ಚಿಕ್ಕಬಳ್ಳಾಪುರ: ನಗರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 10 ರಲ್ಲಿನ ಉದ್ಯಾನವನದ ಜಾಗವನ್ನು ಅತಿಕ್ರಮಣ ಮಾಡಿಕೊಂಡು ನಿರ್ಮಿಸಿದ್ದ ಮನೆಗಳು ಮತ್ತು ಕಾಂಪೌಂಡ್ ಗೋಡೆಗಳನ್ನು ನಗರಸಭೆಯ ಪೌರಾಯುಕ್ತ ಡಿ ಲೋಹಿತ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಅಕ್ರಮ ಕಾಂಪೌಂಡ್ ಗೋಡೆ ಮನೆ ತೆರವುಗೊಳಿಸಲಾಗಿದೆ.
ಇಂದು ಬೆಳಗ್ಗೆ ಜೆಸಿಬಿ ಗಳೊಂದಿಗೆ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉದ್ಯಾನವನ ಜಾಗದಲ್ಲಿ ಅಕ್ರಮವಾಗಿ ರಾತ್ರೋರಾತ್ರಿ ನಿರ್ಮಿಸಿದ್ದ ಕಾಂಪೌಂಡ್ ಮತ್ತು ಚಿಕ್ಕ ಮನೆಯೊಂದನ್ನು ನೆಲಸಮಗೊಳಿಸಿದ್ದಾರೆ.
ಇದನ್ನೂ ಓದಿ:ಮಂಡ್ಯ: ಬೀದಿ ನಾಯಿಗಳ ದಾಳಿಗೆ ಬಲಿಯಾದವು 12 ಕುರಿಗಳು!
ನಗರಸಭೆಯ ಪೌರಾಯುಕ್ತ ಡಿ.ಲೋಹಿತ್ ಅವರು ನಡೆಸಿದ ಕಾರ್ಯಾಚರಣೆಗೆ ಕಂದಾಯ ಅಧಿಕಾರಿ ರಮೇಶ್ ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಸಾಥ್ ನೀಡಿದ್ದಾರೆ. ಚಿಕ್ಕಬಳ್ಳಾಪುರ ನಗರವನ್ನು ಸ್ವಚ್ಛ ಮತ್ತು ಹಸಿರುಮಯ ಮಾಡಲು ಈಗಾಗಲೇ ಪಣತೊಟ್ಟಿರುವ ನಗರಸಭೆಯ ಪೌರಾಯುಕ್ತರು ಇದೀಗ ನಗರಸಭೆಯ ಸ್ವತ್ತುಗಳನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
ನಗರಸಭೆಯ ಪೌರಾಯುಕ್ತ ಡಿ ಲೋಹಿತ್ ಅವರು ಉದಯವಾಣಿಯೊಂದಿಗೆ ಮಾತನಾಡಿ ನಗರದಲ್ಲಿ ನಗರಸಭೆಯ ಉದ್ಯಾನವನದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು ಅದನ್ನು ತೆರವುಗೊಳಿಸಲಾಗಿದೆ ಎಂದರು.