ಬಜಪೆ: ಕಂದಾವರ ಗ್ರಾ.ಪಂ. ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಹೊಟೇಲ್ ಹಾಗೂ ಸರ್ವಿಸ್ ಸ್ಟೇಶನ್‌ನ ದ್ರವ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿಲ್ಲ ಹಾಗೂ ರಸ್ತೆಗೆ ಬೀಡುವ ಬಗ್ಗೆ ಸಾರ್ವಜನಿಕರಿಂದ ಕಂದಾವರ ಗ್ರಾ.ಪಂ.ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗುರುವಾರ ಹೊಟೇಲ್ ಹಾಗೂ ಸರ್ವಿಸ್ ಸ್ಟೇಶನ್‌ಗೆ ಬೀಗ ಜಡಿಯಲಾಯಿತು.
ಗುರುವಾರ ಕಂದಾವರ ಗ್ರಾ.ಪಂ. ಅಧ್ಯಕ್ಷ ಉಮೇಶ್ ಮೂಲ್ಯ, ಪಿಡಿಒ ಯಶವಂತ ಬಿ., ಪಂ. ಸದಸ್ಯರು, ಬಜಪೆ ಪೊಲೀಸರು ಕೂಡ ಗುರುವಾರ ಬೆಳಗ್ಗೆ ಆಗಮಿಸಿದ್ದು, ಹೊಟೇಲ್‌ನ ಪರಿಸರ ದಲ್ಲಿ ದ್ರವ ತ್ಯಾಜ್ಯ ಕೊಳೆತು ನಾರುತ್ತಿದ್ದದ್ದನ್ನು ಕಂಡು ಅದಕ್ಕೆ ಬೀಗ ಜಡಿಯಲಾಯಿತು. ಬಳಿಕ ದ್ರವ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿಲ್ಲದ ಸರ್ವಿಸ್ ಸ್ಟೇಶನ್‌ಗೆ ಬೀಗ ಜಡಿಯಲಾಯಿತು. ವಸತಿ ಸಮುಚ್ಚಯಕ್ಕೆ 15 ದಿನಗಳ ಕಾಲವಕಾಶ ಸುಂಕದಕಟ್ಟೆಯ ವಸತಿ ಸಮುಚ್ಚಯದ ದ್ರವ ತ್ಯಾಜ ಸಮರ್ಪಕವಾಗಿರದೇ ರಸ್ತೆ ಬರುತ್ತಿದ್ದು, ಅವರಿಗೂ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ:- ನಿಷೇಧದ ನಡುವೆಯೂ ಪಟಾಕಿ : ದೆಹಲಿಯಲ್ಲಿ 281 ಜನರ ಬಂಧನ
ಅವರು ಪಂಚಾಯತ್‌ಗೆ ಬಂದು ಕಾಲಾವಕಾಶ ಕೇಳಿದ ಕಾರಣ ಅವರಿಗೆ ಅದನ್ನು ಸರಿಪಡಿಸಲು 15 ದಿನಗಳ ಕಾಲವಕಾಶ ನೀಡಲಾಗಿದೆ ಎಂದು ಪಂ. ಅಧ್ಯಕ್ಷ ಉಮೇಶ್ ಮೂಲ್ಯ ಹೇಳಿದ್ದಾರೆ. ಸಾರ್ವಜನಿಕವಾಗಿ ರಸ್ತೆಗೆ ದ್ರವ ತ್ಯಾಜ್ಯ ಬಿಡುತ್ತಿದ್ದಾರೆ ಎಂದು ಪಂ.ಗೆ ದೂರು ಬಂದಿತ್ತು. ತಿಂಗಳ ಹಿಂದೆ ಖುದ್ದಾಗಿ ಭೇಟಿ ಮಾಡಿ ಮೌಖೀಕವಾಗಿ 2 ಸಲ ಎಚ್ಚರಿಕೆ ಮಾಡಿ ಬಂದಿದ್ದೇವೆ. ಬಳಿಕ ಲಿಖೀತವಾಗಿಯೂ ನೀಡ ಲಾಗಿದೆ. ಅನಂತರ ತುರ್ತು ಸಭೆ ಕರೆದು ಪರವಾನಿಗೆ ರದ್ದು ಮಾಡಲಾಗಿದೆ.
ಬಳಿಕವೂ ದ್ರವತ್ಯಾಜ್ಯ ರಸ್ತೆಯಲ್ಲಿಯೇ ಹೋಗುತ್ತಿದ್ದ ಬಗ್ಗೆ ದೂರುಗಳು ಬರುತ್ತಿರುವ ಕಾರಣ, ದ್ರವ ತ್ಯಾಜ್ಯ ನಿರ್ವಹಣೆ ಸಮರ್ಪಕ ವಾಗಿಲ್ಲ. 2 ಅಂಗಡಿಗಳು ಪರವಾನಿಗೆ ರಹಿತವಾಗಿ ವ್ಯಾಪಾರ ನಡೆಸುತ್ತಿವೆ. ಗುರುವಾರ ಪಂ. ಅಧ್ಯಕ್ಷರು, ನಾನು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಅಂಗಡಿಗಳಿಗೆ ಬೀಗ ಜಡಿಯಲಾಗಿದೆ ಎಂದು ಪಿಡಿಒ ಯಶವಂತ ಬಿ. ಹೇಳಿದ್ದಾರೆ.