Advertisement
ಮುಂಬರುವ ಬೇಸಿಗೆಯ ಕಾಲದಲ್ಲಿ(ಮಾರ್ಚ್ ನಿಂದ ಮೇ ತನಕ ) ದಿನದ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಲಿದೆ, ಭಾರತದ ದಕ್ಷಿಣ ಹಾಗೂ ವಾಯುವ್ಯ ಭಾಗಗಳಲ್ಲಿ ಹಾಗೂ ಪೂರ್ವ ಹಾಗೂ ಪಶ್ಚಿಮದ ಕೆಲವು ಭಾಗಗಳಲ್ಲಿ ಬೆಸಿಗೆಯ ದಿನದ ತಾಪಮಾನ ಅತಿರೇಕಕ್ಕೆ ತಿರುಗುವ ಸಾಧ್ಯತೆಯಿದೆ, ಹಾಗೂ ಇದು ಕರಾವಳಿ ಭಾಗಕ್ಕೂ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
Related Articles
Advertisement
ಛತ್ತಿಸ್ ಗಡ್ ಮತ್ತು ಒಡಿಶಾ ಭಾಗಗಳಲ್ಲಿ ಸಾಮಾನ್ಯ ತಾಪಮಾನ ಶೇಕಡಾ 75% ಕ್ಕಿಂತ ಹೆಚ್ಚಾಗುವ ಸಂಭವನೀಯತೆ ಇದೆ, ಈ ಭಾಗಗಳಲ್ಲಿ ಪಾದರಸದ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಿರುವ ಕಾರಣದಿಂದಾಗಿ ಈ ಎರಡು ರಾಜ್ಯಗಳಲ್ಲಿ ತಾಪಮಾನವು ಕ್ರಮವಾಗಿ 0.86 ಡಿಗ್ರಿ ಸೆಲ್ಸಿಯಸ್ ಮತ್ತು 0.66 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಹರಿಯಾಣ, ಚಂಡಿಗಢ್ ಹಾಗೂ ದೆಹಲಿ ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 60% ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. ಈ ಎರಡೂ ರಾಜ್ಯಗಳಲ್ಲಿ 0.5 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಓದಿ : ಅನಿವಾಸಿ ಭಾರತೀಯರಲ್ಲಿ ಮೋದಿ ಬಗ್ಗೆ ಮಿಶ್ರ ಅಭಿಪ್ರಾಯ : ಅಧ್ಯಯನ ವರದಿ
ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಸ್ವಲ್ಪ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗುವ ಸಾಧ್ಯತೆಯಿದೆ. “ದಕ್ಷಿಣ ಪರ್ಯಾಯ ದ್ವೀಪ ಮತ್ತು ಪಕ್ಕದ ಮಧ್ಯ ಭಾರತದ ಹೆಚ್ಚಿನ ಉಪ ವಿಭಾಗಗಳಲ್ಲಿ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಹೆಚ್ಚಾಗಿರುತ್ತದೆ” ಎಂದು ಬೇಸಿಗೆಯ ಮುನ್ಸೂಚನೆ (summer forecast) ತಿಳಿಸಿದೆ.
ಹಿಮಾಲಯ, ಈಶಾನ್ಯ ಭಾರತ, ಮಧ್ಯ ಭಾರತದ ಪಶ್ಚಿಮ ಭಾಗ ಮತ್ತು ಪರ್ಯಾಯ ದ್ವೀಪ ಭಾರತದ ದಕ್ಷಿಣ ಭಾಗದ ಬೆಟ್ಟಗಳ ಉದ್ದಕ್ಕೂ ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಕಾಲೋಚಿತ ಕನಿಷ್ಠ (ರಾತ್ರಿ)ತಾಪಮಾನಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹೇಳಿದೆ.
“ಆದಾಗ್ಯೂ, ಪೂರ್ವ ಭಾಗದ ಹೆಚ್ಚಿನ ಉಪವಿಭಾಗಗಳು ಮತ್ತು ದೇಶದ ಉತ್ತರ ಭಾಗದ ಕೆಲವು ಉಪ ವಿಭಾಗಗಳಿಗಿಂತ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆ ತಾಪಮಾನವು ಕಂಡುಬರುತ್ತದೆ” ಎಂದು ಐ ಎಮ್ ಡಿ ಮಾಹಿತಿ ನೀಡಿದೆ.
ಎರಡನೇ ಬೇಸಿಗೆ ಮುನ್ಸೂಚನಾ ವರದಿಯನ್ನು, ಅಂದರೇ ಏಪ್ರಿಲ್ ಹಾಗೂ ಜೂನ್ ನಡುವಿನ ತಾಪಮಾನದ ಬಗೆಗಿನ ಮಾಹಿತಿಯನ್ನು ಏಪ್ರಿಲ್ ನಲ್ಲಿ ನೀಡಲಿದೆ ಎಂದು ಐ ಎಮ್ ಡಿ ತಿಳಿಸಿದೆ.
ಕಳೆದ ಜನವರಿಯಲ್ಲಿ ಕಳೆದ 62 ವರ್ಷಗಳ ಹಿಂದಿನ ಇತಿಹಾಸದಲ್ಲೆ ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಕನಿಷ್ಠ ತಾಪಮಾನ ಕಂಡಿದೆ ಎಂದು ಐ ಎಮ್ ಡಿ ಮಾಹಿತಿ ನೀಡಿದೆ.
ಓದಿ : ಈ ಅಂಗಡಿಯಲ್ಲಿ ಒಂದು ಕಪ್ ಟೀ ಬೆಲೆ ಬರೋಬ್ಬರಿ 1000ರೂ..!