Advertisement

ವ್ಯಾಲೆಟ್‌ ಪಾರ್ಕಿಂಗ್‌: ವಾಹನ ಕಳವಾದರೆ ಹೊಟೇಲ್‌ ಹೊಣೆ

09:33 AM Nov 19, 2019 | Team Udayavani |

ಹೊಸದಿಲ್ಲಿ: ಹೊಟೇಲ್‌ಗಳ ವ್ಯಾಲೆಟ್‌ ಪಾರ್ಕಿಂಗ್‌ನಲ್ಲಿ ನಿಲ್ಲಿಸ ಲಾದ ಗ್ರಾಹಕರ ವಾಹನಗಳು ಕಳವಾದರೆ “ಮಾಲಕರೇ ಜವಾಬ್ದಾರರು’ ಎಂಬ ನೆಪ ಹೇಳಿ ಪರಿಹಾರ ನೀಡಲು ಹೊಟೇಲ್‌ಗಳು ನಿರಾಕರಿಸುವಂತಿಲ್ಲ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ.

Advertisement

ತಮ್ಮ ವ್ಯಾಪ್ತಿಯಲ್ಲಿ ಪಾರ್ಕ್‌ ಮಾಡ ಲಾದ ವಾಹನಗಳ ಕಳವು ಅಥವಾ ಹಾನಿಗೆ ತಮ್ಮ ನಿರ್ಲಕ್ಷ್ಯ ಕಾರಣವಲ್ಲ ಎಂಬುದಕ್ಕೆ ಹೊಟೇಲ್‌ ಮಾಲಕರು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ಮಾತ್ರ ಅವರು ವಿನಾಯಿತಿ ಪಡೆಯು ತ್ತಾರೆ ಎಂದೂ ಕೋರ್ಟ್‌ ಹೇಳಿದೆ.

ವಾಹನ ಮಾಲಕನು ಬೇರೆ ಕಡೆ ವಾಹನ ಪಾರ್ಕ್‌ ಮಾಡಿ ದರೆ ಅದರ ಸಂಪೂರ್ಣ ಜವಾಬ್ದಾರಿ ಆತನದ್ದೇ ಆಗಿರು ತ್ತದೆ. ಆದರೆ ಹೊಟೇಲ್‌ಗ‌ಳ ವ್ಯಾಲೆಟ್‌ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿ ಸಿದ್ದೇ ಆದರೆ ಅಥವಾ ವಾಹನವನ್ನು ಹೊಟೇಲ್‌ ಸಿಬಂದಿಯ ಕೈಗೆ ಕೊಟ್ಟರೆ ಅದರ ಸುರಕ್ಷತೆಯ ಹೊಣೆ ಹೊಟೇಲ್‌ ನದ್ದಾಗಿರುತ್ತದೆ ಎಂದು ನ್ಯಾ| ಎಂ. ಎಂ. ಶಾಂತನಗೌಡರ್‌ ಮತ್ತು ನ್ಯಾ| ಅಜಯ್‌ ರಸ್ತೋಗಿ ಅವರನ್ನೊಳ ಗೊಂಡ ನ್ಯಾಯಪೀಠ ಹೇಳಿದೆ.

ಪಂಚತಾರಾ ಹೊಟೇಲ್‌ಗೆ ತೆರಳಿದ್ದ ಗ್ರಾಹಕರೊಬ್ಬರು ವ್ಯಾಲೆಟ್‌ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next