Advertisement
ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗಿಗಳಿಗಿಂತ ಹೊರತಾಗಿರುವ ಸಂಸ್ಥೆಗಳಲ್ಲಿ ಕೆಲಸದಲ್ಲಿ ಇರುವವರಿಗೆ ನೀಡುವ ಯಾವುದೇ ಪೀಠೊಪಕರಣ ಮತ್ತು ಇತರ ವ್ಯವಸ್ಥೆಗಳು ಇಲ್ಲದ ಮನೆಗೆ ಉದ್ಯೋಗಿಗಳ ವೇತನದ ಶೇ.10ನ್ನು ಮೀಸಲಾಗಿ ಇರಿಸಲಾಗಿದೆ. ಸದ್ಯ ಅದರ ಮಿತಿ ಶೇ.15 ಇದೆ. 2011ರ ಜನಗಣತಿಯ ಪ್ರಕಾರ 40 ಲಕ್ಷ ಜನಸಂಖ್ಯೆ ಇರುವ ನಗರಗಳಿಗೆ ಈ ನಿಯಮ ಅನ್ವಯವಾಗಲಿದೆ. 15 ಲಕ್ಷದಿಂದ 40 ಲಕ್ಷವರೆಗೆ ಜನಸಂಖ್ಯೆ ಇರುವ ನಗರಗಳಲ್ಲಿ ಉದ್ಯೋಗದಲ್ಲಿ ಇರುವವರಿಗೆ ವೇತನದ ಶೇ.7.5ನ್ನು ಈಗ ಮೀಸಲಾಗಿ ಇರಿಸಲಾಗುತ್ತದೆ (ಸದ್ಯದ ಮಿತಿ ಶೇ.10) ಎಂದು ಪರಿಷ್ಕರಿಸಿದ ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. ಹೊಸ ನಿಯಮಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಎಕೆಎಂ ಗ್ಲೋಬಲ್ ಟ್ಯಾಕ್ಸ್ ಪಾರ್ಟ್‌ನರ್ ಅಮಿತ್ ಮಾಹೇಶ್ವರಿ “ಸಂಸ್ಥೆಗಳ ವತಿಯಿಂದ ವಸತಿ ವ್ಯವಸ್ಥೆ ಪಡೆಯುವವರಿಗೆ ಮತ್ತು ಹೆಚ್ಚಿನ ವೇತನ ಪಡೆಯುವವರಿಗೆ ಹೊಸ ನಿಯಮದಿಂದ ಉಳಿತಾಯವಾಗಲಿದೆ’ ಎಂದಿದ್ದಾರೆ. Advertisement
Tax: ಹೆಚ್ಚು ವೇತನ ಇರುವವರಿಗೆ ಮನೆ ಭತ್ಯೆ ತೆರಿಗೆ ಇಳಿಕೆ
12:07 AM Aug 20, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.