿದ್ದು, ಯಾವುದೇ ಕ್ಷಣದಲ್ಲಿ ರಸ್ತೆಗೆ ಬೀಳುವ ಸಾಧ್ಯತೆಯಿದೆ.
Advertisement
ಮನೆ ಕುಸಿದು ಐವರಿಗೆ ಗಾಯಸೋಮವಾರ ಮುಂಜಾನೆ ಬಳಾಲ್ ಗ್ರಾಮ ಪಂಚಾಯತ್‌ನ ಕನಕಪಳ್ಳಿಯಲ್ಲಿ ಹೆಂಚಿನ ಮನೆಯೊಂದು ಕುಸಿದು ಬಿದ್ದು 5 ಮಂದಿಗೆ ಗಾಯವಾಗಿದೆ. ಮನೆಯ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಇಲ್ಲಿನ ಪಿ.ಸಿ.ರಾಜು, ಅವರ ಪತ್ನಿ ಅನು ಮತ್ತು ಮೂವರು ಮಕ್ಕಳು ಗಾಯಗೊಂಡರು. ಮನೆ ಕುಸಿತ
ಬದಿಯಡ್ಕದ ಪಳ್ಳತ್ತಡ್ಕ ಚಾಳಕ್ಕೋಡ್ ನಿವಾಸಿ ಕರಿಯ ಬೈರ ಅವರ ಹೆಂಚಿನ ಮನೆ ಕುಸಿದು ಬಿದ್ದಿದೆ. ಜು.21 ರಂದು ರಾತ್ರಿ 8 ಗಂಟೆಗೆ ಮನೆ ಕುಸಿದು ಬಿದ್ದಿದ್ದು, ಶಬ್ದ ಕೇಳಿ ಮನೆ ಮಂದಿ ಹೊರಗೆ ಓಡಿದುದರಿಂದ ಪಾರಾದರು. ಚೆಂಗಳ ಎರ್ದುಂಕಡವಿನಲ್ಲಿ ನೀರು ಆವೃತಗೊಂಡು ಅಲ್ಲಿನ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ಅನಾಹುತ ಉಂಟಾದಲ್ಲಿ ರಕ್ಷಾ ಕಾರ್ಯಾಚರಣೆಗಾಗಿ ವಿಪತ್ತು ನಿವಾರಣೆ ಪಡೆಯನ್ನು ಸದಾ ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ 1,06,51,100 ರೂ.ಕೃಷಿ ನಾಶನಷ್ಟ
ಬಿರುಸಿನ ಗಾಳಿಮಳೆಗೆ ಜಿಲ್ಲೆಯಲ್ಲಿ ಈ ವರೆಗೆ 1,06,51,100 ರೂ.ನ ಕೃಷಿ ನಾಶ ಸಂಭವಿಸಿದೆ. ಕಳೆದ 24 ತಾಸುಗಳಲ್ಲಿ ಮಾತ್ರ 11,71,500 ರೂ.ನ ಕೃಷಿ ಹಾನಿ ಗಣನೆ ಮಾಡಲಾಗಿದೆ. ಈ ಅವಧಿಯಲ್ಲಿ 34.26 ಹೆಕ್ಟೇರ್‌ನ ಕೃಷಿ ನಷ್ಟ ಸಂಭವಿಸಿದೆ. 158.75705 ಹೆಕ್ಟೇರ್ ಜಾಗದಲ್ಲಿ ಬೆಳೆ ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ 9135 ಅಡಕೆ, 12,082 ಬಾಳೆ, 1886 ತೆಂಗು, 3159 ರಬ್ಬರ್ ಸಸಿಗಳು, 1043 ಕರಿಮೆಣಸು ಬಳ್ಳಿಗಳು ಹಾನಿಗೀಡಾಗಿವೆ. 29 ಹೆಕ್ಟೇರ್ ಭತ್ತದ ಕೃಷಿ, 18.2 ಹೆಕೇrರ್ ತರಕಾರಿ ಕೃಷಿ ನಾಶಗೊಂಡಿದೆ. ಪರಪ್ಪ ಬ್ಲಾಕ್‌ನಲ್ಲಿ ಅತ್ಯಧಿಕ ಕೃಷಿ ನಾಶ ಸಂಭವಿಸಿದೆ. ಈ ವಲಯದಲ್ಲಿ 2838 ಅಡಕೆ, 5712 ಬಾಳೆ, 2791 ರಬ್ಬರ್ ಮರಗಳು ಧರೆಗುರುಳಿವೆ. ಪರಪ್ಪ ಬ್ಲಾಕ್‌ನಲ್ಲಿ ಅತ್ಯಧಿಕ (18.2 ಹೆಕ್ಟೇರ್)ತರಕಾರಿ ಕೃಷಿ ನಾಶವಾಗಿದೆ. ಭತ್ತದ ಕೃಷಿ ಕಾಂಞಂಗಾಡ್ ಬ್ಲಾಕ್‌ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ(20 ಹೆಕೇrರ್) ಹಾನಿಗೊಂಡಿದೆ. ಮಂಜೇಶ್ವರದಲ್ಲಿ 5 ಹೆಕ್ಟೇರ್, ಕಾಸರಗೋಡಿನಲ್ಲಿ ಮೂರು, ಪರಪ್ಪದಲ್ಲಿ ಒಂದು ಹೆಕ್ಟೇರ್ ಕೃಷಿ ನಾಶವಾಗಿದೆ.