Advertisement

ಭಾರಿ ಮಳೆಗೆ ಹನಗೋಡು ಹೋಬಳಿಯಲ್ಲಿ ಮನೆಗಳು ಕುಸಿತ

08:34 PM Nov 14, 2021 | Team Udayavani |

ಹುಣಸೂರು : ತಾಲೂಕಿನ ಹನಗೋಡು ಹೋಬಳಿಯಲ್ಲಿ ವರುಣನ ಅಬ್ಬರಕ್ಕೆ ಮತ್ತೆರಡು ಮನೆಗಳು ಕುಸಿದು ಬಿದ್ದಿದ್ದು, ಸಂತ್ರಸ್ತ ಕುಟುಂಬಗಳು ಅಕ್ಕಪಕ್ಕದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

Advertisement

ತಾಲೂಕಿನ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾದ ಹನಗೋಡು ಹೋಬಳಿಯಲ್ಲಿ ಬಾರೀ ಮಳೆಗೆ ಶನಿವಾರ ರಾತ್ರಿ ಚಿಲ್ಕುಂದ ಗ್ರಾ.ಪಂ.ವ್ಯಾಪ್ತಿಯ ಅತ್ತಿಕುಪ್ಪೆ ಗ್ರಾಮದ ಗೀತಾ ಶಿವಕುಮಾರ್‌ ಸೇರಿದ ವಾಸದ ಮನೆ ಬಾಗಶಃ ಕುಸಿದು ಬಿದ್ದಿದ್ದರೆ, ತಟ್ಟೆಕೆರೆ ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಗೇಟ್‌ನ ಲೀಲಾವತಿ ಚಂದ್ರನಾಯ್ಕರವರ ಮನೆ ಮೇಲ್ಚಾವಣಿ ಸಂಪೂರ್ಣ ಕುಸಿದು ಬಿದ್ದಿದ್ದು, ಮನೆಯ ಪದಾರ್ಥಗಳು, ದವಸ ಧಾನ್ಯ ಸಂಪೂರ್ಣ ಹಾಳಾಗಿದ್ದು, ಸಾಕಷ್ಟು ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಆಯಾ ವ್ಯಾಪ್ತಿಯ ಗ್ರಾಮಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಕುತುಹಲ ಮೂಡಿಸಿದ ಯತ್ನಾಳ, ಜಾರಕಿಹೊಳಿ ರಹಸ್ಯ ಭೇಟಿ : ತೋಟದ ಮನೆಯಲ್ಲಿ ರಹಸ್ಯ ಮಾತುಕತೆ

Advertisement

Udayavani is now on Telegram. Click here to join our channel and stay updated with the latest news.

Next